ಬೆಂಗಳೂರು, ಆ. ೧೩: ಇಂದು ಕೇವಲ ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳಂತಹ ಅಗತ್ಯ ವಸ್ತುಗಳ ಜತೆಗೇ ನಮ್ಮ ದೈನಂದಿನ ಬಳಕೆಯ ಕಾಫಿಯ ದರವೂ ದುಬಾರಿಯಾಗಿದೆ. ಬೆಂಗಳೂರಿನ ಕಾಫಿ ಮಾರಾಟಗಾರರು ಜುಲೈನಲ್ಲಿ ಕಾಫಿ ದರಗಳನ್ನು ಗಣನೀಯವಾಗಿ ಏರಿಸಿದ್ದಾರೆ. ಅಲ್ಲದೆ ಮುಂಬರುವ ತಿಂಗಳುಗಳಲ್ಲಿ ದರ ಮತ್ತಷ್ಟು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ. ಕಾಫಿಯ ಬ್ರ್ಯಾಂಡ್ ಮತ್ತು ಪ್ರಕಾರವನ್ನು ಅವಲಂಬಿಸಿ ಗ್ರಾಹಕರು ಶೇ. ೧೦ ರಿಂದ ೨೫ ರಷ್ಟು ದರ ನೀಡಬೇಕಾಗಿದೆ.
ಪ್ರಸ್ತುತ, ಫಿಲ್ಟರ್ ಕಾಫಿ ಕೆ.ಜಿ.ಗೆ ೪೦೦ ರಿಂದ ೫೦೦ ರೂಪಾಯಿಗಳವರೆಗೆ ಏರಿಕೆ ಆಗಿದೆ. ಈ ದರ ಕಳೆದ ತಿಂಗಳು ಕಿಲೋಗೆ ೪೦೦-೪೨೦ ರೂಪಾಯಿಗಳ ಒಳಗೇ ಇತ್ತು. ಇನ್ನು ಕಂಪೆನಿಗಳು ಮಾರಾಟ ಮಾಡುವ ಇನ್ಸ್ಟಂಟ್ ಕಾಫಿಯ ದರದಲ್ಲೂ ಶೇ. ೧೦ ರಿಂದ ೨೦ ರವರೆಗೆ ಏರಿಕೆ ದಾಖಲಾಗಿದೆ. ಈ ಮಾದರಿಯ ಕಾಫಿಯಲ್ಲಿ ಈಗ ಚಿಕೋರಿ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕಾಫಿಯಲ್ಲಿ ಶೇ. ೨೦ ರಿಂದ ೩೦ ರಷ್ಟು ಚಿಕೋರಿ ಬೆರೆಸುವುದು ವಾಡಿಕೆ ಆಗಿದ್ದರೂ ಕಡಿಮೆ ದರದ ಇನ್ಸ್ಟಂಟ್ ಕಾಫಿಯಲ್ಲಿ ಶೇ. ೪೩ ರಷ್ಟು ಚಿಕೋರಿ ಬೆರೆಸಿ ಸ್ಟಾçಂಗ್ ಕಾಫಿ ಎಂದು ಮಾರಾಟ ಮಾಡಲಾಗುತ್ತಿದೆ.
ಕಳೆದ ವಾರದ ಹಾಲಿನ ಬೆಲೆ ಲೀಟರಿಗೆ ೩ ರೂಪಾಯಿನಷ್ಟು ಹೆಚ್ಚಿಸಿದ ಬೆನ್ನಲ್ಲೇ ಈ ದರ ಹೆಚ್ಚಳಕ್ಕಾಗಿಯೇ ಕಾಯುತಿದ್ದ ಹೊಟೇಲ್ಗಳು ಮತ್ತು ರೆಸ್ಟೋರೆಂಟ್ಗಳು ಕಾಫಿಯ ದರವನ್ನು ಕಪ್ಗೆ ಎರಡರಿಂದ ಮೂರು ರೂಪಾಯಿಗಳಷ್ಟು ಏರಿಸಿವೆ. ೧೦ ರೂಪಾಯಿನ ಕಾಫಿ ಈಗ ೧೨ ಹಾಗೂ ೧೨ ರೂಪಾಯಿ ಕಪ್ ಇದ್ದ ಕಾಫಿ ಈಗ ೧೫ ರೂಪಾಯಿ ಆಗಿದೆ.
“ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ ಮತ್ತು ಇದು ತಾತ್ಕಾಲಿಕವಲ್ಲ. ಕಳೆದ ಎರಡು ತಿಂಗಳಲ್ಲಿ ನಮ್ಮ ವಿದ್ಯುತ್ ಬಿಲ್ಗಳು ಗಣನೀಯ ಏರಿಕೆ ಕಂಡಿವೆ. ನಮ್ಮ ರೆಸ್ಟೋರೆಂಟ್ ಸ್ಥಳಗಳು ನಮ್ಮ ಒಡೆತನದಲ್ಲಿಲ್ಲ ಮತ್ತು ಭೂಮಾಲೀಕರು ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ನಾವು ಆಹಾರದ ಬೆಲೆಗಳನ್ನು ಹೆಚ್ಚಿಸದಿದ್ದರೆ, ನಾವು ನಮ್ಮ ಹೊಟೇಲ್ಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೊಟೇಲ್ಗಳ ಮಾಲೀಕರ ಸಂಘದ ಸದಸ್ಯ ಪ್ರವೀಣ್ ಡಿ. ಜಥನ್ ಹೇಳಿದರು. ಹೊಟೇಲ್ಗಳಷ್ಟೇ ಅಲ್ಲ, ಗೃಹಿಣಿಯರು, ಸಣ್ಣ ತಿನಿಸುಗಳು ಮತ್ತು ಕಾಫಿ ಮಾರಾಟಗಾರರು ವರ್ಗಗಳಾದ್ಯಂತ ಹೆಚ್ಚಿದ ಬೆಲೆಗಳ ಹೊಡೆತವನ್ನು ಅನುಭವಿಸುತ್ತಿದ್ದಾರೆ. "ಕಚ್ಚಾ ವಸ್ತು ಮತ್ತು ಸಾಗಣೆಯ ಬೆಲೆ ಹೆಚ್ಚಾಗಿದೆ ಮತ್ತು ಕಾಫಿ ಬೀಜಗಳನ್ನು ಮಿಶ್ರಣ ಮಾಡಲು ಬಳಸುವ ಯಂತ್ರೋಪಕರಣಗಳು ದುಬಾರಿಯಾಗಿದೆ ಎಂದು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ (ಃBಊಂ) ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಹೇಶ್ ಶಶಿಧರ್ ಮಾತನಾಡಿ, ‘ಅಂರ್ರಾಷ್ಟಿçÃÃಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿದ್ದು, ಕಳೆದೆರಡು ವರ್ಷಗಳಿಂದ ಹವಾಮಾನ ವೈಪರೀತ್ಯವಾಗಿದೆ. ಕಾಫಿ ತೋಟಗಳಿಗೆ ಬಳಸುವ ರಸಗೊಬ್ಬರಗಳ ಬೆಲೆ ಕೂಡ ಶೇ. ೧೦ ರಷ್ಟು ಹೆಚ್ಚಾಗಿದೆ. ಪ್ರತಿ ರೈತ ಪ್ರತಿ ಯೂನಿಟ್ ಪ್ರದೇಶದ ಉತ್ಪಾದನೆಯು ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು. ಆದರೆ, ಬೆಲೆ ಏರಿಕೆಯಿಂದ ಕಾಫಿ ಬೆಳೆಗಾರರಿಗೆ ಲಾಭವಾಗುತ್ತಿಲ್ಲ ಎಂದರು.
ಅನೇಕರು ಕೋವಿಡ್ ಸಮಯದಲ್ಲಿ ಉಂಟಾದ ನಷ್ಟವನ್ನು ಭರ್ತಿ ಮಾಡಿಕೊಳ್ಳುತಿದ್ದಾರೆ ಮತ್ತು ಅನೇಕ ಮಾರಾಟಗಾರರು ತಮ್ಮದೇ ಆದ ರೀತಿಯಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ. "ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾಫಿ ಬೆಲೆಗಳಲ್ಲಿನ ಹಣದುಬ್ಬರವು ಕೇವಲ ಶೇ. ೫ ಆಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರಗಳನ್ನು ಶೇ. ೨೦ ರಿಂದ ೩೦ ರಷ್ಟು ಹೆಚ್ಚಿಸಲಾಗಿದೆ.
- ಕೋವರ್ಕೊಲ್ಲಿ ಇಂದ್ರೇಶ್