ಕುಶಾಲನಗರ, ಆ. ೧೨: ರಾಷ್ಟçದಲ್ಲಿ ಕಾಡಾನೆಗಳ ಸಂಖ್ಯೆ ಪ್ರಮಾಣದಲ್ಲಿ ಅತಿಯಾದ ಏರಿಕೆ ಕಂಡು ಬಂದಿದ್ದು ಅವುಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ತಿಳಿಸಿದ್ದಾರೆ.

ಅವರು ಕುಶಾಲನಗರ ಸಮೀಪದ ಹಾರಂಗಿ ಆನೆ ಶಿಬಿರದಲ್ಲಿ ನಡೆದ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಆನೆಗಳ ಮೇಲೆ ದ್ವೇಷ ಸಾಧನೆ ಆಗುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ; ಆನೆ ಪರಿಸರದ ಭಾಗವಾಗಿದ್ದು ಪ್ರಕೃತಿಯ ಸಂರಕ್ಷಣೆ ಆದಲ್ಲಿ ಮಾತ್ರ ಮಾನವನ ಉಳಿವು ಸಾಧ್ಯ ಎಂದರು. ರಾಜ್ಯದಲ್ಲಿ ೬ ಸಾವಿರಕ್ಕೂ ಅಧಿಕ ಆನೆಗಳಿದ್ದು ಜಿಲ್ಲೆಯಲ್ಲಿ ಕೂಡ ಆನೆಗಳ ಸಂಖ್ಯೆ ಏರಿಕೆ ಕಂಡು ಬಂದಿದೆ. ಆನೆ - ಮಾನವ ಸಂಘರ್ಷಕ್ಕೆ ನಾವುಗಳೇ ಪರಿಹಾರ ಹುಡುಕಬೇಕಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ವನ್ಯಜೀವಿ ತಜ್ಞ ಡಾ ಚಿಟ್ಟಿಯಪ್ಪ, ಆನೆಗಳ ಆಹಾರ, ಓಡಾಡುವ ಪ್ರದೇಶಗಳ ಕೊರತೆ ಹಾಗೂ ಪ್ರಾಕೃತಿಕ ಪರಿಸರ ನಾಶ ಪ್ರಸಕ್ತ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಅರಣ್ಯ ನಾಶ ಕಾಡಿನಲ್ಲಿ ಕಂಡು ಬರುವ ಕಾಡ್ಗಿಚ್ಚು ಮತ್ತು ಆನೆಗಳು ವಲಸೆ ತೆರಳುವ ಸಂದರ್ಭ ಆಗುವ ಅಡ್ಡಿ ಆತಂಕಗಳು ಆನೆ- ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಕಾಡಾನೆಗಳಿಗೆ ಪ್ರತಿನಿತ್ಯ ಅಂದಾಜು ೩೫೦ ಕೆ.ಜಿ. ಪ್ರಮಾಣದ ಆಹಾರ, ನೀರು ಮತ್ತು ಅವುಗಳ ಓಡಾಟಕ್ಕೆ ಅಗತ್ಯವಿರುವ ೫೦ ರಿಂದ ೬೦ ಕಿಲೋಮೀಟರ್ ಸುತ್ತಳತೆಯ ಅರಣ್ಯದ ಅಗತ್ಯತೆ; ಆನೆ ಸೂಕ್ಷö್ಮ ಪ್ರಾಣಿಯಾಗಿದ್ದು, ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಶಿಬಿರದಲ್ಲಿರುವ ಎಲ್ಲಾ ಆನೆಗಳು ಆರೋಗ್ಯಕರವಾಗಿದೆ ಎಂದು ಹೇಳಿದರು.

ಆನೆ ದಿನಾಚರಣೆ ಅಂಗವಾಗಿ ಹಾರಂಗಿ ಶಿಬಿರದಲ್ಲಿದ್ದ ವಿಕ್ರಮ, ಕರ್ಣ, ವಿಕ್ರಮ, (ಮೊದಲ ಪುಟದಿಂದ) ರಾಮ, ಈಶ್ವರ, ಲಕ್ಷ್ಮಣ, ಏಕದಂತ ಆನೆಗಳಿಗೆ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಕಬ್ಬು, ಬಾಳೆಹಣ್ಣು, ಹಲಸು, ಹಲವು ರೀತಿಯ ತರಕಾರಿಗಳನ್ನು ನೀಡಿದರು.

ಈ ಸಂದರ್ಭ ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ವನ್ಯಜೀವಿ ತಜ್ಞ ಡಾ ಚಿಟ್ಟಿಯಪ್ಪ ಆನೆಗಳ ಬಗ್ಗೆ ಉಪನ್ಯಾಸ ನೀಡಿದರು.

ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಬಾಸ್ಕರ್ ನಾಯಕ್, ಸದಸ್ಯ ಮಣಿಕಂಠ, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಮಾದಪ್ಪ, ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್, ವನ್ಯಜೀವಿ ವಲಯದ ಅಧಿಕಾರಿಗಳಾದ ವಿನೋದ್ ಬಾಬು, ಕೊಟ್ರೇಶ್, ಉಪವಲಯ ಅರಣ್ಯ ಅಧಿಕಾರಿಗಳಾದ ಅನಿಲ್ ಡಿಸೋಜಾ, ರಂಜನ್, ದೇವಯ್ಯ, ವಿಲಾಸ್, ಶ್ರವಣ್ ಕುಮಾರ್, ಚೇತನ್ ಮಾವುತರು ಕಾವಾಡಿಗರು ಮತ್ತು ಸಿಬ್ಬಂದಿಗಳು ಇದ್ದರು.