ಕುಶಾಲನಗರ, ಆ. ೧೦: ಕುಶಾಲನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಭಕ್ತಿ ಭಾವಗಳೊಂದಿಗೆ ಅದ್ಧೂರಿಯಿಂದ ಚಾಲನೆ ದೊರೆಯಿತು.
ಕುಶಾಲನಗರ ಹಳೆ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕಲ್ಯಾಣೋತ್ಸವ ಅಂಗವಾಗಿ ಕುಶಾಲನಗರ ಭಜನಾ ಮಂಡಳಿ ಒಕ್ಕೂಟದ ಸದಸ್ಯರುಗಳು ಪಟ್ಟಣದ ಗಣಪತಿ ದೇವಾಲಯ ಮುಂಭಾಗದಿAದ ದೇವರ ಮಂಟಪದೊAದಿಗೆ ಮೆರವಣಿಗೆ ತೆರಳಿದರು.
ಕುಶಾಲನಗರ ಮಹಿಳಾ ಭಜನಾ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಕ್ತಾದಿಗಳು ಕೋಲಾಟ ಮತ್ತು ದೇವರ ಘೋಷಣೆಯೊಂದಿಗೆ ವಾದ್ಯ ಸಮೇತರಾಗಿ ಸಂಭ್ರಮದಿAದ ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಮಂಟಪದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.