ಕರಿಕೆ, ಆ. ೧೫: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ಸೋಮವಾರ ತಡರಾತ್ರಿ ಚಿರತೆ ದಾಳಿ ಮಾಡಿ ಸಾಕುನಾಯಿಯೊಂದನ್ನು ಹೊತ್ತೊಯ್ದ ಘಟನೆ ನಡೆದಿದೆ.

ಇಲ್ಲಿನ ಜನಾರ್ಧನ ಪಿ.ಕೆ. ಎಂಬವರ ಮನೆಯ ಅಂಗಳದಲ್ಲಿ ಕಟ್ಟಿ ಹಾಕಿದ್ದ ಎರಡು ವರ್ಷದ ನಾಯಿಯನ್ನು ತಡರಾತ್ರಿ ಚಿರತೆ ಹೊತ್ತೊಯ್ದು ಕೊಂದು ಹಾಕಿದೆ. ಪುಟಾಣಿ ಮಕ್ಕಳು ಶಾಲೆಗೆ ತೆರಳುವ ಈ ಪ್ರದೇಶದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.