ಮುಂದಿನ ಶೈಕ್ಷಣಿಕ ವರ್ಷದಿಂದ ಎನ್.ಇ.ಪಿ. ರದ್ದು
ಬೆಂಗಳೂರು, ಆ. ೧೪: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟಿçÃಯ ಶಿಕ್ಷಣ ನೀತಿಯನ್ನು (ಎನ್ಇಪಿ) ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎನ್ಇಪಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದುಪಡಿಸಲಾಗುವುದು. ಎನ್ಇಪಿ ಅನ್ನು ರದ್ದು ಮಾಡುವ ಮೊದಲು ಕೆಲವು ಅಗತ್ಯ ಸಿದ್ಧತೆಗಳನ್ನು ಮಾಡಬೇಕಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದಕ್ಕೆ ಸಮಯಾವಕಾಶ ಸಿಕ್ಕಿರಲಿಲ್ಲ. ಚುನಾವಣೆಯ ನಂತರ ಸರ್ಕಾರ ರಚನೆಯಾದಾಗ, ಶೈಕ್ಷಣಿಕ ವರ್ಷ ಪ್ರಾರಂಭವಾಗಿತ್ತು ಎಂದು ಸಿಎಂ ವಿವರಿಸಿದರು. ಏಕಾಏಕಿ ರದ್ದುಪಡಿಸಿದರೆ ಅದರಿಂದ ವಿದ್ಯಾರ್ಥಿಗಳಿಗಾಗುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಈ ಶೈಕ್ಷಣಿಕ ವರ್ಷದಲ್ಲಿ ಎನ್ಇಪಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಉಪೇಂದ್ರ ವಿರುದ್ಧದ ಎಫ್.ಐ.ಆರ್. ಗೆ ತಡೆ
ಬೆಂಗಳೂರು, ಆ. ೧೪: ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ದಾಖಲಾಗಿರುವ ಎಫ್.ಐ.ಆರ್.ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು ಬಂಧನ ಭೀತಿಯಿಂದ ನಟ ಪಾರಾಗಿದ್ದಾರೆ. ತಮ್ಮ ಮೇಲೆ ದಾಖಲಾಗಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಎಫ್.ಐ.ಆರ್.ಗೆ ತಡೆಯಾಜ್ಞೆ ನೀಡಿದೆ.
ಭಯೋತ್ಪಾದಕ ಸಂಚು - ಐವರ ಬಂಧನ
ಚAಡೀಗಢ, ಆ. ೧೪: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪಂಜಾಬ್ನಲ್ಲಿ ಮತ್ತೊಂದು ಭಯೋತ್ಪಾದಕ ಸಂಚು ಪತ್ತೆಯಾಗಿದ್ದು, ಟಾರ್ಗೆಟ್ ಹತ್ಯೆಗಳನ್ನು ನಡೆಸಲು ಉದ್ದೇಶಿಸಿದ್ದ ೫ ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಪಾಕಿಸ್ತಾನ ಮೂಲದ ಹರ್ವಿಂದರ್ ರಿಂಡಾ ಹಾಗೂ ಪಾಕ್ ಮೂಲದ ಗೋಲ್ಡಿ ಬ್ರಾರ್ ಅವರ ಕಾರ್ಯಕರ್ತರೆಂದು ಗುರುತಿಸಲಾಗಿರುವುದಾಗಿ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ. ಬಂಧಿತರಿAದ ಎರಡು ವಿದೇಶಿ ತಯಾರಿತ ಪಿಸ್ತೂಲ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್ ಪೊಲೀಸರು ಭಯೋತ್ಪಾದಕರ ಸಂಚನ್ನು ಬಯಲು ಮಾಡಿದ್ದು, ಕೇಂದ್ರೀಯ ಏಜೆನ್ಸಿ ಹಾಗೂ ಪಂಜಾಬ್ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಯಾದವ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಶಸ್ತಾçಸ್ತçಗಳಷ್ಟೇ ಅಲ್ಲದೇ ಆರೋಪಿಗಳು ಅಮೇರಿಕಾದಿಂದ ಆರ್ಥಿಕ ನೆರವನ್ನೂ ಪಡೆಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಇಡೀ ಜಾಲವನ್ನು ಬೇಧಿಸಲು ತನಿಖೆ ಮುಂದುವರೆದಿದೆ ಎಂದು ಯಾದವ್ ತಿಳಿಸಿದ್ದಾರೆ. ಆ.೧೩ ರಂದು ಕೂಡ ಇಂಥಹದ್ದೇ ಒಂದು ಜಾಲವನ್ನು ಪಂಜಾಬ್ ಪೊಲೀಸರು ಪತ್ತೆ ಮಾಡಿದ್ದರು.
ಗೃಹ ಸಚಿವರ ಬೆಂಬಲಿಗನ ಹತ್ಯೆ
ತುಮಕೂರು, ಆ. ೧೪: ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಬೆಂಬಲಿಗನನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತನೊಬ್ಬ ರಾಜಕೀಯ ವೈಷಮ್ಯದಿಂದ ಹತ್ಯೆಗೈದಿದ್ದಾನೆ. ಆರೋಪಿ ಮರಿಯಪ್ಪ, ಹೂವಿನ ವ್ಯಾಪಾರಿ ದೇವರಾಜ್(೩೧) ಎಂಬಾತನನ್ನು ಕುಡಿದ ಅಮಲಿನಲ್ಲಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಇಬ್ಬರೂ ಕರೇಚಿಕ್ಕನಹಳ್ಳಿ ಗೊಲ್ಲರಹಟ್ಟಿ ಗ್ರಾಮದವರಾಗಿದ್ದಾರೆ. ಮೇ ೧೦ ರಂದು ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದೇವರಾಜ್ ಪರಮೇಶ್ವರ್ ಪರವಾಗಿ ಮತ್ತು ಮರಿಯಪ್ಪ ಜೆಡಿಎಸ್ ಅಭ್ಯರ್ಥಿಗಾಗಿ ಕೆಲಸ ಮಾಡಿದ್ದರು. ಇದು ಕೊಲೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ವಿಜ್ಞಾನಿ ಎಂ.ಆರ್.ಎಸ್.ರಾವ್ ವಿಧಿವಶ
ಬೆಂಗಳೂರು, ಆ. ೧೪: ಖ್ಯಾತ ಭಾರತೀಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಆರ್.ಎಸ್.ರಾವ್ ಎಂದೇ ಖ್ಯಾತರಾದ ಮಂಚನಹಳ್ಳಿ ರಂಗಸ್ವಾಮಿ ಸತ್ಯನಾರಾಯಣ ರಾವ್ ಬೆಂಗಳೂರಿನ ಟಾಟಾ ನಗರದಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಶಿಸ್ತು, ವೈಜ್ಞಾನಿಕ ಜ್ಞಾನ, ತಾಳ್ಮೆ, ಮೃದು ಮಾತಿನ ಸ್ವಭಾವಗಳಿಂದ ಮತ್ತು ಅನೇಕ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಹೆಸರುವಾಸಿಯಾಗಿದ್ದಾರೆ, ಪತ್ನಿ ಪದ್ಮ ಎಸ್ ರಾವ್ ಮತ್ತು ಇಬ್ಬರು ಪುತ್ರರಾದ ಶರತ್ ಮತ್ತು ರೋಹನ್ ಅವರನ್ನು ಅಗಲಿದ್ದಾರೆ. ಅವರ ಒಬ್ಬ ಮಗ ಬ್ರಿಸ್ಬೇನ್ನಿಂದ ಹಿಂದಿರುಗಿದ ನಂತರ ಮಂಗಳವಾರ ಪ್ರೊ. ರಾವ್ ಅವರ ಅಂತಿಮ ವಿಧಿಗಳನ್ನು ನಡೆಸಲಾಗುವುದು. ಜನವರಿ ೨೧, ೧೯೪೮ ರಂದು ಜನಿಸಿದ ೭೫ ವರ್ಷದ ರಾವ್ ಭಾರತದಲ್ಲಿ ಕ್ರೊಮಾಟಿನ್ ಬಯಾಲಜಿ ಸಂಶೋಧನೆ ಪ್ರಾರಂಭಿಸಿದ ಮೊದಲ ವಿಜ್ಞಾನಿ ಎಂದೇ ಪ್ರಸಿದ್ಧರಾಗಿದ್ದಾರೆ.
ಅತ್ಯಾಚಾರ, ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಲಖಿಂಪುರ ಖೇರಿ, ಆ. ೧೪: ದಲಿತ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮತ್ತಿಬ್ಬರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ೨೦೨೨ ಸೆಪ್ಟೆಂಬರ್ ೧೪ರಂದು ನಿಘಾಸನ್ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಸಾಮೂಹಿಕ ಅತ್ಯಾಚಾರದ ನಂತರ, ದಲಿತ ಸಹೋದರಿಯರನ್ನು ಕೊಂದು ಮರಕ್ಕೆ ನೇಣು ಹಾಕಲಾಗಿತ್ತು. ಈ ಪ್ರಕರಣ ಸಂಬAಧ ಎಡಿಜೆ ಕೋರ್ಟ್ ಅಪರಾಧಿಗಳಾದ ಜುನೈದ್ ಮತ್ತು ಸುನೀಲ್ ಅಲಿಯಾಸ್ ಛೋಟುಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಕರೀಮುದ್ದೀನ್ ಮತ್ತು ಆರಿಫ್ಗೆ ತಲಾ ಆರು ವರ್ಷ ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ದಾಖಲಾದ ನಂತರ, ಪ್ರಕರಣದ ತನಿಖೆಗಾಗಿ ಎಸ್ಐಟಿ ರಚಿಸಲಾಗಿತ್ತು. ಘಟನೆ ನಡೆದ ೧೪ ದಿನಗಳಲ್ಲಿ ಎಸ್ಐಟಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಜುನೈದ್, ಸುನೀಲ್ ಅಲಿಯಾಸ್ ಛೋಟು, ಕರಿಮುದ್ದೀನ್ ಮತ್ತು ಆರಿಫ್ ಸೇರಿದಂತೆ ಆರು ಆರೋಪಿಗಳ ವಿರುದ್ಧ ೨೦೨೨ರ ಸೆಪ್ಟೆಂಬರ್ ೨೮ರಂದು ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ ತ್ವರಿತ ತನಿಖೆ ನಡೆಸಿತ್ತು. ಸೆಪ್ಟೆಂಬರ್ ೩೦ ರಂದು ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸುವ ಸಾಕ್ಷಿಗಳನ್ನು ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್ಗೆ ಕೋರ್ಟ್ ಸೂಚಿಸಿತು. ಅಕ್ಟೋಬರ್ ೩ರಂದು ಪ್ರಾಸಿಕ್ಯೂಷನ್ ಮೃತ ಹದಿಹರೆಯದವರ ತಾಯಿಯನ್ನು ಮೊದಲ ಸಾಕ್ಷಿಯಾಗಿ ಹಾಜರುಪಡಿಸಿತು.
ಮಹಾರಾಷ್ಟç ಸಿಎಂ ಬದಲಾವಣೆಗೆ ತಯಾರಿ ; ಕಾಂಗ್ರೆಸ್
ಮುAಬೈ, ಆ. ೧೪: ಮಹಾರಾಷ್ಟç ಸಿಎಂ ಬದಲಾವಣೆಗೆ ತಯಾರಿ ನಡೆಯುತ್ತಿದೆ ಎಂದು ಕಾಂಗ್ರೆಸ್, ವಿಪಕ್ಷ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ. ಶಿಂಧೆ ಆಸ್ಪತ್ರೆಗೆ ದಾಖಲಾದ ಬಳಿಕ ಆರೋಗ್ಯದ ಕಾರಣವನ್ನು ನೀಡಿ, ಸಿಎಂ ಹುದ್ದೆಯಲ್ಲಿ ಬದಲಾವಣೆ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದು ವಿಜಯ್ ಹೇಳಿದ್ದಾರೆ. ಶಿಂಧೆ ಅವರನ್ನು ಸಿಎಂ ಹುದ್ದೆಯಿಂದ ಬದಲಾವಣೆ ಮಾಡುವ ಊಹಾಪೋಹಗಳ ನಡುವೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಡಿಸಿಎಂ ಅಜಿತ್ ಪವಾರ್ ಪುಣೆಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ್ದು, ಅಜಿತ್ ಪವಾರ್ ಸಿಎಂ ಆಗುವ ಸಾಧ್ಯತೆಗಳಿವೆ ಎಂದು ವಿಜಯ್ ಆರೋಪಿಸಿದ್ದಾರೆ.