ಪೊನ್ನಂಪೇಟೆ, ಆ. ೧೧: ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿ ಪದಗ್ರಹಣ ಸಮಾರಂಭ ಮತ್ತು ಹೊಸದಾಗಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ಸಂತ ಅಂತೋಣಿ ಕಾಲೇಜಿನ ನಾಯಕನಾಗಿ ಕಾರ್ಸನ್ ಕಾರ್ಯಪ್ಪ ಮತ್ತು ನಾಯಕಿಯಾಗಿ ನಿಶಾ ನೀಲಮ್ಮ ಮತ್ತು ಪ್ರೌಢಶಾಲೆಯ ನಾಯಕನಾಗಿ ಧೈವಿಕ್ ದೇವಯ್ಯ ಮತ್ತು ನಾಯಕಿಯಾಗಿ ತಫ್ಸೀಯಾ ಹಾಗೂ ಇತರರು ಪ್ರಮಾಣ ವಚನ ಸ್ವೀಕರಿಸಿದರು.
ಶಾಲಾ ಸಂಚಾಲಕರಾದ ಫಾ. ಡೇವಿಡ್ ಸಗಾಯ ರಾಜ್ ಅವರು ಪ್ರಮಾಣ ವಚನ ಬೋಧಿಸಿದರು. ನಂತರ ಮನರಂಜನೆ ಕಾರ್ಯಕ್ರಮದ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಫಾ. ಡೇವಿಡ್ ಸಗಾಯರಾಜ್, ಪ್ರಾಂಶುಪಾಲರಾದ ಶಂಭು ಕಾರ್ಯಪ್ಪ, ಮುಖ್ಯ ಶಿಕ್ಷಕಿ ರಜನಿ ಮತ್ತು ವಿದ್ಯಾಸಂಸ್ಥೆಯ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.