ವೀರಾಜಪೇಟೆ, ಆ. ೧೧: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ಗೆ ಐದನೇ ಬಾರಿಗೆ ಅಧ್ಯಕ್ಷರಾಗಿ ಕರ್ನಂಡ ಸೋಮಯ್ಯ, ಉಪಾಧ್ಯಕ್ಷರಾಗಿ ಪಾಂಡAಡ ರಚನ್ ಮೇದಪ್ಪ ಅವಿರೋಧವಾಗಿ ಆಯ್ಕೆಯಾದರು. ಜುಲೈ ೩೧ ರಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಉಪನಿಬಂಧಕರ ಕಚೇರಿ ಅಧಿಕಾರಿ ಆಶಾ ಚುನಾವಣಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿ ಈ ಸಂಸ್ಥೆಯು ಆರ್.ಬಿ.ಐ ನ ನಿಯಮ ನಿಬಂಧನೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇತರ ರಾಷ್ಟಿçÃಕೃತ ಬ್ಯಾಂಕ್‌ಗಳು ಯಾವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಅದೇ ನಿಯಮಗಳು ನಮ್ಮ ಬ್ಯಾಂಕಿಗೂ ಅನ್ವಹಿಸುತ್ತಿದೆ. ಕಳೆದ ೪೦ ವರ್ಷಗಳಿಂದ ಪಟ್ಟಣ ಸಹಕಾರ ಬ್ಯಾಂಕ್‌ನ ಆಡಳಿತ ವ್ಯವಹಾರದಲ್ಲಿದ್ದು ಇದೇ ಬ್ಯಾಂಕ್‌ನಲ್ಲಿ ೨೫ ವರ್ಷಗಳ ಕಾಲ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಲು ಬ್ಯಾಂಕ್‌ನ ಸದಸ್ಯರುಗಳಲ್ಲಿ ಉತ್ತಮ ಒಡನಾಟ, ಬಾಂಧವ್ಯ, ಒಳ್ಳೆಯ ಅಭಿಪ್ರಾಯ ಇರುವ ಕಾರಣ ಸಾಧ್ಯವಾಗಿದೆ. ಸಂಸ್ಥೆಯಲ್ಲಿ ಎಷ್ಟು ಠೇವಣಿ ಇದೆ ಎಂಬುದು ಮುಖ್ಯವಲ್ಲ. ನಾವು ಸದಸ್ಯರುಗಳಿಗೆ ಎಷ್ಟು ಸಾಲ ನೀಡುತ್ತೇವೆ ಅದನ್ನು ಯಾವ ರೀತಿಯಲ್ಲಿ ಮರುಪಾವತಿ ಮಾಡುತ್ತಾರೆ ಎಂಬುದು ಮುಖ್ಯವಾಗಿದೆ. ಎಲ್ಲಾ ನಿರ್ದೇಶಕರುಗಳ ಸಲಹೆ ಸಹಕಾರದಿಂದ ಬ್ಯಾಂಕ್‌ನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣಾ ಸಂದರ್ಭ ನಿರ್ದೇಶಕರುಗಳಾದ ಕೋಲತಂಡ ಬೋಪಯ್ಯ, ಕಾಶಿ ಕಾವೇರಪ್ಪ, ಮಾದೇಯಂಡ ಸಂಪಿ ಪೂಣಚ್ಚ, ಮಲ್ಲಂಡ ಮಧು ದೇವಯ್ಯ, ಕಾಂಡAಡ ಚರ್ಮಣ, ಪಟ್ಟಡ ರಂಜಿ ಪೂಣಚ್ಚ, ಕೆ.ಬಿ ಪ್ರತಾಪ್, ಸುಜೀತ್, ಮನೆಯಪಂಡ ದೇಚಮ್ಮ ಕಾಳಪ್ಪ, ಕರ್ತಚಿರ ರತ್ತು ಕಾವೇರಮ್ಮ, ಹೆಚ್.ಕೆ ಮುತ್ತಮ್ಮ ಉಪಸ್ಥಿತರಿದ್ದರು.