ಐದು ರಾಜ್ಯಗಳಲ್ಲಿ ಎನ್‌ಐಎ ದಾಳಿ

ನವದೆಹಲಿ, ಆ. ೧೩: ಜನರಲ್ಲಿ ಕೋಮು ಭಾವನೆಗಳನ್ನು ಹುಟ್ಟುಹಾಕುವ ಮೂಲಕ ಶಾಂತಿ ಕದಡುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' (ಪಿಎಫ್‌ಐ) ಪಿತೂರಿಯನ್ನು ವಿಫಲಗೊಳಿಸುವ ತನ್ನ ನಿರಂತರ ಪ್ರಯತ್ನದಲ್ಲಿ ಎನ್‌ಐಎ ಇಂದು ಐದು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಫೆಡರಲ್ ಏಜೆನ್ಸಿಯ ವಕ್ತಾರರು ಕರ್ನಾಟಕ, ಕೇರಳ, ಮಹಾರಾಷ್ಟç, ಪಶ್ಚಿಮ ಬಂಗಾಳ ಮತ್ತು ಬಿಹಾರದ ೧೪ ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಹಲವಾರು ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳು, ಕರ್ನಾಟಕದ ದಕ್ಷಿಣ ಕನ್ನಡ, ಮಹಾರಾಷ್ಟçದ ನಾಸಿಕ್ ಮತ್ತು ಕೊಲ್ಹಾಪುರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಬಿಹಾರದ ಕತಿಹಾರ್‌ನಲ್ಲಿ ಎನ್‌ಐಎ ದಾಳಿ ನಡೆಸಿದೆ. ಭಯೋತ್ಪಾದನೆ, ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ೨೦೪೭ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಸಶಸ್ತç ಕೇಡರ್ ಅನ್ನು ರಚಿಸಲು ಮತ್ತು ಅದರ ಉನ್ನತ ನಾಯಕತ್ವದ ಪ್ರಯತ್ನಗಳನ್ನು ಬಹಿರಂಗಪಡಿಸಲು ಮತ್ತು ತಡೆಯಲು ಓIಂ ಕೆಲಸ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆ ದಾಳಿಗಳು ನಡೆದಿವೆ.

ನಟ ಉಪೇಂದ್ರ ವಿರುದ್ಧ ಎಫ್.ಐ.ಆರ್.

ಬೆಂಗಳೂರು, ಆ. ೧೩: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ನೇರಪ್ರಸಾರದ ವೇಳೆ ಅವಹೇಳನಕಾರಿ ಪದ ಬಳಸಿ ಜಾತಿ ನಿಂದನೆ ಮಾಡಿದ ಆರೋಪದಡಿ ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಮಧುಸೂದನ್ ಕೆ.ಎನ್. ಅವರು ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ದೂರುದಾರರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗುವುದು. ನಂತರ, ಆರೋಪಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗುವುದು. ಆರೋಪಿ ನೀಡಿರುವ ಹೇಳಿಕೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿವೆ.

ನೀರಿನಲ್ಲಿ ಮುಳುಗಿ ನಾಲ್ವರ ಸಾವು

ತುಮಕೂರು, ಆ. ೧೩: ಕೈಕಾಲು ತೊಳೆಯಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ನಡೆದಿದೆ. ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಗೋಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ೧೧ ವರ್ಷದ ಶಂಕರ್ ಮತ್ತು ರಕ್ಷಿತ್ ಮುಳುಗಿದ್ದಾರೆ. ಈ ವೇಳೆ ಜೊತೆಯಲ್ಲಿ ಇದ್ದ ಲಕ್ಷಿö್ಮ ಎಂಬವರು ರಕ್ಷಿಸಲು ಹೋಗಿ ಮುಳುಗಿದ್ದು ಇದನ್ನು ಕಂಡ ಸ್ಥಳೀಯ ವ್ಯಕ್ತಿ ಮಹಾದೇವಪ್ಪ ಎಂಬುವರು ಸಹ ರಕ್ಷಿಸಲು ಹೋಗಿ ಅವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳಾದ ಶಂಕರ್ ಹಾಗೂ ರಕ್ಷಿತ್ ರಾಮನಗರ ನಿವಾಸಿಗಳಾಗಿದ್ದು ಲಕ್ಷಿö್ಮ ನೆಲಮಂಗಲ ಹಾಗೂ ಮಹಾದೇವಪ್ಪ ಯಾದಗಿರಿ ನಿವಾಸಿಯಾಗಿದ್ದಾರೆ. ಅದೃಷ್ಟವಶಾತ್ ನೀರಿಗೆ ಇಳಿದಿದ್ದ ರಂಜಿತ್ ಎಂಬ ಇನ್ನೊಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.

ಚೀನಾ ಇಂಜಿನಿಯರ್‌ಗಳ ಬೆಂಗಾವಲು ಪಡೆ ಮೇಲೆ ದಾಳಿ

ಗ್ವದಾರ್, ಆ. ೧೩: ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಈಗ ಚೀನಾ ಇಂಜಿನಿಯರ್‌ಗಳ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಗಿದೆ. ಗ್ವದಾರ್‌ನ ಪೊಲೀಸ್ ಠಾಣೆಯ ಬಳಿ ಭಾನುವಾರದಂದು ಈ ಘಟನೆ ವರದಿಯಾಗಿದೆ. ಬೆಂಗಾವಲು ಪಡೆಯ ೩ ಎಸ್‌ಯುವಿ ಹಾಗೂ ವ್ಯಾನ್‌ಗಳು ಗುಂಡು ನಿರೋಧಕ ವಾಹನಗಳಾಗಿದ್ದು ಇದರಲ್ಲಿ ಚೀನಾದ ೨೩ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು. ದಾಳಿಯ ಸಮಯದಲ್ಲಿ ಐಇಡಿ ಸ್ಫೋಟಗೊಂಡಿದ್ದು ವ್ಯಾನ್‌ಗೆ ಗುಂಡು ಹಾರಿಸಲಾಗಿದೆ. ದಾಳಿಯ ಪರಿಣಾಮ ಗಾಜಿನಲ್ಲಿ ಬಿರುಕುಗಳುಂಟಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಬಿ.ಇಡಿ. ಕಡ್ಡಾಯವಲ್ಲ - ಸುಪ್ರೀಂ ಕೋರ್ಟ್

ನವದೆಹಲಿ, ಆ. ೧೩: ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅರ್ಹತೆ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ‘ಸ್ವೇಚ್ಛೆ’ಯಿಂದ ಕೂಡಿದೆ ಮತ್ತು ‘ಅತಾರ್ಕಿಕ’ವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಮಾತ್ರವಲ್ಲದೇ ಬಿ.ಇಡಿ. ಕಡ್ಡಾಯವಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಸರ್ಕಾರದ ಆದೇಶವನ್ನು ವಜಾಗೊಳಿಸಿದೆ. ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯ್ದೆಗೂ ಈ ನಿರ್ಧಾರಕ್ಕೂ ಸಂಬAಧ ಇಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡಬೇಕು ಎಂದು ಎನ್‌ಸಿಟಿಇ ೨೦೧೮ರ ಜೂನ್ ೨೮ ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು, 'ಪ್ರಾಥಮಿಕ ಹಂತದ ತರಗತಿಗಳಲ್ಲಿ ಕಲಿಸಲು ಬಿ.ಇಡಿ. ಅರ್ಹತೆಯ ಅಗತ್ಯ ಇಲ್ಲ. ಈ ತರಗತಿಗಳಲ್ಲಿ ಕಲಿಸಲು ಭಿನ್ನವಾದ ಅರ್ಹತೆ ಅಗತ್ಯ ಇದೆ. ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಬಿ.ಇಡಿ. ವಿದ್ಯಾರ್ಹತೆ ಇರುವವರು ಆಯ್ಕೆ ಆಗಿದ್ದರೆ ನೇಮಕವಾಗಿ ಎರಡು ವರ್ಷಗಳೊಳಗೆ ಬೋಧನೆಗೆ ಸಂಬAಧಿಸಿದ ಕೋರ್ಸ್ ಒಂದನ್ನು ಪೂರ್ಣಗೊಳಿಸಬೇಕು ಎಂದು ಬೋಧನಾ ಶಿಕ್ಷಣ ರಾಷ್ಟಿçÃಯ ಪರಿಷತ್ (ಎನ್‌ಸಿಟಿಇ) ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ' ಎಂದು ಹೇಳಿದೆ.

ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧ

ಬೆಂಗಳೂರು, ಆ. ೧೩: ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಚಂಡೀಗಢದಲ್ಲಿರುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ಆ. ೮ ರಿಂದ ೧೦ ರವರೆಗೆ ಡ್ರೋಗ್ ಪ್ಯಾರಾಚೂಟ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಡ್ರೋಗ್ ಪ್ಯಾರಾಚೂಟ್‌ಗಳ ಮೇಲೆ ಇಸ್ರೋ ನಡೆಸಿದ ಸರಣಿ ಪರೀಕ್ಷೆಗಳ ಯಶಸ್ವಿಯಾಗಿವೆ. ಈ ಪರೀಕ್ಷೆಗಳಿಗೆ ಆಗ್ರಾದಲ್ಲಿರುವ ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಡಿಆರ್‌ಡಿಇ) ಮತ್ತು ಡಿಆರ್‌ಡಿಒ ಪೂರ್ಣ ಸಹಕಾರ ನೀಡಿವೆ. ಈ ಪರೀಕ್ಷೆಯು ಗಗನಯಾನ ನೌಕೆಯನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕಳುಹಿಸಿ ಮರಳಿ ಕರೆಸಿಕೊಳ್ಳಲು ಪೂರಕವಾಗಿದೆ. ಗಗನಯಾನ ನೌಕೆ ಮರಳಿ ಭೂಮಿಗೆ ಇಳಿಯುವಾಗ ಅದರ ವೇಗವನ್ನು ನಿಯಂತ್ರಿಸಲು ಡ್ರೋಗ್ ಪ್ಯಾರಾಚೂಟ್ ಸಹಾಯ ಮಾಡುತ್ತದೆ. ಈ ಪ್ಯಾರಾಚೂಟನ್ನು ಮಾರ್ಟರ್ ಎಂಬ ಸಾಧನದಲ್ಲಿ ಇರಿಸಲಾಗಿರುತ್ತದೆ. ಪರಿಸ್ಥಿತಿಗನುಗುಣವಾಗಿ ನೀಡಲ್ಪಟ್ಟ ಆದೇಶಕ್ಕೆ ತಕ್ಕಂತೆ ಇದು ತೆರೆದುಕೊಳ್ಳುತ್ತದೆ. ಗಗನಯಾನ ನೌಕೆಯ ಹಿಂಭಾಗದಲ್ಲಿ ಇದು ೫.೮ ಮೀಟರ್ ಉದ್ದಕ್ಕೆ ಚಾಚಿಕೊಳ್ಳುತ್ತದೆ. ಇದು ಏಕ-ಹಂತದ ರೀಫಿಂಗ್ ಕಾರ್ಯವಿಧಾನವನ್ನು ಬಳಸಿಕೊಳ್ಳುತ್ತವೆ. ಪ್ಯಾರಾಚ್ಯೂಟ್‌ಗಳು ಹರಡಿಕೊಂಡಾಗ ಆರಂಭಿಕ ಆಘಾತವನ್ನು ತಗ್ಗಿಸುತ್ತದೆ. ಮೃದುವಾದ ಮತ್ತು ನಿಯಂತ್ರಿತ ಲ್ಯಾಂಡಿAಗ್ ಅನ್ನು ಖಾತ್ರಿಗೊಳಿಸುತ್ತದೆ ಎಂದು ಇಸ್ರೋ ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ

ಶ್ರೀನಗರ, ಆ. ೧೩: ಸ್ವಾತಂತ್ರö್ಯ ದಿನಾಚರಣೆಯಂದು ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದAತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಭದ್ರತೆಗಳನ್ನು ಕೈಗೊಳ್ಳಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶ್ರೀನಗರ ವಲಯದ ಇನ್ಸ್ಪೆಕ್ಟರ್ ಜನರಲ್ ಅಜಯ್ ಕುಮಾರ್ ಯಾದವ್ ಅವರು ಮಾತನಾಡಿ, ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ, ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ, ಅದನ್ನು ಎದುರಿಸಲು ಸಿದ್ಧರಿದ್ದೇವೆಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಸಿಆರ್‌ಪಿಎಫ್ ಪಡೆ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದು, ಜನರು ಮತ್ತು ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್ಗಳು ಮತ್ತು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.