(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಆ. ೧೬ : ಜಿಲ್ಲೆಯ ಗಡಿ ಭಾಗ ಕರಿಕೆ ಗ್ರಾಮದಲ್ಲಿ ಮಲಯಾಳ ಭಾಷೆಯ ಪ್ರಭಾವಕ್ಕೆ ಕನ್ನಡ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಮಂಕಾಗುತ್ತಿವೆ.

ಪ್ರತೀ ಶೈಕ್ಷಣಿಕ ಸಾಲಿನಲ್ಲಿ ಕರಿಕೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿವೆ. ಕೊಡಗು ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿಭಾಗವಾದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಸರ್ಕಾರಿ ಶಾಲೆಗಳಿವೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಕೆ ಹಾಗೂ ಕರಿಕೆ ಕಾಲೋನಿ ಸೇರಿ ಎರಡು ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಕರಿಕೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಿಕೆ ತೋಟ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿವೆ. ಆದರೆ ಮೂಲಭೂತ ಸೌಕರ್ಯಗಳು ಹಾಗೂ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಪಕ್ಕದ ಕೇರಳ ರಾಜ್ಯದ ಶಾಲೆಗಳಿಗೆ ಕರಿಕೆ ಗ್ರಾಮದ ವಿದ್ಯಾರ್ಥಿಗಳು ಸೇರುತ್ತಿದ್ದಾರೆ. ಕರಿಕೆ ಗಡಿ ಭಾಗದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಹಾಗೂ ಕೊಣತ್ತಡಿ ಮಲಯಾಳಂ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಮಲಯಾಳಂ ಪ್ರಭಾವದ ನಡುವೆಯೂ ಜಿಲ್ಲೆಯ ಗಡಿಭಾಗ ಕರಿಕೆಯ ಕನ್ನಡ ಮಾಧ್ಯಮದ ಶಾಲೆಯೂ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಣವನ್ನು ನೀಡುತ್ತಾ ಬರುತಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಮಲಯಾಳಂ ಪ್ರಭಾವಕ್ಕೆ ಕೊಡಗಿನ ಗಡಿ ಭಾಗ ಕರಿಕೆಯ ಶಾಲೆಗಳು ಕಳೆಗುಂದಿವೆ.

ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ:

ಕೊಡಗು ಹಾಗೂ ಕೇರಳ ರಾಜ್ಯದ ಗಡಿಭಾಗದಲ್ಲಿರುವ ಕರಿಕೆ ಗ್ರಾಮದಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕೊರತೆಯಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರಿಕೆ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದ ಕಾಸರಗೋಡಿನ ಮಲಯಾಳಂ ಶಾಲೆಗಳು ಕರಿಕೆ ಗ್ರಾಮಕ್ಕೆ ಶಾಲಾ ವಾಹನ ಹಾಗೂ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದ ಕರಿಕೆ ಶಾಲೆಯ ವಿದ್ಯಾರ್ಥಿಗಳನ್ನು ಮಲಯಾಳಂ ಶಾಲೆಗಳತ್ತ ಸೆಳೆಯುತ್ತಿವೆ. ಕರಿಕೆ ಗ್ರಾಮದಲ್ಲಿ ಶೇಕಡಾ ೭೦ ರಷ್ಟು ಜನರ ಮಾತೃ ಭಾಷೆ ಮಲಯಾಳಂ. ಕರಿಕೆ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಕೊರತೆಯಿಂದ ಕರಿಕೆ ವಿದ್ಯಾರ್ಥಿಗಳ ಪೋಷಕರು ಕರಿಕೆಯ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರಾಥಮಿಕ ಹಂತದಿAದಲೇ ತಮ್ಮ ಮಕ್ಕಳಿಗೆ ಕಾಸರಗೋಡಿನ ಪಾಣತ್ತೂರು ಹಾಗೂ ಕೊಣತ್ತಡಿಯ ಮಲಯಾಳಂ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿದ್ದಾರೆ.

(ಮೊದಲ ಪುಟದಿಂದ) ಇದರಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಇದೀಗ ವಿದ್ಯಾರ್ಥಿಗಳ ಕೊರತೆಯಿಂದ ಕರಿಕೆ ಗ್ರಾಮದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲಯಾಳಂ ಮಾಧ್ಯಮದ ಮುಂದೆ ಕರಿಕೆ ಗ್ರಾಮದ ಕನ್ನಡ ಮಾಧ್ಯಮ ಶಾಲೆಗಳು ಅಸ್ತಿತ್ವ ಕಳೆದು ಕೊಳ್ಳುವಂತಾಗಿದೆ.

ಖಾಯA ಶಿಕ್ಷಕರ ವರ್ಗಾವಣೆ

ಕರಿಕೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ೭೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯು ತ್ತಿದ್ದಾರೆ. ಈ ವರ್ಷ ೮ನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ ಕಂಡಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕರಿಕೆ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ೮೨ ವಿದ್ಯಾರ್ಥಿಗಳು ಇದ್ದರು. ಕರಿಕೆ ಸರ್ಕಾರಿ ಪ್ರೌಢಶಾಲೆ ಯಲ್ಲಿ ೪ ಖಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ನಾಲ್ವರು ಶಿಕ್ಷಕರು ಕೂಡ ಕೌನ್ಸಿಲಿಂಗ್ ಮೂಲಕ ಬೇರೆ ಶಾಲೆಗಳಿಗೆ ವರ್ಗಾ ವಣೆ ಪಡೆದಿದ್ದಾರೆ. ವರ್ಗಾವಣೆ ಗೊಂಡ ಒಬ್ಬ ಶಿಕ್ಷಕರು ಜುಲೈ ೧೪ಕ್ಕೆ ಬೇರೆ ಶಾಲೆಗೆ ಕರ್ತವ್ಯಕ್ಕೆ ಹಾಜ ರಾಗಿದ್ದಾರೆ. ವರ್ಗಾವಣೆಯಾಗಿರುವ ಮೂವರು ಶಿಕ್ಷಕರು ಯಾವ ಶಾಲೆ ಎಂದು ಗುರುತಿಸಿದ್ದು, ಶಿಕ್ಷಣ ಇಲಾ ಖೆಯ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ಕಳೆದ ವರ್ಷ ಕರಿಕೆ ಪ್ರೌಢಶಾಲೆಯಲ್ಲಿ ಐದು ಶಿಕ್ಷಕರಿದ್ದರು. ಒಬ್ಬರು ಕಳೆದ ವರ್ಷ ವರ್ಗಾವಣೆ ಪಡೆದಿದ್ದರು. ಇದೀಗ ಬೆಳಗಾಂ ಜಿಲ್ಲೆಯಿಂದ ಶಾಲೆಗೆ ಶಿಕ್ಷಕರೊಬ್ಬರು ವರ್ಗಾವಣೆಯಾಗಿದ್ದಾರೆ. ಬೆಳಗಾಂ ನಿಂದ ಕರಿಕೆ ಶಾಲೆಗೆ ವರ್ಗಾ ವಣೆಯಾಗಿರುವ ಶಿಕ್ಷಕ ಕೌನ್ಸಿಲಿಂಗ್ ಮೂಲಕ ಕರಿಕೆ ಶಾಲೆಯನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರದ ಆದೇಶ ಬಂದ ನಂತರ ಬೆಳಗಾಂ ಜಿಲ್ಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗುತ್ತಾರೆ. ನಾಲ್ಕು ಖಾಯಂ ಶಿಕ್ಷಕರಿದ್ದ ಕರಿಕೆ ಪ್ರೌಢಶಾಲೆಯಲ್ಲಿ ಇದೀಗ ಕೇವಲ ಒಬ್ಬ ಖಾಯಂ ಶಿಕ್ಷಕ ಮಾತ್ರ ಇದ್ದಾರೆ. ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಕರಿಕೆ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಖಾಯಂ ಶಿಕ್ಷಕ ಹಾಗೂ ಕರಿಕೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಮತ್ತು ಕರಿಕೆ ತೋಟ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಖಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಉಳಿದಂತೆ ಒಂದಿಬ್ಬರು ಅತಿಥಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದರಿAದ, ಗಡಿಭಾಗದ ಕರಿಕೆ ಕನ್ನಡ ಮಾಧ್ಯಮ ಶಾಲೆಯಿಂದ, ಕಾಸರಗೋಡಿನ ಮಲಯಾಳಂ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸುತ್ತಿದ್ದಾರೆ.

ಅರ್ಧದಲ್ಲೇ ಶಾಲೆ ಬಿಡುತ್ತಿರುವ ಮಕ್ಕಳು!

ಕರಿಕೆ ಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಬಡ,ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಶೇ.೭೫ ರಷ್ಟು ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇದ್ದಾರೆ. ಆದರೆ ಶಿಕ್ಷಣ ಅರಿವಿನ ಕೊರತೆಯಿಂದ ವಿದ್ಯಾರ್ಥಿಗಳು ಅರ್ಧದಲ್ಲೇ ಶಾಲೆ ಬಿಡುತ್ತಿದ್ದಾರೆ.

ಕರಿಕೆ ಗ್ರಾಮದ ಪಂಚಾಯಿತಿಯ ಕೇರಳ ಗಡಿಭಾಗಕ್ಕೆ ಹೊಂದಿಕೊAಡಿರುವ ತೋಟಂ ಭಾಗದಲ್ಲಿ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಕಾಸರಗೋಡು ವಂಚಿತರಾಗುತ್ತಿರುವುದರಿAದ, ಗಡಿಭಾಗದ ಕರಿಕೆ ಕನ್ನಡ ಮಾಧ್ಯಮ ಶಾಲೆಯಿಂದ, ಕಾಸರಗೋಡಿನ ಮಲಯಾಳಂ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸುತ್ತಿದ್ದಾರೆ.

ಅರ್ಧದಲ್ಲೇ ಶಾಲೆ ಬಿಡುತ್ತಿರುವ ಮಕ್ಕಳು!

ಕರಿಕೆ ಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಬಡ,ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಶೇ.೭೫ ರಷ್ಟು ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇದ್ದಾರೆ. ಆದರೆ ಶಿಕ್ಷಣ ಅರಿವಿನ ಕೊರತೆಯಿಂದ ವಿದ್ಯಾರ್ಥಿಗಳು ಅರ್ಧದಲ್ಲೇ ಶಾಲೆ ಬಿಡುತ್ತಿದ್ದಾರೆ.

ಕರಿಕೆ ಗ್ರಾಮದ ಪಂಚಾಯಿತಿಯ ಕೇರಳ ಗಡಿಭಾಗಕ್ಕೆ ಹೊಂದಿಕೊAಡಿರುವ ತೋಟಂ ಭಾಗದಲ್ಲಿ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯ ಕೊಣತ್ತೊಡು ಮಲಯಾಳಂ ಶಾಲೆಗೆ ಸೇರುತ್ತಿದ್ದಾರೆ. ಸ್ವಲ್ಪ ವಿದ್ಯಾರ್ಥಿಗಳು ಸುಳ್ಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಕೇರಳ ರಾಜ್ಯದ ಕಾಸರಗೋಡಿನ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ.

ಮಲಯಾಳಂ ಪ್ರಭಾವಕ್ಕೆ ಒಳಗಾದ, ಕರಿಕೆ ಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವುದರ ಮೂಲಕ ಶಿಕ್ಷಣ ಇಲಾಖೆ ಗಡಿಭಾಗದ ಕನ್ನಡ ಶಾಲೆಯನ್ನು ಉಳಿಸಬೇಕಾಗಿದೆ ಇದರ ಬಗ್ಗೆ ಶಾಸಕರು ಗಮನಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದಲ್ಲಿ ಕೊಡಗಿನ ಗಡಿಭಾಗ ಕರಿಕೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುವ ಕಾಲ ದೂರವೇನಿಲ್ಲ.ಗಡಿಭಾಗಕ್ಕೆ ಬರಲು ಶಿಕ್ಷಕರ ಹಿಂದೇಟು

ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ದೂರದ ಪ್ರಯಾಣದಿಂದ ಶಿಕ್ಷಕರು ಕರಿಕೆ ಗ್ರಾಮದ ಶಾಲೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಕರಿಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರು ಕೌನ್ಸಿಲಿಂಗ್ ಮೂಲಕ ಬೇರೆ ಶಾಲೆಗಳಿಗೆ ವರ್ಗಾವಣೆ ಪಡೆದಿದ್ದಾರೆ. ಬಾಗಲಕೋಟೆ ಮೂಲದ ಶಿಕ್ಷಕರು ಈ ಹಿಂದೆ ಕರಿಕೆ ಪ್ರೌಢಶಾಲೆಯಲ್ಲಿ ೧೦ ವರ್ಷಗಳ ಕಾಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಇದೀಗ ಅವರು ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಪಡೆದಿದ್ದಾರೆ. ಅದಲ್ಲದೇ ಪ್ರಬಾರ ಮುಖ್ಯೋಪಾಧ್ಯಾಯರು ಸುಳ್ಯ ತಾಲೂಕಿನ ಶಾಲೆಗೆ ವರ್ಗಾವಣೆಯಾಗಿದ್ದಾರೆ.

ಮುಖ್ಯೋಪಾಧ್ಯಾಯರು ಚೆಂಬು ಗ್ರಾಮದವರು ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಕರಿಕೆ ಶಾಲೆಯಲ್ಲಿ ಇದೀಗ ಕೇವಲ ಒಂದು ಖಾಯಂ ಶಿಕ್ಷಕರು ಇದ್ದಾರೆ. ಖಾಯಂ ಶಿಕ್ಷಕರು ಬೆಳಗಾಂನಿAದ ವರ್ಗಾವಣೆಗೊಂಡು ಕರಿಕೆ ಶಾಲೆಗೆ ಬರಲಿದ್ದಾರೆ. ಖಾಯಂ ಶಿಕ್ಷಕರು ಬಂದ ಕೂಡಲೇ ಕರಿಕೆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಶಿಕ್ಷಕರು ಕರಿಕೆ ಶಾಲೆಯಿಂದ ನಿರ್ಗಮಿಸಲಿದ್ದಾರೆ.

ಇಬ್ಬರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಆದರೆ ಅತಿಥಿ ಶಿಕ್ಷಕರು ಕೂಡ ಕರಿಕೆ ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯವಾಗಿ ಪದವಿ ಪಡೆದ ನಂತರ ಬಿ.ಎಡ್ ಪಡೆದು ಶಿಕ್ಷಕ ತರಬೇತಿ ಪಡೆದವರು ಯಾರೂ ಇಲ್ಲ. ಅತಿಥಿ ಶಿಕ್ಷಕರು ಭಾಗಮಂಡಲ ಹಾಗೂ ಸುಳ್ಯ ಮೂಲಕ ಕರಿಕೆ ಗ್ರಾಮಕ್ಕೆ ಬರಬೇಕಾಗಿದೆ. ದೂರದ ಪ್ರಯಾಣ ಹಾಗೂ ಕಡಿಮೆ ಸಂಬಳದಿAದ ಅತಿಥಿ ಶಿಕ್ಷಕರು ಕರಿಕೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ.ದಾಖಲಾತಿಯಲ್ಲಿ ಇಳಿಕೆ

ಕರಿಕೆ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಕಳೆದ ಐದು ವರ್ಷಗಳಲ್ಲಿ ಗಡಿ ರಾಜ್ಯವಾದ ಕೇರಳದ ಕಾಸರಗೋಡಿನ ಮಲಯಾಳಂ ಶಾಲೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕರಿಕೆ ಗ್ರಾಮದ ಕನ್ನಡ ಶಾಲೆಗಳು ಭವಿಷ್ಯದಲ್ಲಿ ಉಳಿಯುತ್ತಾ ಎಂಬ ಪ್ರಶ್ನೆ ಮೂಡಿದೆ.

ಕರಿಕೆ ತೋಟ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ೫ರ ಗಡಿ ದಾಟಲಿಲ್ಲ. ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿ ಎದುರಾಗಿದೆ. ಕರಿಕೆ ಕಾಲೋನಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ ರಿಂದ ೭ ತರಗತಿಯವರೆಗೆ ೯೫ರ ಆಸುಪಾಸಿನಲ್ಲಿ ಇದ್ದ ವಿದ್ಯಾರ್ಥಿಗಳು ಸಂಖ್ಯೆ ಇದೀಗ ೬೫ಕ್ಕೆ ತಲುಪಿದೆ. ಅದೇ ರೀತಿಯಲ್ಲಿ ಕರಿಕೆ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ೮೬ ವಿದ್ಯಾರ್ಥಿಗಳು ಇದ್ದರು. ಆದರೆ ಇದೀಗ ೬೦ಕ್ಕೆ ವಿದ್ಯಾರ್ಥಿಗಳು ಸಂಖ್ಯೆ ತಲುಪಿದೆ. ೮೫ ವಿದ್ಯಾರ್ಥಿಗಳಿದ್ದ ಕರಿಕೆ ಪ್ರೌಢ ಶಾಲೆಯಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ೭೦ಕ್ಕೆ ತಲುಪಿದೆ. ೮ನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಕರಿಕೆಯ ಕನ್ನಡ ಮಾಧ್ಯಮ ಶಾಲೆಗೆ ಸೇರಿಸದೆ ಒಂದನೆಯ ತರಗತಿಯಿಂದಲೇ ಕಾಸರಗೋಡಿನ ಮಲಯಾಳಂ ಶಾಲೆಗಳಿಗೆ ದಾಖಲಾತಿ ಮಾಡುತ್ತಿದ್ದಾರೆ. ಈಗೇ ಮಲಯಾಳಂ ಶಾಲೆಗಳ ಪ್ರಭಾವಕ್ಕೆ ಕೊಡಗಿನ ಗಡಿಭಾಗದ ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಮಂಕಾಗುತ್ತಿದೆ.