ಸಿದ್ದಾಪುರ, ಆ. ೧೧: ಮಾದವ ಗಾಡ್ಗೀಳ್ ಸಮಿತಿಯ ವರದಿ ಮತ್ತು ಕಸ್ತೂರಿ ರಂಗನ್ ವರದಿಯು ಮಲೆನಾಡು ಮತ್ತು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಾಸ ಮಾಡುವ

ರೈತರು, ಅರಣ್ಯ ವಾಸಿ ಹಾಗೂ ಪರಿಸರಕ್ಕೆ ಮಾರಕವಾಗಿದೆ. ವರದಿಯ ಆಧಾರದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಕುಂದು ಉಂಟಾಗುವ ಸಾಧ್ಯತೆ ಹೆಚ್ಚಿದೆ. ರೈತಾಪಿ ವರ್ಗದ ಸಂಘಟಿತ ಹೋರಾಟದಿಂದ ಮಾತ್ರ ವರದಿ ಅನುಷ್ಠಾನಕ್ಕೆ ತಡೆಯೊಡ್ಡ ಬಹುದು ಎಂದು ರೈತ ಪ್ರಮುಖರು ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಂಡರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕಸ್ತೂರಿ ರಂಗನ್ ವರದಿ ಸಾಧಕ ಬಾಧÀಕಗಳ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಸ್ತೂರಿ ರಂಗನ್ ವರದಿಯು ಜನ ಪರಿಸರ ವಿರೋಧಿ ನೀತಿಯಾಗಿದೆ. ವರದಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಲು ಅಸಾಧ್ಯ. ಕಸ್ತೂರಿ ರಂಗನ್ ಅವರು ಒಂದು ವಿಜ್ಞಾನಿ ಅವರು ತಮ್ಮ ಕಚೇರಿಯಲ್ಲಿ ಕುಳಿತು ಸ್ಯಾಟಲೈಟ್ ಮೂಲಕ ಭೂ ಪ್ರದೇಶಗಳ ಸರ್ವೆ ಮಾಡಿ ವರದಿಯನ್ನು ಸಿದ್ಧಪಡಿಸಿರುತ್ತಾರೆ.

ರೈತರನ್ನು, ಮೂಲನಿವಾಸಿಗಳನ್ನು, ಆದಿವಾಸಿಗಳನ್ನು ನಿರ್ಲಕ್ಷö್ಯ ಮಾಡಿ ವರದಿ ತಯಾರಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಜನಜೀವನ ಅಸ್ತವ್ಯಸ್ತವಾಗುವುದು ಅಲ್ಲದೆ, ಬದುಕಿನ ಹಕ್ಕು ಕಿತ್ತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಭೂ ಸುಧಾರಣಾ ಕಾಯ್ದೆಯನ್ನು ಸರ್ಕಾರ ತಿದ್ದುಪಡಿ ಮಾಡಿದ

(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಹೊರ ರಾಜ್ಯದ ಯಾವುದೇ ಸಿರಿವಂತ ವ್ಯಕ್ತಿಗಳು ಕೃಷಿ ಭೂಮಿಯನ್ನು ಖರೀದಿಸಿ ಕೃಷಿಗೆ ಆದ್ಯತೆ ನೀಡದೆ ಇತರ ವ್ಯವಸ್ಥೆಗಳಿಗೆ ಅಣಿಯಾಗಿರುವ ಕಾರಣ ಪಶ್ಚಿಮ ಘಟ್ಟಗಳ ಪರಿಸರಗಳು ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ ಮಾರಕ

ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ವಿಚಾರ ಮಂಡನೆೆ ಮಾಡಿದ ಪರಿಸರವಾದಿ ಮತ್ತು ಜನಪರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಗಡೆ ಮಾತನಾಡಿ, ಮಾದವ್ ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳು ಪರಿಸರಕ್ಕೆ ಹಾಗೂ ಜನಸಾಮಾನ್ಯರಿಗೆ ಮಾರಕವಾಗಿದೆ. ಪರಿಸರದೊಂದಿಗೆ ಬಿಡಿಸಲಾರದ ಸಂಬAಧÀ ಜನಸಾಮಾನ್ಯನು ಹೊಂದಿದ್ದಾನೆ. ಬಹುರಾಷ್ಟಿçÃಯ ಕಂಪನಿಗಳಿAದ ಎನ್.ಜಿ.ಓ.ಗಳಿಗೆ ನೇರವಾಗಿ ಹಣ ವರ್ಗಾವಣೆ ಹೊಂದುತ್ತದೆ. ಎನ್.ಜಿ.ಓ.ಗಳು ನೀಡುವ ವರದಿಯ ಅನ್ವಯ ಕಾರ್ಯಕ್ರಮಗಳು ರೂಪಿತವಾಗುತ್ತಿದೆ ಎಂದು ಆರೋಪಿಸಿದರು. ಕಸ್ತೂರಿ ರಂಗನ್ ವರದಿಯನ್ನು ಪಡೆಯಲು ಹಲವು ಬಾರಿ ಪ್ರಯತ್ನ ಮಾಡಲಾಗಿತ್ತು. ಕೇರಳ ಮೂಲದ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವರದಿಯನ್ನು ಪಡೆಯಲಾಯಿತು. ಗ್ರಾಮಗಳಲ್ಲಿ, ಮಲೆನಾಡು ಪ್ರದೇಶದಲ್ಲಿ ವಾಸ ಮಾಡುವ ಗ್ರಾಮವಾಸಿಗಳು ಮತ್ತು ರೈತರ ಬಳಿ ವಿಷಯ ಕುರಿತು ಪ್ರಸ್ತಾವನೆ ಮಾಡದೆ ವರದಿಯನ್ನು ಸಿದ್ಧಪಡಿಸ ಲಾಗಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯದ ಯಾವುದೇ ಶಾಸಕರಾಗಲಿ ಸಂಸದರಾಗಲಿ ಚಕಾರ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿ ಅನುಷ್ಠಾನವಾದಲ್ಲಿ ರೈತಾಪಿ ಜನರು ತಮ್ಮ ಹೊಲ, ಮನೆ, ತೋಟ ಬಿಟ್ಟು ಬೀದಿಗೆ ಬೀಳುವುದು ಶತÀಸಿದ್ಧ ಎಂದು ಆತಂಕ ವ್ಯಕ್ತಪಡಿಸಿದರು. ಪರಿಸರ ಇಂದು ಕೈಕೊಟ್ಟಿದೆ. ಮಳೆಯನ್ನು ಅವಲಂಬಿಸಿಕೊAಡು ಕೃಷಿಕರು ಬೆಳೆಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಕಾರಣ ಜಾಗತಿಕ ತಾಪಮಾನವಾಗಿದೆ. ಜಾಗತಿಕ ತಾಪಮಾನಕ್ಕೆ ಪಶ್ಚಿಮಘಟ್ಟಗಳಲ್ಲಿ ಪರಿಸರ ನಾಶವಾಗುವುದು ಎಂದು ತಿಳಿದಿರುವುದು ತಪ್ಪು ಭಾವನೆ. ಆದರೆ ಸಮುದ್ರದಲ್ಲಿರುವ ಏರಿಳಿತಗಳಿಂದ ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಂಪೆನಿಗಳಿAದ ಒತ್ತಡ

ಚಿಂತಕ ಹಾಗೂ ಮಲೆನಾಡು ಹೋರಾಟಗಾರ ಕೆ.ಎಲ್. ಅಶೋಕ್ ಅವರು ಮಾತನಾಡಿ. ಕಸ್ತೂರಿ ರಂಗನ್ ವರದಿಯು ಅನುಷ್ಠಾನ ಮಾಡುವಂತೆ ಬಹುರಾಷ್ಟಿçÃಯ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಮಾಡುವ ಮುನ್ನ ಯಾವುದೇ ರೀತಿಯ ಸಾಧಕ ಬಾಧಕಗಳನ್ನು ಗಮನಿಸದೆ ವರದಿ ಮಾಡಿರುತ್ತಾರೆ ಎಂದು ದೂರಿದರು. ಸಾರ್ವಜನಿಕರ ಅಹವಾಲು ಸ್ವೀಕರಿಸದೆ ವರದಿ ಜಾರಿಗೆ ಮುಂದಾಗಿರುವ ಬಗ್ಗೆ ರಾಜ್ಯದ ಸಂಸದರಿಗೆ ದೂರು ನೀಡಿದ್ದರೂ ಕೂಡ ತಮ್ಮ ಬೇಜವ್ದಾರಿ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಯೋಜನೆಗಳು ವರದಿಗಳಿಂದ ಜನಸಾಮಾನ್ಯರ ಬದುಕು ಮೂರಾ ಬಟ್ಟೆಯಾಗಿದೆ. ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ಮುಂದಾದ ಸಂದÀರ್ಭದಲ್ಲಿ ನೆರೆಯ ಕೇರಳ ಸರ್ಕಾರ ವಿರೋಧ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸದೆ ನಿರ್ಲಕ್ಷö್ಯ ಧೋರಣೆ ಮಾಡಿತ್ತು ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ರೈತ ಸಂಘ ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಅವರು ಮಾತನಾಡಿ, ಅರಣ್ಯ ನೀತಿ, ಕಾಯ್ದೆ, ವರದಿಗಳು ರಾಜಕೀಯ ಉದ್ದೇಶ ಹೊಂದಿದೆ, ಸರ್ಕಾರಗಳು ರಾಜಕೀಯ ಉದ್ದೇಶ ಹೊಂದಿ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರಗಳು ಜನವಿರೋಧೀ ನೀತಿ ಅನುಸರಿ ಸುತ್ತಿದ್ದು. ಗ್ರಾಮ ಪಂಚಾಯಿತಿಯ ಕಾನೂನು ಮೂಲಕವೇ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಸಲಹೆ ನೀಡಿದರು. ಕಸ್ತೂರಿ ರಂಗನ್ ವರದಿಯ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಅವರು ಕಸ್ತೂರಿ ರಂಗನ್ ವರದಿಯಲ್ಲಿ ಕೊಡಗಿನ ೫೪ ಗ್ರಾಮಗಳು ಉಲ್ಲೇಖ ಗೊಂಡಿದೆ. ವರದಿಯು ಅನುಷ್ಠಾನ ವಾದಲ್ಲಿ ಕೊಡಗಿನ ಚಿತ್ರಣವೇ ಬದಲಾಗುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳು ಮರೀಚಿಕೆ ಯಾಗುತ್ತದೆ. ಈ ಹಿಂದೆ ಕೊಡಗು ಜಿಲ್ಲೆಯಿಂದ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ ಹಲವು ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿ ಗಳನ್ನು ಸಂಘಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುದೀರ್ಘವಾದ ಪತ್ರ ಬರೆಯಲಾಗಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾದವು. ಅರಣ್ಯ ಕಾನೂನು, ನೀತಿ, ವರದಿಗಳು ಮತ್ತು ಕಾಯ್ದೆಗಳ ಅನುಷ್ಠಾನಗಳು ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೀಮಿತವಾಗಿರಬೇಕು. ಅಲ್ಲದೆ ಅರಣ್ಯದ ಗಡಿಭಾಗದ ಅಂಚಿನಲ್ಲಿರುವ ವಾಸ ಮಾಡುವ ಪ್ರದೇಶಗಳಿಗೆ ಅನ್ವಯವಾಗಬಾರದು ಎನ್ನುವ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭ ಕಸ್ತೂರಿ ರಂಗನ್ ವರದಿಯ ವಿರುದ್ಧ ಹತ್ತು ನಿರ್ಣಯಗಳನ್ನು ಮಂಡಿಸಿ ಸಭೆಯು ಅಂಗೀಕರಿಸಿತು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಚೆಟ್ರುಮಾಡ ಸುಜಯ್ ಬೋಪಯ್ಯ ಸ್ವಾಗತಿಸಿ, ನಂದಾ ಕಾರ್ಯಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ವಿವಿಧ ವಲಯ ಘಟದ ಪದಾಧಿ ಕಾರಿಗಳು, ರೈತ ಸಂಘಟನೆಯ ಸದಸ್ಯರು ಹಾಜರಿದ್ದರು.