ಕೂಡಿಗೆ, ಆ. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಸಹಕಾರ ಮಹಿಳಾ ಸಮಾಜ ನಿಯಮಿತ, ಇದರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಸಮುದಾಯದ ಭವನದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಅರುಣಾಕ್ಷಿ ಮತ್ತು ಶಾರದಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಆಶಾ ಮತ್ತು ಗೌರಿ ನಾಮಪತ್ರವನ್ನು ಸಲ್ಲಿದರು. ಇದರಲ್ಲಿ ಅರುಣಾಕ್ಷಿ ಅವರಿಗೆ ೭ ಮತಗಳು ಲಭಿಸಿದ್ದು, ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದರು. ಗೌರಿ ಅವರು ೮ ಮತಗಳನ್ನು ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣೆ ಸಂದರ್ಭ ಸಮಾಜದ ಸುಮತಿ, ಅರುಣಾಕ್ಷಿ, ಗೌರಿ, ಕಮಲಾಕ್ಷಿ, ಪ್ರೇಮಲತಾ, ಶಾರದಮ್ಮ, ಲಲಿತಾಮಣಿ, ಸುಧಾಮಣಿ, ಶೀಲಾ, ಯಶೋಧ, ಮಂಜುಳ, ಆಶಾ ಇದ್ದರು. ಚುನಾವಣಾ ಪ್ರಕ್ರಿಯೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ನೆರವೇರಿಸಿದರು. ಈ ಸಂದರ್ಭ ಕಾರ್ಯದರ್ಶಿ ವೈ.ಸಿ. ಶೋಭಾ ಇದ್ದರು.