ಶನಿವಾರಸಂತೆ, ಆ.೧೫: ಸಮೀಪದ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಾರ್ಧನ ಹಳ್ಳಿಯ ಸರ್ಕಾರಿ ಶಾಲೆಯ ಬೆಸ್ತರ ಹಾಡಿಯ ಮಕ್ಕಳಿಗೆ ದಾನಿ ಹಾಗೂ ಪತ್ರಕರ್ತ ಪಿ.ಸಿ.ಪಾಸ್ಟರ್ ಫ್ರೆಡ್ಡಿ ಅವರು ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.
ಬೆಸ್ತರ ಹಾಡಿಯ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಲಿಕೆಯನ್ನು ಪ್ರೋತ್ಸಾಹಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಕಲಿಕಾ ಸಾಮಾಗ್ರಿಯ ಬ್ಯಾಗನ್ನು ವಿತರಿಸಿದ ದಾನಿ ಪಿ.ಸಿ.ಪಾಸ್ಟರ್ ಫ್ರೆಡ್ಡಿ ಮಾತನಾಡಿ, ಹಾಡಿಯ ಮಕ್ಕಳಲ್ಲಿ ವಿದ್ಯೆ ಕಲಿವ ಉತ್ಸಾಹವಿದ್ದು ಸಾಮರ್ಥ್ಯವುಳ್ಳವರಾಗಿದ್ದಾರೆ. ಮನೆಯಲ್ಲೂ ಪೋಷಕರು ಕಲಿಕೆಗೆ ಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಕರೆ ನೀಡಿದರು.
ಬೆಸೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಜಾನ್‌ಪಾಲ್, ಶಾಲಾ ಮುಖ್ಯ ಶಿಕ್ಷಕ ಹರೀಶ್, ಜಿಲ್ಲಾ ರೈತ ಸಂಘದ ಮನೆಯಲ್ಲೂ ಪೋಷಕರು ಕಲಿಕೆಗೆ ಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಕರೆ ನೀಡಿದರು.
ಬೆಸೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಜಾನ್‌ಪಾಲ್, ಶಾಲಾ ಮುಖ್ಯ ಶಿಕ್ಷಕ ಹರೀಶ್, ಜಿಲ್ಲಾ ರೈತ ಸಂಘದ ಪದಾಧಿಕಾರಿ ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ರಂಗಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸ್ವಾಮಿ, ಜಗದೀಶ್, ಧರ್ಮಣ್ಣ, ಪುಟ್ಟನಂಜ, ಭಾಗ್ಯಮ್ಮ, ಕಾವೇರಿ, ರೋಜಾ, ಅಂಗನವಾಡಿ ಕಾರ್ಯಕರ್ತೆ ಶಾರದಾ ಉಪಸ್ಥಿತರಿದ್ದರು.