ಮಡಿಕೇರಿ, ಆ. ೧೦: ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಕಾಲೇಜಿನ ಇಕೋ ಕ್ಲಬ್ ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅವರು ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಕುರಿತು ಮಾತನಾಡಿ ದಿನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಒಟ್ಟು ೨೭೨ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಿ.ಜಿ. ಕುಶಾಲಪ್ಪ ಅವರು ಕಾಲೇಜಿಗೆ ಎರಡು ವಿಶಿಷ್ಟ ಬಗೆಯ ಬಿದಿರಿನ ತಳಿಗಳನ್ನು ಉಡುಗೊರೆ ಯಾಗಿ ನೀಡಿದರು. ಪ್ರಾಂಶುಪಾಲರು ಹಾಗೂ ಇಕೋ ಕ್ಲಬ್‌ನ ವಿದ್ಯಾರ್ಥಿಗಳು ಹಾಗೂ ಸಂಚಾಲಕ ಪ್ರೊ. ಕಾರ್ತಿಕ್ ಪೂವಯ್ಯ ಅವರ ಸಮ್ಮುಖದಲ್ಲಿ ಅವುಗಳನ್ನು ಕಾಲೇಜಿನ ಆವರಣದಲ್ಲಿ ನೆಡಲಾಯಿತು.

ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ಕೊಡಗಿನ ಜೀವ ವೈವಿಧ್ಯತೆಯ ಜೊತೆಗೆ ಪ್ರಕೃತಿಯ ಸಂರಕ್ಷಣೆ, ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ, ಜಾಗತಿಕ ತಾಪಮಾನದ ಪರಿಣಾಮ, ಕಾಫಿ, ಮೆಣಸು, ಭತ್ತದ ಕೃಷಿ, ಪ್ರವಾಸಿ ಕೇಂದ್ರಗಳಿAದ ಪರಿಸರದ ಮೇಲಾಗುವ ಪರಿಣಾಮ ಮುಂತಾದ ವಿಚಾರಗಳ ಕುರಿತು ವಿದ್ಯಾರ್ಥಿ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜು ಮತ್ತು ಇಕೋ ಕ್ಲಬ್‌ನ ಸಂಚಾಲಕರಾದ ಪ್ರೊ. ಕಾರ್ತಿಕ್ ಪೂವಯ್ಯ ಹಾಗೂ ಇಕೋ ಕ್ಲಬ್‌ನ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.