ಚಂದ್ರನ ಅಂತಿಮ ಕಕ್ಷೆ ತಲುಪಿದ ಇಸ್ರೋ ನೌಕೆ

ಬೆಂಗಳೂರು, ಆ. ೧೬: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-೩ ಬಾಹ್ಯಾಕಾಶ ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇಸ್ರೋದ ಚಂದ್ರಯಾನ-೩ ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಆ ಮೂಲಕ ಚಂದ್ರನ ಮೇಲ್ಮೆöÊಗೆ ಇನ್ನಷ್ಟು ಹತ್ತಿರವಾಗಿದೆ. ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದ್ದು, ಚಂದ್ರನ ಕಕ್ಷೆಗೆ ಅಂತಿಮ ಪರಿಚಲನೆಯು ಪೂರ್ಣಗೊಂಡಿದೆ ಎಂದು ಹೇಳಿದೆ. ಈಗ ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ (ಉಡ್ಡಯನ ವಾಹಕ) ಪ್ರತ್ಯೇಕಿಸುವ ಸಮಯ. ಇದಕ್ಕೆ ಆಗಸ್ಟ್ ೧೭ರಂದು ಮುಹೂರ್ತ ನಿಗದಿಯಾಗಿದೆ. ಆ ಮೂಲಕ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ ಎಂದು ತಿಳಿಸಿದೆ.

ಮೊದಲ ಹಂತದ ತನಿಖೆ ಪೂರ್ಣಗೊಳಿಸಿದ ಸಿಐಡಿ

ಮಂಗಳೂರು, ಆ. ೧೬: ಉಡುಪಿಯ ನೇತ್ರಾ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ತನ್ನ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದೆ. ತನಿಖಾಧಿಕಾರಿ (ಐಒ) ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ, ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸಿ÷್ಟಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನಿಂದ ಸಾಕ್ಷö್ಯಗಳನ್ನು ಸಂಗ್ರಹಿಸಿದೆ ಮತ್ತು ಸಂತ್ರಸ್ತೆ, ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

ಜಾತಿ ನಿಂದನೆ ಆರೋಪ : ಸಿಎಂ ಜೊತೆ ಚರ್ಚಿಸಿ ಕಾನೂನು ಕ್ರಮ

ಬೆಂಗಳೂರು, ಆ. ೧೬: ನಾಣ್ನುಡಿ ಇದೆ ಅಂತ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ನಟ ಉಪೇಂದ್ರ ಹಾಗೂ ಸಚಿವ ಮಲ್ಲಿಕಾರ್ಜುನ್ ವಿರುದ್ಧ ಕೇಳಿ ಬಂದಿರುವ ಜಾತಿ ನಿಂದನೆ ಆರೋಪ ಸಂಬAಧ ಪರಮೇಶ್ವರ್ ಅವರು ಇಂದು ಪ್ರತಿಕ್ರಿಯೆ ನೀಡಿದರು. ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ನಾಣ್ನುಡಿ ಇದೆ ಅಂತ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಒಳ್ಳೆಯದು, ಚುಚ್ಚು ಮಾತುಗಳನ್ನಾಡುವಾಗ ವಿವೇಚನೆ ಇರಬೇಕು. ಇಂತಹ ಹೇಳಿಕೆಗಳನ್ನು ನಾನು ಸಹಿಸಲ್ಲ. ಹೀಗೆ ಮಾತಾಡುವುದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವೇ? ಸಚಿವರೇ ಆಗಲಿ, ಯಾರೇ ಆಗಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಉಪೇಂದ್ರ, ಮಲ್ಲಿಕಾರ್ಜುನ್ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಪರಿಷತ್‌ಗೆ ಉಮಾಶ್ರೀ, ಸೀತಾರಾಂ, ಸುಧಾಮ್ ನಾಮನಿರ್ದೇಶನ

ಬೆಂಗಳೂರು, ಆ. ೧೬: ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್. ಸೀತಾರಾಂ ಮತ್ತು ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. ಸೀತಾರಾಂ, ಸುಧಾಮ್ ದಾಸ್ ಮತ್ತು ಎಐಸಿಸಿ ಕಾರ್ಯದರ್ಶಿ ಮನ್ಸೂ ಅಲಿ ಖಾನ್ ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡುವ ಪ್ರಸ್ತಾವವಿತ್ತು. ಮನ್ಸೂರ್ ಹೆಸರನ್ನು ಕೈಬಿಟ್ಟು, ಉಮಾಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಉಮಾಶ್ರೀ ಅವರನ್ನು ಸಿನಿಮಾ ಕ್ಷೇತ್ರ, ಸೀತಾರಾಂ ಅವರನ್ನು ಶಿಕ್ಷಣ ಕ್ಷೇತ್ರ ಹಾಗೂ ಸುಧಾಮ್ ದಾಸ್ ಅವರನ್ನು ಸಮಾಜಸೇವೆ ಕ್ಷೇತ್ರದಿಂದ ನಾಮನಿರ್ದೇಶನಕ್ಕೆ ಅಯ್ಕೆಮಾಡಲಾಗಿದೆ. ಎಐಸಿಸಿ ಪಟ್ಟಿಗೆ ಅನುಮೋದನೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸು ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಯುದ್ಧ ಹೆಲಿಕಾಪ್ಟರ್‌ಗಳು ಸಿದ್ಧ

ನವದೆಹಲಿ, ಆ. ೧೬: ಭಾರತೀಯ ಸೇನೆಯ ಬೇಡಿಕೆಯಂತೆ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು ಎಂದು ಅಮೆರಿಕದ ವಿಮಾನ ತಯಾರಿಕಾ ಕಂಪೆನಿ ಬೋಯಿಂಗ್ ಹೇಳಿದೆ. ಒಟ್ಟು ಆರು ಎಹೆಚ್-೬೪ಇ ಅಪಾಚೆಗಳನ್ನು ಭಾರತೀಯ ಸೇನೆಗಾಗಿ ಬೋಯಿಂಗ್ ಸಿದ್ಧಪಡಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯುದ್ಧ ಹೆಲಿಕಾಪ್ಟರ್ ಆಗಿರುವ ಇದು, ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಪ್ರಸಿದ್ಧಿ ಪಡೆದಿದೆ. ಸದ್ಯ ಈ ಮಾದರಿಯನ್ನು ಅಮೆರಿಕ ಸೇನೆ ಬಳಸುತ್ತಿದೆ. ಮೆಸಾ ಹಾಗೂ ಆರಿಲ್ಲೋನಾದಲ್ಲಿರುವ ತಯಾರಿಕಾ ಘಟಕಗಳಲ್ಲಿ ಭಾರತೀಯ ಸೇನೆಯ ಈ ನೂತನ ಹೆಲಿಕಾಪ್ಟರ್‌ಗಳು ಸಿದ್ಧಗೊಳ್ಳುತ್ತಿವೆ ಎಂದು ಕಂಪೆನಿ ಹೇಳಿದೆ.

ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ

ನವದೆಹಲಿ, ಆ. ೧೬: ಉತ್ತರ ಪ್ರದೇಶದ ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ ಬಳಿಯ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಡೆ ನೀಡಿರುವ ಸುಪ್ರೀಂಕೋರ್ಟ್, ಹತ್ತು ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಸಂಜಯ್ ಕುಮಾರ್ ಹಾಗೂ ಎಸ್‌ಎನ್ ಭಟ್ಟಿ ಅವರಿದ್ದ ಪೀಠವು, ಈ ಸೂಚನೆ ನೀಡಿ ಕೇಂದ್ರಕ್ಕೆ ನೋಟೀಸ್ ಜಾರಿ ಮಾಡಿದೆ. ಅರ್ಜಿದಾರ ಯಾಕೂಬ್ ಶಹಾ ಪರವಾಗಿ ವಾದ ಮಂಡಿಸಿದ ವಕೀಲರು, ನೂರಕ್ಕೂ ಹೆಚ್ಚು ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ೭೦ ರಿಂದ ೮೦ ಮನೆಗಳು ಬಾಕಿ ಉಳಿದಿವೆ. ಉತ್ತರ ಪ್ರದೇಶದ ನ್ಯಾಯಾಲಯಗಳು ರಜೆ ಇದ್ದ ದಿನವೇ ಈ ಕಾರ್ಯಾಚರಣೆ ನಡೆಸಿರುವುದು ದುರುದ್ದೇಶದಿಂದ ಕೂಡಿದ್ದಾಗಿದೆ ಎಂದು ಪೀಠದ ಗಮನಕ್ಕೆ ತಂದರು. ೧೮೦೦ ರಿಂದಲೂ ಇಲ್ಲಿ ಈ ಮನೆಗಳು ಇವೆ. ಕಟ್ಟಡ ತೆರವಿಗೂ ಪೂರ್ವದಲ್ಲಿ ನೀಡಲಾಗಿದ್ದ ನೋಟೀಸ್‌ಗೆ ತಡೆಯಾಜ್ಞೆ ಇದೆ. ಆದರೆ ಹೈಕೋರ್ಟ್ ರಜೆ ಇದೆ ಎಂದು ವಕೀಲರು ಹೇಳಿದರು. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವ ರೈಲ್ವೆ ಇಲಾಖೆಯ ಕ್ರಮದಿಂದ ನೊಂದವರು ಅಲಹಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿತು. ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನು ಮುಂದೆ ಪ್ರಕರಣವನ್ನು ತರಲು ಸಂಪೂರ್ಣ ಸ್ವಾತಂತ್ರ‍್ಯವಿದೆ. ಅಲ್ಲಿಯೇ ಇದನ್ನು ಪ್ರಶ್ನಿಸಿ ಎಂದು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿತು.

ಹೊಸ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ, ಆ. ೧೬: ೧೩,೦೦೦ ಕೋಟಿ ರೂಪಾಯಿ ಮೌಲ್ಯದ "ಪಿಎಂ ವಿಶ್ವಕರ್ಮ" ಯೋಜನೆ ಹಾಗೂ ೩೨,೫೦೦ ಕೋಟಿ ಮೌಲ್ಯದ ಹೊಸ ರೈಲ್ವೆ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಪಿಎಂ ವಿಶ್ವಕರ್ಮ ಯೋಜನೆಯಿಂದ ದೇಶದ ೩೦ ಲಕ್ಷ ಕರಕುಶಲಕರ್ಮಿಗಳಿಗೆ ಲಾಭವಾಗಲಿದೆ. ಅವರಿಗೆ ಕೇವಲ ೫ ಪರ್ಸೆಂಟ್ ವಾರ್ಷಿಕ ಬಡ್ಡಿದರದಲ್ಲಿ ೧ ಲಕ್ಷ ರೂ.ವರೆಗೂ ಮೊದಲ ಹಂತದ ಸಾಲ ಹಾಗೂ ಎರಡನೇ ಹಂತದಲ್ಲಿ ೨ ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು. ಯೋಜನೆಗಾಗಿ ಸರ್ಕಾರ ರೂ. ೧೩,೦೦೦ ಕೋಟಿ ಮಿಸಲಿಟ್ಟಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಈ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ, ಟೂಲ್‌ಕಿಟ್, ಡಿಜಿಟಲ್ ವಹಿವಾಟು, ಮಾರ್ಕೆಟಿಂಗ್ ಇತ್ಯಾದಿ ಪ್ರೋತ್ಸಾಹಗಳನ್ನು ಕರಕುಶಲಕರ್ಮಿಗಳಿಗೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಏಳು ಯೋಜನೆಗಳಿಗೆ ಅನುಮೋದನೆ ನೀಡಿದೆ. ೩೨,೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಟಿ-ಟ್ರ‍್ಯಾಕಿಂಗ್ ಕಾರ್ಯಾಚರಣೆಗಳನ್ನು ಸರಾಗಗೊಳಿಸುವ ಮೂಲಕ ದಟ್ಟಣೆ ಕಡಿಮೆ ಮಾಡುವುದು, ಭಾರತೀಯ ರೈಲ್ವೆಯಾದ್ಯಂತ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ.