ಮಡಿಕೇರಿ, ಆ. ೧೦: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸ.ಹಿ.ಪ್ರಾ ಶಾಲೆ ಕುಟ್ಟ ಇವರ ಸಹಯೋಗದಲ್ಲಿ ಬುಧವಾರದಂದು ವಿಶ್ವ ಬುಡಕಟ್ಟು ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಹಾಗೂ ಜಿಲ್ಲಾ ಗೈಡ್ ಆಯುಕ್ತರಾದ ಐಮುಡಿಯಂಡ ರಾಣಿ ಮಾಚಯ್ಯ ಅವರು ಮಕ್ಕಳು ಶಾಲೆಗಳಲ್ಲಿ ಕಲಿಕೆಗೆ ಒತ್ತುಕೊಡುವುದರ ಮೂಲಕ ಬೇರೆ ಕ್ಷೇತ್ರಗಳಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ತಂದೆ ತಾಯಿಗಳ ಕಷ್ಟ ಅರಿತು ಶ್ರಮವಹಿಸಿ ಸಮಾಜದಲ್ಲಿ ಮುಂದೆಬರಬೇಕು. ಜಾನಪದ ಕಲೆಯನ್ನು ಎಲ್ಲರೂ ಕಲಿತು ಅದನ್ನು ಎಲ್ಲೆಡೆ ಪ್ರದರ್ಶನಗೊಳಿಸಿ ಪ್ರಪಂಚದಾದ್ಯAತ ಹರಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಜಿಲ್ಲಾ ಸಂಘಟಕರಾದ ದಮಯಂತಿ ಅವರು ಮಾತನಾಡಿ ವಿಶ್ವ ಬುಡಕಟ್ಟು ದಿನಾಚರಣೆಯಾನ್ನು ಎಲ್ಲಾ ದಿನಾಚರಣೆಗಳಂತೆ ಪ್ರತಿವರ್ಷ ತಾ. ೯ ರಂದು ಆಚರಿಸುತ್ತಿರುವುದು ಖುಷಿಯ ವಿಚಾರ ಇಂದಿನ ಪೀಳಿಗೆಯಲ್ಲಿ ಶಿಕ್ಷಣ ಅತಿ ಅವಶ್ಯಕ. ಎಲ್ಲಾ ಬುಡಕಟ್ಟು ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕೆಂದು ಹಾರೈಸಿದರು.

ಕುಟ್ಟ ಶಾಲೆಯ ಶಿಕ್ಷಕಿ ಸನಿತÀ ಅವರು ಮಾತನಾಡಿ ಬುಡಕಟ್ಟು ಜನಾಂಗದ ಆಚಾರ, ವಿಚಾರ, ಸಂಸ್ಕೃತಿ, ಕಲೆ ಇವೆಲ್ಲವೂ ಬಹಳ ವಿಭಿನ್ನವಾಗಿವೆ. ಈ ಸಂಸ್ಕೃತಿಗಳನ್ನು ಬೆಳೆಸಿ ಉಳಿಸಿಕೊಂಡು ಹೋಗಬೇಕು ಹಾಗೂ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಬೇಕು, ಉನ್ನತ ಹುದ್ದೆಯನ್ನು ಪಡೆದು ಇತರೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಿಆರ್‌ಪಿ ಮುರುಗನ್, ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಖಜಾಂಚಿ ಮುತ್ತಮ್ಮ , ಶಾಲಾ ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಕುಟ್ಟ ಮುಖ್ಯೋಪಾಧ್ಯಾಯಿನಿ ಶಕುಂತಲ ಅವರು ಸ್ವಾಗತಿಸಿ, ಅಲೀಮಾ ಅವರು ಕಾರ್ಯಕ್ರಮ ನಿರೂಪಿಸಿ, ಸರ್ವರನ್ನು ವಂದಿಸಿದರು.