ಸೋಮವಾರ ಪೇಟೆ, ಆ. ೧೫: ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ಯಾಜ್ಯಗಳು ತುಂಬಿರುವ ಮೂಟೆಗಳ ಎದುರೇ ಧ್ವಜಾರೋಹಣ ಮಾಡುವ ಮೂಲಕ ಗ್ರಾ.ಪಂ. ಆಡಳಿತವು ದೇಶಪ್ರೇಮ(!)

ಮೆರೆದಿದ್ದು, ಸ್ವಚ್ಛತೆ ಬಯಸುವ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದ ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಗ್ರಾ.ಪಂ.ನಿAದ ಹಣ ಸಂದಾಯವಾಗದ ಹಿನ್ನೆಲೆ ತ್ಯಾಜ್ಯ ಸಂಗ್ರಹಣೆ ಸ್ಥಗಿತಗೊಂಡಿದ್ದು, ಇದುವರೆಗೆ ಸಂಗ್ರಹವಾದ ತ್ಯಾಜ್ಯಗಳನ್ನು ಮೂಟೆಗಳಲ್ಲಿ ತುಂಬಿಸಿ ಗ್ರಾ.ಪಂ. ಹಳೆ ಕಟ್ಟಡದ ಮುಂಭಾಗವೇ ಶೇಖರಿಸಿಡಲಾಗಿದೆ.

ಇದೇ ಕಟ್ಟಡದ ಪಕ್ಕದಲ್ಲಿ ಧ್ವಜಸ್ತಂಭವಿದ್ದು, ಸ್ವಾತಂತ್ರೊö್ಯ Ãತ್ಸವ ಸಂದರ್ಭ ಕನಿಷ್ಟ ತ್ಯಾಜ್ಯಗಳ ಮೂಟೆಗಳನ್ನು ವಿಲೇವಾರಿ ಮಾಡಿ ಸ್ವಚ್ಛ ಪರಿಸರದಲ್ಲಿ ಧ್ವಜಾರೋಹಣ ನೆರವೇರಿಸಲು ಮುಂದಾಗದ ಗ್ರಾ.ಪಂ. ಅಧಿಕಾರಿ ವರ್ಗ, ಕಸದ ಮೂಟೆಗಳೆದುರೇ ರಾಷ್ಟçಧ್ವಜವನ್ನು ಆರೋಹಣ ಮಾಡಿದೆ. ಈ ಕ್ರಮಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿ ಸಿದ್ದು, ಅಧಿಕಾರಿಗಳ ಅಸಡ್ಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.