ನಾವು ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಬ್ರಿಟಿಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಈ ದಿನ ಇಡೀ ದೇಶದಲ್ಲಿ ರಾಷ್ಟಿçÃಯ ರಜಾ ದಿನವಾಗಿದೆ. ಇದು ಸ್ವಾತಂತ್ರö್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ.

ಆಗಸ್ಟ್ ೧೫, ೧೯೪೭ಕ್ಕೆ ಮೊದಲು ಬ್ರಿಟಿಷ್ ಸರಕಾರ ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ಆಳಿತು. ಸ್ವಾತಂತ್ರö್ಯದ ನಂತರ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಭಾರತದ ಧ್ವಜವನ್ನು ಹಾರಿಸಿದರು.

- ಎಸ್. ಆಯುಷ್ ಮೌರ್ಯ, ೮ನೇ ತರಗತಿ, ಕೊಡಗು ವಿದ್ಯಾಲಯ, ಮಡಿಕೇರಿ.ಉದಯಿಸಲಿ ಮತ್ತೊಮ್ಮೆ ಸ್ವಾತಂತ್ರö್ಯದ ಸೂರ್ಯ, ನೆನಪಿಸುತ್ತಾ ಸಂಗ್ರಾಮದಿ ಮಡಿದವರ ಶೌರ್ಯ, ಭರತ ಭೂಮಿ ಉದ್ದಗಲಕ್ಕೂ ಹಾರಲಿ ತಿರಂಗ, ಮನೆ - ಮನದಲಿ ಪುಟುದೇಳಲಿ ದೇಶಭಕ್ತಿಯ ತರಂಗ. ಗೆಲ್ಲಲು ಬ್ರಿಟಿಷರು ಮಾಡಿದರು ಕುತಂತ್ರ, ಭಾರತೀಯರದು ಅದನ್ನು ಮೀರಿದ ಮಂತ್ರ, ಹೆಣೆದರು ಆಂಗ್ಲರ ವಿರುದ್ಧ ಪ್ರತಿತಂತ್ರ. ಸ್ವಾತಂತ್ರö್ಯದ ಕನಸುಗಾರರು ಸ್ವಾತಂತ್ರö್ಯವ ನಮಗೆ ಧಾರೆಯನೆರೆದರು.

ಅದನ್ನು ನಾವು ಉಳಿಸೋಣ, ಉಳಿಸಿ ಮುಂದಕ್ಕೆ ಬೆಳೆಸೋಣ. ಬೀಗುತ್ತಿರು ನೀನು ಉಸಿರಿರುವ ತನಕ ಭಾರತೀಯನೆಂದು, ಕೂಗುತ್ತಿರು ನೀನು ಗರ್ವದಿಂದ ‘ಜೈ ಭಾರತಾಂಬೆಯೆAದು’ ಹೇ ತಾಯಿ ಭಾರತಿ ನಿನಗೆ ನಮ್ಮಯ ಹೆಮ್ಮೆಯ ನಮನ ಬೆಳಗಲಿ ನಿನ್ನಯ ಕೀರುತಿ, ಹೀಗೆ ಸದಾ ಹರುಷದಿ.

ಜೈ ಹಿಂದ್

- ಪಿ.ಪಿ. ಗದಿನ್ ಬೋಪಣ್ಣ, ೫ನೇ ತರಗತಿ, ಕಾವೇರಿ ಶಾಲೆ.ರಾಷ್ಟçದ ಪ್ರತಿಯೊಬ್ಬ ನಾಗರಿಕರಲ್ಲೂ ರಾಷ್ಟçದ ಬಗ್ಗೆ ಪ್ರೀತಿ, ಗೌರವ ಇರಬೇಕು. ನಮ್ಮ ದೇಶದ ಮಹಾನ್ ವ್ಯಕ್ತಿಗಳು ಜನರ ಮನಸ್ಸಿನಲ್ಲಿ ದೇಶಭಕ್ತಿ, ದೇಶ ಪ್ರೇಮದ ಭಾವನೆಯನ್ನು ತುಂಬಿದ್ದಾರೆ. ಈ ಮಹಾನ್ ವ್ಯಕ್ತಿಗಳಲ್ಲಿ ಮುಖ್ಯವಾಗಿ ಮಹಾತ್ಮ ಗಾಂಧಿ, ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಮಹಾನ್ ನಾಯಕರ ಹೆಸರುಗಳು ನೆನಪಿಗೆ ಬರುತ್ತದೆ. ಅವರು ಈ ರಾಷ್ಟç ನಮ್ಮದು, ನಾವೇ ಈ ರಾಷ್ಟçದ ನಿಜವಾದ ಪ್ರಜೆಗಳು ಎಂಬ ಸಂದೇಶವನ್ನು ಜನರಲ್ಲಿ ಬಿತ್ತರಿಸಿದರು ಮತ್ತು ಇದರಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿ ಬ್ರಿಟಿಷರು ನಮ್ಮ ದೇಶವನ್ನು ತೊರೆಯಬೇಕಾಯಿತು. ಹಾಗೆಯೇ ಇಂದಿನ ಪೀಳಿಗೆಯವರು ಸಹ ನಮ್ಮ ದೇಶದ ಮೇಲೆ ಪ್ರೀತಿ, ಗೌರವ ಇಟ್ಟು ದೇಶಕ್ಕಾಗಿ ಕೆಲಸ ಮಾಡಬೇಕು. ದೇಶ ಪ್ರಗತಿಯಾದರೆ ನಾವು ಕೂಡ ಒಳ್ಳೆಯ ಜೀವನವನ್ನು ನಡೆಸಬಹುದು.

- ದಿಷನ್ ಪೊನ್ನಪ್ಪ, ೫ನೇ ತರಗತಿ, ಮಡಿಕೇರಿ.ಮತ್ತೆ ಹುಟ್ಟಿ ಬರಲಿ

ಮೊದಲಿಗೆ ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ತಮ್ಮ ಜೀವವನ್ನೇ ಮುಡಿಪಾಗಿಟ್ಟ ವೀರ ಯೋಧರಿಗೆ ನನ್ನ ಅನಂತ ಅನಂತ ಪ್ರಣಾಮಗಳು. ನಮ್ಮ ದೇಶದಲ್ಲಿ ನಾನಾ ರೀತಿಯ ಜಾತಿ, ಧರ್ಮ, ಸಂಸ್ಕೃತಿವುಳ್ಳ ಜನರಿದ್ದಾರೆ. ನಮ್ಮ ದೇಶದಲ್ಲಿ ವಿಭಿನ್ನ ರೀತಿಯ ಜನರು ವಾಸಿಸುತ್ತಿರುವುದು ಧನ್ಯ. ಇದಕ್ಕೆ ಕಾರಣ ನಮ್ಮ ದೇಶ ಕಾಯುವ ವೀರ ಯೋಧರು. ಇದಕ್ಕೆ ನನ್ನ ಪುಟ್ಟ ಹೃದಯ ಹೇಳುತ್ತಿದೆ ಈ ನೆಲದಲ್ಲಿ ಹುಟ್ಟಿದ ನಾನು ಧನ್ಯ. ಮೂರು ಬಣ್ಣಗಳಿಂದ ಕೂಡಿದ ನಮ್ಮ ರಾಷ್ಟಿçÃಯ ಪ್ರತಿಯೊಂದು ಬಣ್ಣದ ಪ್ರತ್ಯೇಕವನ್ನು ತೋರಿಸುತ್ತದೆ. ಮುಂದಿನ ಜನ್ಮದಲ್ಲಿ ನಮ್ಮ ಭಾರತಾಂಬೆಯ ನಾಡಿಗಾಗಿ ವೀರ ಮರಣವನ್ನು ಹೊಂದಿದ ಯೋಧರು ಪುನಃ ಹುಟ್ಟಿ ಬರಲಿ ಎಂದೂ ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಜೈ ಹಿಂದ್

- ಸಿ.ವೈ. ದಿವಿತ್, ೬ನೇ ತರಗತಿ, ಸಂತ ಮೈಕಲರ ಶಾಲೆ, ಮಡಿಕೇರಿ.ರಾಷ್ಟç ಪ್ರೇಮ ಬದುಕಿನಲ್ಲೂ ಇರಬೇಕು

ರಾಷ್ಟç ಪ್ರೇಮ, ದೇಶ ಪ್ರೇಮ ಎಂಬುದು ಕೇವಲ ಮಾತುಗಳಲ್ಲಿ, ಹಾಡುಗಳಲ್ಲಿ ಮಾತ್ರವಲ್ಲ ನಮ್ಮ ದೈನಂದಿನ ಬದುಕಿನಲ್ಲಿಯೂ ಇರಬೇಕಾಗಿದೆ. ಇಂದು ನಾವು ನುಡಿಯಲ್ಲಿ ಮಾತ್ರ ದೇಶಭಕ್ತಿಯನ್ನು ಅಳೆಯುತ್ತಿದ್ದೇವೆ.

- ಡಿ.ಕೆ. ಚಲನ, ೮ನೇ ತರಗತಿ, ಉದಯ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಗೇರಿ ನಾವೆಲ್ಲ ಭಾರತೀಯರು

ಭಾರತದ ಗಡಿ ಭಾಗಗಳಲ್ಲಿ, ಆಕಾಶದಲ್ಲಿ, ಸಮುದ್ರದಲ್ಲಿ ನಮ್ಮ ದೇಶವನ್ನು ಭೂಸೇನೆ, ವಾಯುಸೇನೆ, ನೌಕಾಸೇನೆಯ ಸೈನಿಕರು ನಮ್ಮ ದೇಶವನ್ನು ಕಾಯುತ್ತಿದ್ದಾರೆ ಹಾಗೂ ಈ ದೇಶದ ರಕ್ಷಣೆಗಾಗಿ ಹುತಾತ್ಮರಾದವರನ್ನು ಎಂದೆAದಿಗೂ ಮರೆಯಬಾರದು. ದೇಶ ರಕ್ಷಣೆಯನ್ನು ಹಾಗೂ ದೇಶಾಭಿಮಾನವನ್ನು ನಮ್ಮ ಜೀವನದಲ್ಲಿ ಮೂಡಿಸಿಕೊಳ್ಳಬೇಕು. ಬ್ರಿಟಿಷರು ೧೬೦೦ ರಲ್ಲಿ ವ್ಯಾಪಾರಕ್ಕಾಗಿ ಬಂದವರು. ನಮ್ಮ ದೇಶದಲ್ಲಿ ಒಡೆದು ಆಳುವ ರೀತಿಯಲ್ಲಿ ನಮ್ಮ ದೇಶವನ್ನು ಆಳ್ವಿಕೆ ಮಾಡಲು ತೊಡಗಿದರು ಹಾಗೂ ಇವರು ನಮ್ಮನ್ನು ತುಂಬಾ ಹಿಂಸಿಸಿದರು. ಆದರೆ ಇದನ್ನು ಕೂಡ ಸಹಿಸಿಕೊಂಡರು. ಆದರೆ ನಮ್ಮ ರೈತರನ್ನು ಪದ್ಧತಿಗಳ ಹೆಸರಿನಲ್ಲಿ ಹಿಂಸಿಸಿದರು. ಹೀಗಾಗಿ ನಮ್ಮ ದೇಶದ ಜನರೆಲ್ಲ ಒಂದುಗೂಡಿ ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದರು. ಈ ಹೋರಾಟದಲ್ಲಿ ಎಷ್ಟೋ ಜನರು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರ ಫಲವಾಗಿ ನಮಗೆ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದೊರೆಕಿತು. ಇವರು ಒಬ್ಬಬ್ಬರು ಹೋರಾಡಿದರೆ ಸ್ವಾತಂತ್ರö್ಯ ಸಿಗಲು ಸಾಧ್ಯವಿರಲಿಲ್ಲ. ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು. ನಾವೆಲ್ಲ ಭಾರತೀಯರು. ಒಗ್ಗಟ್ಟಿನಲ್ಲಿ ಬಲವಿದೆ.

ಜೈ ಭಾರತ ಮಾತೆ

- ಎಸ್. ಕೌಶಲ್ಯ, ೮ನೇ ತರಗತಿ, ಸರಕಾರಿ ಪ್ರೌಢಶಾಲೆ, ಮಾಲ್ದಾರೆ.ಸುಂದರವಾದ ದೇಶ

ಹಿಂದೂಸ್ಥಾನ ನಮ್ಮ ದೇಶ. ಜಗತ್ತಿನ ಅತ್ಯಂತ ಸುಂದರವಾದ ದೇಶ ನಮ್ಮದು. ಕೊರೆಯುವ ಚಳಿ ಮತ್ತು ಸುಡುವ ಬಿಸಿಲನ್ನು ಲೆಕ್ಕಿಸದೇ ದೇಶಕ್ಕಾಗಿ ದುಡಿದು ನಮ್ಮನ್ನು ಕಾಪಾಡುವ ಸೈನಿಕರಿಗೆ ದೊಡ್ಡ ಸಲಾಮ್. ಹಾಗೆಯೇ ಭೂ ತಾಯಿಯ ನಂಬಿ ವ್ಯವಸಾಯ ಮಾಡುವ ‘ಅನ್ನದಾತ’ನಿಗೆ ಶತ ಶತ ವಂದನೆಗಳು. ಮಹಾತ್ಮ ಗಾಂಧಿಯವರು ನಮ್ಮ ದೇಶದ ಹೆಮ್ಮೆ. ಅಹಿಂಸಾ ಚಳವಳಿಯ ರುವಾರಿ ಮತ್ತು ಜಗತ್ತಿನ ಆದರ್ಶ ಪುರುಷ ಎನಿಸಿಕೊಂಡಿದ್ದಾರೆ. ಸೋದರ, ಸೋದರಿಯರೇ ಎಂದು ಭಾಷಣ ಮಾಡಿ ಸ್ವೀಕಾರದ ಪಾಠವನ್ನು ವಿಶ್ವಕ್ಕೆ ಸಾರಿದ ವಿವೇಕಾನಂದರವರು ಜಗತ್ತು ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದರು. ‘ಭಾರತೀಯರು ತಮ್ಮ ಪರಮಾಧಿಕಾರವನ್ನು ಬ್ರಿಟಿಷ್ ಸಾಮ್ರಾಜ್ಯದ ಹೆಸರಿನಲ್ಲಿ ಮಾತ್ರ ಸಾಧಿಸಿದ್ದಾರೆ. ಆದರೆ ತಮ್ಮದೆ ಆದ ಮೇಲೆ ಅಲ್ಲ’ ಎಂದು ಹೇಳಿದ ಬ್ರಿಟಿಷರಿಗೆ ನಮ್ಮ ದೇಶದ ಹೋರಾಟಗಾರರು ತಕ್ಕ ಪಾಠವನ್ನು ಕಲಿಸುವುದರ ಮೂಲಕ ಭಾರತ ಮಾತೆಯ ಶಕ್ತಿಯನ್ನು ತೋರಿಸಿದ್ದಾರೆ.

ಜೈ ಹಿಂದ್

- ತನ್ವಿ ಜಿತೇಂದ್ರ, ೧೦ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.ಹಾರಿಸೋಣ ಕೀರ್ತಿ ಪತಾಕೆ

ನಮಗೆ ದಕ್ಕಿರುವ ಸ್ವಾತಂತ್ರö್ಯ ವನ್ನು ಸಾಧ್ಯವಾಗಿಸಿದವರನ್ನು ಇಂದು ನಾವು ಗೌರವಿಸೋಣ. ಸ್ವಾತಂತ್ರö್ಯವನ್ನು ಪಡೆಯುವುದು ಕಷ್ಟ. ಆದರೆ ಅಷ್ಟು ಹೋರಾಟ ನಡೆಸಿ ಸಿಕ್ಕಿದ ಸ್ವಾತಂತ್ರö್ಯವನ್ನು ಅನುಭವಿಸಲು ನಾವೆಲ್ಲಾ ಆಶೀರ್ವದಿಸಲ್ಪಟ್ಟಿದ್ದೇವೆ. ನಮ್ಮ ದೇಶಕ್ಕೆ ದೊರೆತ ಸ್ವಾತಂತ್ರö್ಯ ಎಂಬ ದೊಡ್ಡ ಪವಾಡವನ್ನು ಸಂಭ್ರಮಿಸೋಣ. ಹಾರಿಸೋಣ ಮುಗಿಲೆತ್ತರಕ್ಕೆ ನಮ್ಮ ಭಾರತ ಮಾತೆಯ ಪತಾಕೆಯನ್ನು ನಮ್ಮ ತಾಯ್ನಾಡಿನ ವೀರರ ತ್ಯಾಗ ಬಲಿದಾನದಿಂದ ನಾವಿಂದು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ ಸ್ವಾತಂತ್ರö್ಯ ದಿನಾಚರಣೆಯನ್ನು.

- ಹೆಚ್.ಎಂ. ರಮ್ಯಾ, ೮ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್‌ಬೈಲ್‌ರಾಷ್ಟç ಧ್ವಜದ ಬಗ್ಗೆ ಹೆಮ್ಮೆ

೧೯೪೭ ರ ಆಗಸ್ಟ್ ೧೫ ರಂದು ಭಾರತ ಸ್ವತಂತ್ರ ವಾಯಿತು. ನಮ್ಮ ತ್ರಿವರ್ಣ ಧ್ವಜ ಹಲವು ವಿಶೇಷತೆ ಗಳಿಂದ ಕೂಡಿದೆ. ನಮ್ಮ ರಾಷ್ಟçಧ್ವಜ ತುಂಬಾ ಸುಂದರವಾಗಿದೆ. ಈ ಧ್ವಜವನ್ನು ಪಿಂಗಳಿ ವೆಂಕಯ್ಯ ಅವರು ರೂಪಿಸಿದ್ದಾರೆ. ಧ್ವಜದಲ್ಲಿ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ೨೪ ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ನನಗೆ ನನ್ನ ರಾಷ್ಟçಧ್ವಜದ ಬಗ್ಗೆ ತುಂಬಾ ಹೆಮ್ಮೆ ಇದೆ. ಹಾಗೆಯೇ ಗೌರವ ಕೊಡುತ್ತೇನೆ.

- ಮುಕ್ಕಾಟಿ ಪುಲ್ತಸ್ಯ, ೬ನೇ ತರಗತಿ, ಕೊಡಗು ವಿದ್ಯಾಲಯ, ಮಡಿಕೇರಿ.ರಾಷ್ಟçದ ಹೆಮ್ಮೆಯ ಸಂಕೇತ

ಭಾರತದ ರಾಷ್ಟçಧ್ವಜವು ಮೂರು ಬಣ್ಣಗಳನ್ನು ಹೊಂದಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ, ಹಸಿರು. ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಬೆಳವಣಿಗೆ, ನಂಬಿಕೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ಧ್ವಜದ ಮಧ್ಯದಲ್ಲಿ ೨೪ ಅಡ್ಡ ಗೆರೆ ನೀಲಿ ಬಣ್ಣದ ಅಶೋಕ ಚಕ್ರವು ಇದೆ. ಅಶೋಕ ಚಕ್ರವು ಧರ್ಮ ಚಕ್ರದ ಚಿತ್ರಣವಾಗಿದೆ. ಇವನ್ನು ಪಿಂಗಳಿ ವೆಂಕಯ್ಯ ಅವರು ಸ್ವರಾಜ್ಯಧ್ವಜ ಎಂದು ವಿನ್ಯಾಸಗೊಳಿಸಿದರು. ರಾಷ್ಟçಧ್ವಜವನ್ನು ೨೨ ಜುಲೈ ೧೯೪೭ ರಂದು ಅಂಗೀಕರಿಸಲಾಯಿತು. ಇದು ನಮ್ಮ ಸ್ವಾತಂತ್ರö್ಯ ರಾಷ್ಟಿçÃಯ ಹೆಮ್ಮೆಯ ಸಂಕೇತವಾಗಿದೆ.ತ್ಯಾಗದ ನೆನಪಿನ ದಿನ

ನಾವು ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಬ್ರಿಟಿಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಈ ದಿನ ಇಡೀ ದೇಶದಲ್ಲಿ ರಾಷ್ಟಿçÃಯ ರಜಾ ದಿನವಾಗಿದೆ. ಇದು ಸ್ವಾತಂತ್ರö್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ. ಆಗಸ್ಟ್ ೧೫, ೧೯೪೭ಕ್ಕೆ ಮೊದಲು ಬ್ರಿಟಿಷ್ ಸರಕಾರ ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ಆಳಿತು. ಸ್ವಾತಂತ್ರö್ಯದ ನಂತರ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಭಾರತದ ಧ್ವಜವನ್ನು ಹಾರಿಸಿದರು. ಪ್ರಧಾನಮಂತ್ರಿ ಭಾರತೀಯ ಧ್ವಜವನ್ನು ಕೆಂಪುಕೋಟೆಯ ಮೇಲೆ ಹಾರಿಸಿದ್ದರಿಂದ ಈ ಸಂಪ್ರದಾಯ ಮುಂದು ವರೆದಿದೆ. ಭಾರತೀಯ ರಕ್ಷಣಾ ಸೇವೆಗಳು ಆ ದಿನದಂದು ಮೆರವಣಿಗೆ ನಡೆಸುತ್ತದೆ. ದೂರದರ್ಶನವು ದೆಹಲಿ ಕಾರ್ಯಕ್ರಮವನ್ನು ಎಲ್ಲರೂ ವೀಕ್ಷಿಸುವಂತೆ ನೇರ ಪ್ರಸಾರ ಮಾಡುತ್ತದೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಭೆಯಲ್ಲಿ ಸೇರಿದ ಅನೇಕ ಮುಖ್ಯಸ್ಥರು ಸೇರಿ ಈ ದಿನದ ಧ್ವಜಾರೋಹಣ, ಅದರೊಟ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.

- ಪಿ.ಎಂ. ದೀಕ್ಷಿತ, ೭ನೇ ತರಗತಿ, ಸರಕಾರಿ ಹಿರಿಯ ಪ್ರೌಢಶಾಲೆ, ಮದಲಾಪುರ.ಶಾಂತಿ ತೋರಿಸುವ ರಾಷ್ಟç

ರಾಷ್ಟçಧ್ವಜ ನನ್ನ ಮತ್ತು ನಮ್ಮ ದೇಶದ ಹೆಮ್ಮೆ. ರಾಷ್ಟç ಧ್ವಜವನ್ನು ನಮಗೆ ಸ್ವಾತಂತ್ರö್ಯ ಸಿಕ್ಕಿದ ದಿನವಾದ ಆಗಸ್ಟ್ ೧೫ ರಂದು ಹಾರಿಸುತ್ತೇವೆ ಮತ್ತು ಇದು ಘನತೆಯನ್ನು ಎತ್ತಿ ತೋರಿಸುತ್ತದೆ. ರಾಷ್ಟçಧ್ವಜವನ್ನು ಸ್ವಾತಂತ್ರö್ಯದ ಅಮೃತ ಮಹೋತ್ಸವ ಸಮಯದಲ್ಲಿ ನಾನು ನನ್ನ ಮನೆಯ ಮೇಲೆ ಗೌರವಪೂರ್ವಕವಾಗಿ ಹಾರಿಸಿದ್ದೆ ಮತ್ತು ಸ್ವಾತಂತ್ರö್ಯವಾಗಿ ರಾರಾಜಿಸುತ್ತಿತ್ತು. ಕಲಹ ಅಳಿಸಿ ಶಾಂತಿ ತೋರಿಸುವ ರಾಷ್ಟç ನಮ್ಮದು. ತ್ಯಾಗ, ಪರಿತ್ಯಾಗಕ್ಕೆ ಹೆಸರಾದ ರಾಷ್ಟç ನಮ್ಮದು. ಸತ್ಯ ಧರ್ಮಗಳನ್ನು ಕಂಡ ದೇಶ ನಮ್ಮದು. ರಾಷ್ಟçಧ್ವಜದ ಬಣ್ಣಗಳೇ ತಿಳಿಸುತ್ತವೆ. ನಮ್ಮ ದೇಶದ ತ್ಯಾಗ, ಶಾಂತಿ, ಧರ್ಮ, ಸ್ವಚ್ಛತೆ, ಸಮೃದ್ಧಿ, ಧೈರ್ಯ ಮತ್ತು ಅಮರತ್ವವನ್ನು ಹೊಂದಿದ ಭವ್ಯ ಭಾರತ ನನ್ನದೆಂದು. ನಾನೂ ನನ್ನ ದೇಶದ ಗೌರವವನ್ನು ಉತ್ತುಂಗಕ್ಕೇರಿಸಲು ಕೈಜೋಡಿಸುತ್ತೇನೆ. ಜೈ ಭಾರತ ಮಾತಾ.

- ಕೆ.ಎಸ್. ಚಾರ್ವಿ ಪ್ರಸಾದ್, ೫ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.