ಮಡಿಕೇರಿ, ಆ. ೧೧: ಭಾರತದ ಅಖಂಡತೆಗೆ ಧಕ್ಕೆ ಬಂದ ನೈಜ ಇತಿಹಾಸವನ್ನು ಭಾರತೀಯರು ತಿಳಿದುಕೊಳ್ಳಬೇಕೆಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹಸಂಯೋಜಕ ಸತೀಶ್ ದಾವಣಗೆರೆ ಕರೆ ನೀಡಿದರು.

ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಪಂಜಿನ ಮೆರವಣಿಗೆಯ ನಂತರದ ಸಭಾ ಕಾರ್ಯಕ್ರಮದಲ್ಲಿ ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ದೇಶದ ಇತಿಹಾಸ ಜನರಿಗೆ ತಿಳಿಯುವುದಿಲ್ಲವೋ ಆ ದೇಶ ಸುಭದ್ರವಾಗಿರುವುದಿಲ್ಲ. ಈ ಹಿನ್ನೆಲೆ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ೧೮೭೬ರ ನಂತರದ ದೇಶ ವಿಭಜನೆಯನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ. ದೇಶದ ೫೦ ಸಾವಿರ ಚದರ ಕಿಲೋ ಮೀಟರ್ ಹರಿದು ಹಂಚಿಹೋಗಿದೆ. ಇದು ಯುವಜನತೆಗೆ ತಿಳಿಯಬೇಕು. ಭಾರತವನ್ನು ಗೆಲ್ಲುತ್ತೇವೆ ಎಂದು ಬಂದಿದ್ದ ದುಷ್ಟಶಕ್ತಿಗಳನ್ನು ಭಾರತದ ರಾಜರು ಧಮನ ಮಾಡಿದ್ದಾರೆ. ದೇಶದ ಭದ್ರತೆಗೆ ಹಿಂದೂ ಸಮಾಜ ಒಟ್ಟಾಗಬೇಕು. ಭಯೋತ್ಪಾದನೆ, ದೇಶದ್ರೋಹಿಗಳನ್ನು ಮಟ್ಟಹಾಕಲು

(ಮೊದಲ ಪುಟದಿಂದ) ಸಂಘಟಿತರಾಗುವAತೆ ಕರೆ ನೀಡಿದ ಅವರು, ಭಾರತದ ಇತಿಹಾಸ ವಿಶಾಲವಾಗಿದೆ. ತಿಳಿದುಕೊಳ್ಳುವ ವಿಚಾರಗಳು ಹಲವಷ್ಟಿವೆ. ಇದನ್ನು ಅರಿಯುವ ಕೆಲಸಗಳು ಆಗಬೇಕು ಎಂದರು.

ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹಸಂಚಾಲಕ ರವಿರಾಜ್ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಕ್ಕೆ ದೀರ್ಘ ಇತಿಹಾಸ ಇದೆ. ಭಾರತದ ಮೇಲೆ ದಂಡೆತ್ತಿ ಬಂದ ವಿದೇಶಗಳ ಹಲವು ರಾಜರನ್ನು ಭಾರತೀಯ ರಾಜರು ಎದುರಿಸಿ ದೇಶವನ್ನು ರಕ್ಷಿಸಿದ್ದಾರೆ. ದಾಳಿಕೋರರಾಗಿ ಬಂದವರನ್ನು ಹಿಮ್ಮೆಟ್ಟಿಸಿದ್ದಾರೆ. ವ್ಯಾಪಾರಕ್ಕೆ ಬಂದು ದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದ ವಿದೇಶಿ ಶಕ್ತಿಗಳ ವಿರುದ್ಧ ಕ್ರಾಂತಿಕಾರರು ಹೋರಾಡಿದ್ದಾರೆ. ಹಲವರ ಬಲಿದಾನದಿಂದ ದೇಶ ಉಳಿದಿದೆ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯ. ಪಠ್ಯದಲ್ಲಿ ಇರುವ ಸೀಮಿತ ವಿಚಾರದ ಮೂಲಕ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ದೇಶ ವಿಂಗಡನೆ ಮತಗಳ ಆಧಾರದ ಮೇಲೆ ಆಗಿದೆ. ದೇಶದ್ರೋಹಿ ಮಾನಸಿಕತೆ ಉಳ್ಳವರು ಇಂದಿಗೂ ಇದ್ದಾರೆ. ದೇಶದಲ್ಲಿ ನಡೆದ ಹಲವು ವಿದ್ಯಾಮಾನಗಳು ಹಿಂದೂ ಸಮಾಜವನ್ನು ಆತಂಕಗೊಳ್ಳುವAತೆ ಮಾಡಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಮುಂದಿನ ಪೀಳಿಗೆಗೆ ಭಯಮುಕ್ತ ದೇಶ ನಿರ್ಮಿಸುವುದು ನಮ್ಮ ಕರ್ತವ್ಯ ಎಂದು ಕರೆ ನೀಡಿದರು.

ರಾಷ್ಟçಪತಿ ಸೇವಾ ಪ್ರಶಸ್ತಿ ಪುರಸ್ಕೃತರು, ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತAಡ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ತಾಲೂಕು ಸಂಯೋಜಕ ಮಗೇರನ ಕೆ. ಬೆಳ್ಯಪ್ಪ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಭೋಜೇಗೌಡ ಹಾಜರಿದ್ದರು. ರವಿಭೂತನಕಾಡು ಪ್ರಾರ್ಥಿಸಿ, ವಿನಯ್ ನಿರೂಪಿಸಿ, ದುರ್ಗೇಶ್ ಸ್ವಾಗತಿಸಿ, ಮಗೇರನ ಬೆಳ್ಯಪ್ಪ ವಂದಿಸಿದರು. ಸುನಿಲ್ ಮಾದಪ್ಪ ಸಂಕಲ್ಪ ಬೋಧಿಸಿದರು.

ಪಂಜಿನ ಮೆರವಣಿಗೆ

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದ ಮುಖ್ಯ

ಬೀದಿಯಲ್ಲಿ ಹಿಂದೂಪರ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಸಾವಿರಾರು ಕಾರ್ಯಕರ್ತರು ಪಂಜು ಹಿಡಿದು ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಿಂದ ಸಾಗಿ ಇಂದಿರಾ ಗಾಂಧಿ ವೃತ್ತ, ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತಕ್ಕೆ ಬಂದು ಅಲ್ಲಿಂದ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪಕ್ಕೆ ಬಂದು ಜಮಾಯಿಸಿದರು.

ಜಾಥಾದಲ್ಲಿ ಕಾರ್ಯಕರ್ತರು ಕೇಸರಿ ಧ್ವಜ, ಪಂಜು ಹಿಡಿದು ಹಿಂದೂ ಪರ ಘೋಷಣೆಗಳನ್ನು ಕೂಗಿ ಅಖಂಡ ಭಾರತದ ಸಂಕಲ್ಪ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ನೇತೃತ್ವದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.