ಮಡಿಕೇರಿ, ಆ.೧೪: ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ವಿಶ್ವ ಆನೆ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ.

ಮಡಿಕೇರಿ ಕೇಂದ್ರೀಯ ವಿದ್ಯಾಲಯದ ಆರನೇ ತರಗತಿಯ ಗೌರವ್ ಗೌಡ ಪ್ರಥಮ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ಆರನೇ ತರಗತಿಯ ಚಿರಾಗ್ ಚಿಣ್ಣಪ್ಪ ಪಿ.ಡಿ., ದ್ವಿತೀಯ ಸ್ಥಾನ ಪಡೆದರೆ, ಏಳನೇ ತರಗತಿ ವಿಭಾಗದಲ್ಲಿ ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯ ಅನಮೋಲ್ ದೇವಯ್ಯ ಪ್ರಥಮ, ಮಡಿಕೇರಿ ಕೊಡಗು ವಿದ್ಯಾಲಯದ ರಿಶಿಲ್ ಮಧು ದ್ವಿತೀಯ, ಎಂಟನೇ ತರಗತಿ ವಿಭಾಗದಲ್ಲಿ ಹಾನಗಲ್‌ನ ಒಎಲ್‌ವಿ ಕಾನ್ವೆಂಟ್ ಶಾಲೆಯ ಮಾನ್ಯ ಎಂ.ಶೆಟ್ಟಿ ಪ್ರಥಮ, ಅದೇ ಶಾಲೆಯ ವಂದನ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಪ್ರಬAಧ ಸ್ಪರ್ಧೆಯಲ್ಲಿ ೯ನೇ ತರಗತಿ ವಿಭಾಗದಲ್ಲಿ ಚೌಡ್ಲು ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ತ್ರಿಶಾಲ್ ಗೌಡ ಎಸ್ ವಿ, ಪ್ರಥಮ, ಕೂಡಿಗೆ ಸೈನಿಕ ಶಾಲೆಯ ಸಾಗರ್ ಯಲ್ಲಪ್ಪ ಹಾಗೂ ಓ ಎಲ್ ವಿ ಹೈಸ್ಕೂಲ್ ಹಾನಗಲ್‌ನ ಮನಸ್ವಿನಿ ಎಂ. ಎಸ್. ದ್ವಿತೀಯ, ೧೦ನೇ ತರಗತಿ ವಿಭಾಗದಲ್ಲಿ ಹಾಕತ್ತೂರು ಸರಕಾರಿ ಪ್ರೌಢಶಾಲೆಯ ಪಲ್ಲವಿ ಪಿ.ಸಿ. ಪ್ರಥಮ, ಕೊಟ್ಟಮುಡಿ ಮರ್ಕಝ್ ಪಬ್ಲಿಕ್ ಶಾಲೆಯ ಉಸಯಂ ಮೆಕ್ಕಿ ದ್ವಿತೀಯ, ಪ್ರಥಮ ಪಿಯುಸಿ ವಿಭಾಗದಲ್ಲಿ ಏಕಲವ್ಯ ಸ್ಕೂಲ್ ಬಾಳುಗೋಡುವಿನ ಐಶ್ವರ್ಯ ಪ್ರಥಮ, ಅದೇ ಕಾಲೇಜಿನ ಸಂಗೀತಾ ದ್ವಿತೀಯ, ದ್ವಿತೀಯ ಪಿಯುಸಿ ವಿಭಾಗದಲ್ಲಿ ಏಕಲವ್ಯ ಸ್ಕೂಲ್, ಬಾಳುಗೋಡುವಿನ ಅಶ್ವದಿ ಪ್ರಥಮ, ಸರ್ವದೈವತಾ ಪಿಯು ಕಾಲೇಜ್, ಗೋಣಿಕೊಪ್ಪಲು ಪ್ರಿನ್ಸಿದೇವಮ್ಮ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.