ಮಡಿಕೇರಿ, ಆ. ೧೧ : ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಎಫ್೫ ಜಿ.ಟಿ.ರಸ್ತೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸ ಬೇಕಿರುವುದರಿಂದ ತಾ. ೧೨ ರಂದು (ಇಂದು) ಬೆಳಿಗ್ಗೆ ೯.೩೦ ರಿಂದ ಸಂಜೆ ೩ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವುದು. ಪುಟಾಣಿನಗರ, ದೇಚೂರು, ಚೈನ್‌ಗೇಟ್, ಎಚ್‌ಆರ್‌ಬಿ ಕಾಲೋನಿ, ಅರಣ್ಯಭವನ, ಜಯನಗರ, ಮಂಗಳಾದೇವಿನಗರ, ಅಶೋಕಪುರ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಇಇ ಅನಿತಾ ಬಾಯಿ ಕೋರಿದ್ದಾರೆ.