ಮಡಿಕೇರಿ, ಆ. ೧೬ : ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿ ಯೋರ್ವರನ್ನು ರಿವ್ವಾಲ್ವರ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ. ಮರಗೋಡು ಗ್ರಾಮ ನಿವಾಸಿ ಮುಂಡೋಡಿ ನಾಣಯ್ಯ (ನಂದ) ಶಿಕ್ಷೆಗೊಳಗಾಗಿರುವ ಆರೋಪಿ.

ಕಳೆದ ತಾ. ೧-೧೦-೨೦೧೮ರಂದು ಸಂಜೆ ೬.೩೦ ಗಂಟೆ ವೇಳೆಗೆ ಮರಗೋಡು ವಿಜಯ ಬ್ಯಾಂಕ್ ಬಳಿ ಇರುವ ಕ್ಯಾಂಟೀನ್ ಬಳಿ ನಾಣಯ್ಯ ಹಾಗೂ ಕಾನಡ್ಕ ತಿಲಕ್‌ರಾಜ್ ಎಂಬವರುಗಳ ನಡುವೆ ಮಾತಿನ ಚಕಮಕಿ ನಡೆದು ನಂದ ತನ್ನ ಬಳಿಯಿದ್ದ ರಿವ್ವಾಲ್ವರ್‌ನಿಂದ ತಿಲಕ್‌ರಾಜ್‌ನ ಎದೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ಪ್ರಕರಣದ ಸಂಬAಧ ವಿಚಾರಣೆ ನಡೆಸಿದ ಇಲ್ಲಿನ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಘಟನೆ ವಿವರ

ಕಳೆದ ೨೦೧೫ರಲ್ಲಿ ನಡೆದ ಮರಗೋಡು ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಕಾಂಗ್ರೆಸ್‌ನಿAದ ನಂದ ಹಾಗೂ ಬಿಜೆಪಿಯಿಂದ ತಿಲಕ್ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಿಲಕ್ ನಾಲ್ಕು ಮತಗಳ ಅಂತರದಲ್ಲಿ ನಂದ ವಿರುದ್ಧ ಸೋಲನುಭವಿಸಿದ್ದರು. ನಂತರ ೨೦೧೮ರ ವಿಧಾನಸಭಾ ಚುನಾವಣೆ ಸಂದರ್ಭ ನಂದ ಜೆಡಿಎಸ್ ಪರ ಹಾಗೂ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಯಾಗಿದ್ದ ತಿಲಕ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಇವರಿಬ್ಬರ ನಡುವೆ ಮಾತುಕತೆ ನಡೆದು ಪರಸ್ಪರ ತಳ್ಳಾಟ ಕೂಡ ನಡೆದಿತ್ತು.

ತಾ. ೧-೧೦-೧೮ರಂದು ಸಂಜೆ ವಿಜಯ ಬ್ಯಾಂಕ್ ಬಳಿ ಇರುವ ಕ್ಯಾಂಟೀನ್‌ನ ಪ್ಯಾಸೇಜ್‌ನಲ್ಲಿ

(ಮೊದಲ ಪುಟದಿಂದ) ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್, ಮುಕ್ಕಾಟಿ ಚಿದಂಬರ, ಮಗೇರನ ಬೆಳ್ಯಪ್ಪ ಇತರರು ಗೌಡ ಸಮಾಜದ ಮಹಾಸಭೆ ಬಗ್ಗೆ ಮಾತನಾಡುತ್ತಾ ನಿಂತಿದ್ದಾಗ ಅಲ್ಲಿಗೆ ನಂದ ಬಂದು ಸೇರಿಕೊಳ್ಳುತ್ತಾನೆ. ಈ ಸಂದರ್ಭ ನಂದ ಚಿದಂಬರ ಅವರನ್ನು ಪಕ್ಕಕ್ಕೆ ಕರೆದು ಮಾತನಾಡುತ್ತಿದ್ದಾಗ ಅದಾಗ ತಾನೇ ಅಲ್ಲಿಗೆ ಬಂದ ತಿಲಕ್ ರಾಜ್ ನಂದನನ್ನು ಕುರಿತು ‘ಏನ್ ನಂದ ಬಾವ ನನ್ನ ಬಗ್ಗೆ ಏನೋ ಮಾತಾಡುತ್ತಿರುವಂತಿದೆ’ ಎಂದು ಕೇಳಿ ಹೆಜ್ಜೆ ಮುಂದಿಡುತ್ತಿದ್ದAತೆಯೇ ‘ನನ್ನ ಬಗ್ಗೆ ಏನೇನೋ ಹೇಳುವ ನಿನ್ನನ್ನು ಇನ್ನು ಮುಂದೆ ಹೇಳದಂತೆ ಮಾಡುತ್ತೇನೆ’ ಎಂದು ತನ್ನ ಜೇಬಿನಲ್ಲಿದ್ದ ರಿವ್ವಾಲ್ವರ್‌ನಿಂದ ಎದೆಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಸ್ನೇಹಿತರು ಘಾಸಿಗೊಂಡ ತಿಲಕ್‌ನನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಸಾವನ್ನಪ್ಪಿದ್ದರು.

ಇತ್ತ ಗುಂಡು ಹಾರಿಸಿದ್ದ ಆರೋಪಿ ನಂದ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿದ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ನೇತೃತ್ವದ ತಂಡ ಕೃತ್ಯ ನಡೆದ ಆರು ಗಂಟೆಯ ಅವಧಿಯಲ್ಲಿ ಮಡಿಕೇರಿ ಬಳಿ ಬಂಧಿಸಿದ್ದರು.

೨೭ ಮಂದಿ ಸಾಕ್ಷಿ

ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಬಂದಿಸಿ, ಮೊಕದ್ದಮೆ ದಾಖಲಿಸಿದ್ದ ಅಂದಿನ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಎಂ.ಎA. ಭರತ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ೨೭ ಮಂದಿ ಸಾಕ್ಷಿಗಳನ್ನು ವಿಚಾರಣೆ ಮಾಡಿದಾಗ ಆರೋಪಿ ನಂದ ವಿರುದ್ಧದ ಕೊಲೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಕರಣದ ಬಗ್ಗೆ ತೀರ್ಪು ಹೊರಬಿದ್ದಿದೆ. ನ್ಯಾಯಾಧೀಶರಾದ ಪ್ರಶಾಂತಿ ಜಿ. ಅವರು ಆರೋಪಿ ವಿರುದ್ಧ ಶಿಕ್ಷೆಯ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ತಾ. ೨೧ಕ್ಕೆ ಕಾಯ್ದಿರಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಅಥವಾ ಮರಣ ದಂಡನೆಯAತಹ ಶಿಕ್ಷೆ ವಿಧಿಸಲು ಅವಕಾಶವಿದೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ದೇವೇಂದ್ರ ಎನ್.ಪಿ. ವಾದ ಮಂಡಿಸಿದ್ದರು.