ಭಾಗಮಂಡಲ, ಆ. ೧೨: ಭಾಗಮಂಡಲ ಗ್ರಾಮ ಪಂಚಾಯತ್ ವತಿಯಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಭಾಗಮಂಡಲ ಬಳ್ಳಡ್ಕ ಕುಟುಂಬಸ್ಥರ ಗದ್ದೆಯಲ್ಲಿ ಗ್ರಾಮೀಣ ಕೆಸರು ಗದ್ದೆ ಕ್ರೀಡಾ ಕೂಟ ಆಯೋಜಿಸಲಾಗಿದೆ. ಹಗ್ಗ ಜಗ್ಗಾಟ, ಪುರುಷ, ಮಹಿಳೆಯರಿಗೆ, ಓಟದ ಸ್ಪರ್ಧೆ, ಮಕ್ಕಳಿಗೆ, ದೊಡ್ಡವರಿಗೆ, ೬೦ ವಯಸ್ಸು ಮೇಲ್ಪಟ್ಟವರಿಗೆ, ದಂಪತಿಗಳಿಗೆ ಸಮಭಾರ ಓಟ, ಮಕ್ಕಳಿಗೆ ಅಡಿಕೆ ಹಾಳೆ ಎಳೆಯುವುದು, ವಿಷದ ಚೆಂಡು ಮಹಿಳೆಯರಿಗೆ ನಡೆಯಲಿದೆ. ತಾ. ೧೪ರ ಮಧ್ಯಾಹ್ನ ೧೨ ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ೯೪೪೯೪೦೨೩೫೧, ೯೪೮೦೭೩೦೦೯೫ಗೆ ಸಂಪರ್ಕಿಸ ಬಹುದಾಗಿದೆ.