ಮಡಿಕೇರಿ, ಆ. ೧೧: ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ತಾ. ೧೩ರಂದು ಹೊಂಬೆಳಕು ಹಾಗೂ ಮಾಸಿಕ ತತ್ವ ಚಿಂತನಾಗೋಷ್ಠಿ ನಡೆಯಲಿದೆ. ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಕೆ. ಶ್ಯಾಮ ಉದ್ಘಾಟಿಸಲಿದ್ದಾರೆ.

ಸುಲಭವಾಗಿ, ಹಾಲಿನಿಂದ ಮನೆಯಲ್ಲಿಯೇ ಅತ್ಯುತ್ತಮ ಸಾಬೂನು ತಯಾರಿಸುವುದು ಕುರಿತು

ಡಾ. ಎಸ್.ವಿ. ನರಸಿಂಹನ್

ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.