ಬದಲಾಗುತ್ತಿರುವ ಜೀವನಶೈಲಿ, ದಿನನಿತ್ಯದ ಜಂಜಾಟ, ಒತ್ತಡಗಳಿಂದ ಬಹು ಅಂಗಾAಗ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಇದರಿಂದ ಮೃತಪಡುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುತ್ತಿದೆ.

ಅಂಗಾAಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸಲು ಅಂಗಾAಗ ಕಸಿ ಅನಿವಾರ್ಯ. ಕರ್ನಾಟಕದಲ್ಲಿ ಸುಮಾರು ಐದೂವರೆ ಸಾವಿರಕ್ಕೂ ಅಧಿಕ ಮಂದಿ ಅಂಗಾAಗ ದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ದೇಹದಲ್ಲಿ ಪ್ರತಿ ೯ ನಿಮಿಷಕ್ಕೆ ಒಬ್ಬರು ಅಂಗಾAಗ ಕಸಿಗೆ ಬೇಡಿಕೆ ಮುಂದಿಡುವವರ, ಕಾಯುವಿಕೆಯ ಸರದಿಯ ಪಟ್ಟಿಗೆ (Wಚಿiಣiಟಿg ಟisಣ) ಸೇರ್ಪಡೆಯಾಗುತ್ತಿದ್ದಾರೆ.

ಆದರೆ, ಅಂಗ ದಾನಕ್ಕೆ ಮುಂದಾಗುವವರ ಸಂಖ್ಯೆ ದೇಶದಲ್ಲಿ ತೀರಾ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಇದಕ್ಕಾಗಿ ಕಾಯುತ್ತಿರುವವರು ಪ್ರತಿನಿತ್ಯ ಜೀವನ್ಮರಣದ ಯಾತನೆಯಲ್ಲಿ ದಿನದೂಡುವಂತಾಗಿದೆ.

ಇAದು ವಿಶ್ವ ಅಂಗಾAಗ ದಾನ ದಿನ. ಅಂಗಾAಗ ದಾನದ ಬಗ್ಗೆ ಜನಜಾಗೃತಿ ಮೂಡಿಸುವುದು ಇದರ ಉದ್ದೇಶ. ನಮ್ಮ ದೇಶದಲ್ಲಿ ಆಗಸ್ಟ್ ೩ ರಂದು ‘ಅಂಗದಾನ ಮಾಡಿ ಜೀವ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟಿçÃಯ ಅಂಗದಾನ ದಿನವನ್ನು ಆಚರಿಸಲಾಗಿದೆ.

ಮೆದುಳು ನಿಷ್ಕಿçಯಗೊಂಡು ಜೀವ ಅಂತ್ಯವಾಗುವ ಹಂತದಲ್ಲಿರುವ ವ್ಯಕ್ತಿ, ಮೆದುಳು ಪಾಸ್ವವಾಯುವಿಗೀಡಾಗಿರುವ ವ್ಯಕ್ತಿ ಅಂಗದಾನ ಮಾಡಬಹುದು. ಜೀವಂತ ವ್ಯಕ್ತಿಗಳೂ ಕೆಲವು ಅಂಗಗಳನ್ನು ದಾನ ಮಾಡಬಹುದು. ದೇಹದ ಅಂಗಗಳ ದಾನ ಮಾಡುವ ಕುರಿತ ಮೂಢನಂಬಿಕೆ, ಮಿಥ್ಯೆಗಳನ್ನು ದೂರಸರಿಸಿದರೆ, ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು.

ಕ್ಯಾನ್ಸರ್, ಏಡ್ಸ್ ಸೋಂಕುಗಳಿಲ್ಲದೆ ಆರೋಗ್ಯವಂತ ವ್ಯಕ್ತಿ ಮೃತರಾದ ಸಂದರ್ಭ, ಕುಟುಂಬದ ಸದಸ್ಯರು ತಡಮಾಡದೆ ಮೃತಪಟ್ಟ ವ್ಯಕ್ತಿಯ ಅಂಗದಾನಕ್ಕೆ ಮುಂದಾಗಬಹುದು. ಮೃತ ದೇಹಕ್ಕೆ ಅಗ್ನಿಸ್ಪರ್ಶ ಅಥವಾ ಮಣ್ಣು ಮಾಡುವ ಯೋಚನೆಗೆ ಮೊದಲು, ಮೃತಪಟ್ಟ ವ್ಯಕ್ತಿ ಇತರರ ಬಾಳಿಗೆ ಬೆಳಕಾಗಬಹುದು. ತಾನು ಸತ್ತ ನಂತರವೂ ಇತರರ ದೇಹದಲ್ಲಿ ತನ್ನ ಅಂಗಾAಗಗಳಿಗೆ ಜೀವ ನೀಡಬಹುದು ಎಂಬ ಉದಾತ್ತ ಚಿಂತನೆಗೆ ಮುಂದಾಗಬೇಕು. ಇದರಿಂದ ಜೀವನ ಸಾರ್ಥಕತೆ ಮೆರೆಯಬಹುದು.

ವಿಶ್ವದಲ್ಲಿ ಮೊದಲ ಅಂಗಾAಗ ಕಸಿ ೧೯೫೪ ರಲ್ಲಿ ಅಮೇರಿಕಾದಲ್ಲಿ ಯಶಸ್ವಿಯಾಗಿ ಮಾಡಲಾಯಿತು. ರೊನಾಲ್ಡ್ ಲೀ ಹೆರಿಕ್ ಎನ್ನುವ ವ್ಯಕ್ತಿ ತನ್ನ ಅವಳಿ ಸಹೋದರನಿಗಾಗಿ ನೀಡಿದ ಮೂತ್ರಪಿಂಡವನ್ನು (ಏiಜಟಿeಥಿ) ವೈದ್ಯ ಡಾ. ಜೋಸೆಫ್ ರ‍್ರೆ ಯಶಸ್ವಿಯಾಗಿ ಕಸಿ ಮಾಡಿದರು. ಅಂಗಾAಗ ಕಸಿ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ವೈದ್ಯರಿಗೆ ೧೯೯೦ ರಲ್ಲಿ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ಸಂದಿದೆ. ಭಾರತದಲ್ಲಿ ಮೊದಲ ಬಾರಿಗೆ ೧೯೯೪ ರ ಆಗಸ್ಟ್ ೩ ರಂದು ಹೃದಯದ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು.

ಚೆನ್ನೆöÊಯಲ್ಲಿ ಹೃದಯ ಕಸಿ ಮಾಡುವ ಆಸ್ಪತ್ರೆಯಲ್ಲಿ ವರ್ಷಕ್ಕೆ ಸುಮಾರು ೨೦ ರಿಂದ ೨೫ ಹೃದಯ ಮತ್ತು ಶ್ವಾಸಕೋಶ ಕಸಿ ಮಾಡಲಾಗುತ್ತಿದೆ. ದೇಶದ ನಾನಾ ಆಸ್ಪತ್ರೆಗಳಲ್ಲಿ ಪ್ರತಿವರ್ಷ ಸುಮಾರು ೪ ಸಾವಿರ ಮೂತ್ರಪಿಂಡಗಳು ಮತ್ತು ೫೦೦ ಯಕೃತ್ (ಐiveಡಿ) ಕಸಿ ಮಾಡಲಾಗುತ್ತಿದೆ. ಇವರಲ್ಲಿ ಬಹು ಅಂಗಾAಗ ವೈಫಲ್ಯದಿಂದ ಬಳಲುತ್ತಿರುವ ಬಂಧುಗಳಿಗೆ ದೇಹದ ಅಂಗದಾನ ಮಾಡುವ ಬಂಧುಗಳೇ ಹೆಚ್ಚು. ಕಣ್ಣಿನ ಕಾರ್ನಿಯಾ ಕಸಿಗೆ ಸುಮಾರು ೨ ಲಕ್ಷ ಮಂದಿಯಿAದ ಬೇಡಿಕೆ ಇದ್ದರೆ, ವಾರ್ಷಿಕ ಕೇವಲ ೫೦ ಸಾವಿರ ಜನರು ನೇತ್ರದಾನ ಮಾಡುತ್ತಿದ್ದಾರೆ.

ದೇಶದಲ್ಲಿ ಕೇವಲ ಶೇ. ೦.೦೧ ರಷ್ಟು ಮಂದಿ ಮೃತಪಟ್ಟ ನಂತರ ಅಂಗದಾನ ಮಾಡುತ್ತಿದ್ದಾರೆ ಮತ್ತು ಶೇ. ೩ ರಷ್ಟು ಜನರು ಮಾತ್ರ ಅಂಗದಾನಕ್ಕೆ ನೋಂದಣಿ ಮಾಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ೨೦ ರಿಂದ ೪೦ ವರ್ಷ ವಯೋಮಾನದವರಿಗೂ ಅಂಗಾAಗ ಕಸಿಯ ಅಗತ್ಯ ಹೆಚ್ಚತೊಡಗಿದೆ. ಅದರಲ್ಲೂ ತುರ್ತಾಗಿ ಮೂತ್ರಪಿಂಡ ಕಸಿಗೆ ಕಾಯುತ್ತಿರುವವರೇ ಅಧಿಕ.

ಅಂಗಾAಗ ದಾನ ಮಾಡಲು ಮತ್ತು ಪಡೆಯಲು ವಯಸ್ಸಿನ ಮಿತಿ ಇಲ್ಲ. ೧೮ ವರ್ಷದೊಳಗಿನವರು ಅಂಗದಾನ ಮಾಡಲು ಮುಂದಾದರೆ ಪೋಷಕರ ಅನುಮತಿ ಅಗತ್ಯ. ವ್ಯಕ್ತಿಯ ಮೆದುಳು ನಿಷ್ಕಿçಯವಾದಾಗ ಹೃದಯ ಬಡಿತವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಆ ವ್ಯಕ್ತಿಯ ಕಣ್ಣು, ಕಿವಿ, ಯಕೃತ್ ದಾನ ಮಾಡಲು ಕುಟುಂಬದ ಸದಸ್ಯರು ಮನಸ್ಸು ಮಾಡಬಹುದು. ಮರಣದ ನಂತರ ತಡಮಾಡದೆ ಹೃದಯ, ಮೂತ್ರಪಿಂಡ, ಕರುಳು, ಶ್ವಾಸಕೋಶ, ಯಕೃತ್, ಚರ್ಮ, ಮೇದೋಜೀಕರ ಗೃಂಥಿ, ಜೀವಕಣ ದಾನ ಮಾಡಬಹುದು.

ಆರೋಗ್ಯವಂತರಾಗಿರುವ ಜೀವಂತ ವ್ಯಕ್ತಿಗಳು ಒಂದು ಮೂತ್ರಪಿಂಡ, ಒಂದು ಶ್ವಾಸಕೋಶ, ಯಕೃತ್, ಕರುಳು ಮತ್ತು ಮೇದೋಜೀರಕ ಗ್ರಂಥಿಯ ಭಾಗವನ್ನು ದಾನ ಮಾಡಬಹುದು. ಆರೋಗ್ಯವಂತ ವ್ಯಕ್ತಿ ಯಕೃತ್ತಿನ ಒಂದು ಭಾಗ ದಾನ ಮಾಡಿದರೆ ಅದು ೬ ವಾರಗಳಲ್ಲಿ ಮೊದಲಿನ ಗಾತ್ರದಷ್ಟಕ್ಕೆ ಬೆಳೆಯುತ್ತದೆ. ಹೀಗೆ ಓರ್ವ ವ್ಯಕ್ತಿಯ ಅಂಗದಾನದಿAದ ಸುಮಾರು ೮ ವ್ಯಕ್ತಿಗಳು ಮರುಹುಟ್ಟು ಪಡೆದಂತಾಗುತ್ತದೆ. ಜೊತೆಗೆ ಹೃದಯದ ಕವಾಟ, ಮೂಳೆ, ಬರ ಮೊದಲಾದವುಗಳ ಕಸಿಯಿಂದ ೫೦ ಜನರಿಗೆ ಉಪಕಾರಿಯಾಗಬಹುದು. ಅಂಗದಾನಿಗಳ ಪಟ್ಟಿಯಲ್ಲಿ ಸ್ಪೇನ್, ಅಮೇರಿಕಾ, ಕ್ರೊವೇಶಿಯಾ, ಪೋರ್ಚುಗಲ್, ಸ್ಪೇನ್ ಅಗ್ರಸ್ಥಾನಗಳಲ್ಲಿವೆ. ದೇಹಗಳ ಅಂಗಾAಗ ದಾನದಿಂದ ವ್ಯಕ್ತಿಯ ಮರಣದ ನಂತರವೂ ಹೊಸ ಬದುಕು ಆರಂಭವಾಗಬಹುದು.

ಇನ್ನು ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ, ಮೃತ ದೇಹವನ್ನು ವೈದ್ಯ ವಿಜ್ಞಾನ ಸಂಸ್ಥೆಗಳಿಗೆ ದಾನ ಮಾಡಿದರೆ, ವೈದ್ಯ ವಿದ್ಯಾರ್ಥಿಗಳ ಅಧ್ಯಯನ, ಸಂಶೋಧನೆಗೆ ನೆರವಾಗುತ್ತದೆ. ದೇಹದಾನ ಮಾಡಲಿಚ್ಚಿಸುವ ವ್ಯಕ್ತಿ ಈ ಕುರಿತು ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ವ್ಯಕ್ತಿ ಬದುಕಿರುವಾಗ ಸ್ವಇಚ್ಛೆಯಿಂದ ನೋಂದಣಿ ಮಾಡಿದರೆ ನಂತರ, ಮೃತಪಟ್ಟಾಗ ತಡಮಾಡದೆ ದೇಹವನ್ನು ವೈದ್ಯ ವಿಜ್ಞಾನ ಸಂಸ್ಥೆಗಳಿಗೆ ಒಪ್ಪಿಸಿದರೆ, ದೇಹದ ಅಂಗ ರಚನೆ ಕುರಿತು ವಿದ್ಯಾರ್ಥಿಗಳಿಗೆ ಬೋಧಿಸಲು ಸಹಕಾರಿಯಾಗುತ್ತದೆ.

ಕನ್ನಡದ ಹಿರಿಯ ನಟ ಲೋಕೇಶ್ ಮೃತಪಟ್ಟ ಸಂದರ್ಭದಲ್ಲಿ, ಅವರ ಇಚ್ಛೆಗೆ ಅನುಸಾರವಾಗಿ ದೇಹದಾನ ಮಾಡಲಾಯಿತು. ನಟ ಕಮಲ ಹಾಸನ್ ಮತ್ತು ಶಿವರಾಜಕುಮಾರ್ ತಮ್ಮ ಜೀವಿತಾವಧಿ ಮುಗಿದ ನಂತರ ದೇಹದಾನ ಮಾಡುವ ಘೋಷಣೆ ಮಾಡಿದ್ದಾರೆ. ನಟ ಸಂಚಾರಿ ವಿಜಯ್ ಮೃತಪಟ್ಟ ಸಂದರ್ಭ ಅವರ ಅಂಗದಾನ ಮಾಡಲಾಯಿತು. ಕನ್ನಡದ ವರನಟ ಡಾ. ರಾಜಕುಮಾರ್ ಮತ್ತು ಅವರ ಪುತ್ರ ಪುನಿತ್ ರಾಜಕುಮಾರ್ (ಅಪ್ಪು) ನೇತ್ರದಾನ ಮಾಡಿ ಇತರರಿಗೆ ಬೆಳಕಾದರು.

ಅಂಗಾAಗ ದಾನದ ಮಹತ್ವದ ಕುರಿತು ಕುಟುಂಬ ಸದಸ್ಯರು, ಬಂಧುಗಳು, ಗೆಳೆಯ-ಗೆಳತಿಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದು ಕೊಳ್ಳಲು ಇದು ಸಕಾಲ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಜೀವಿತಾವಧಿಯಲ್ಲಿ ಸಮಾಜದಿಂದ ಸಾಕಷ್ಟನ್ನು ಪಡೆದಿದ್ದೇವೆ. ಅಂಗದಾನ, ದೇಹದಾನದ ಮೂಲಕ ಇತರರಿಗೆ ಬೆಳಕಾಗುವ ಮೂಲಕ ಜೀವನ ಸಾರ್ಥಕತೆ ಮೆರೆಯಲು, ಆ ನಿಟ್ಟಿನಲ್ಲಿ ಚಿಂತಿಸಲು ಮುಂದಾಗೋಣ.

(ಸAಗ್ರಹ)

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೫೪೪೯೯೧೧೨.