ವೀರಾಜಪೇಟೆ, ಆ. ೧೦ : ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಘಟಕದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ವೀರಾಜಪೇಟೆ ನಗರದ ತೆಲುಗರ ಬೀದಿಯ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯದ ಬಳಿ ತಾಯಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪುಷ್ಪ ನಮನ ಸಲ್ಲಿಸಿದ ಕಾರ್ಯ ಕರ್ತರು ಮೆರವಣಿಗೆಯಲ್ಲಿ ಸಾಗಿದರು.

ಪಟ್ಟಣದ ತೆಲುಗರ ಬೀದಿಯಲ್ಲಿನ ಮಾರಿಯಮ್ಮ ದೇವಾಲಯದಿಂದ ಆರಂಭಗೊAಡ ಮೆರವಣಿಗೆಯು ಜೈನರ ಬೀದಿ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ, ಮಾಂಸದ ಮಾರುಕಟ್ಟೆ, ಕೆ.ಎಸ್.ಆರ್.ಸಿ ರಸ್ತೆ ಮಾರ್ಗವಾಗಿ ದೊಡ್ಡಟ್ಟಿ ಚೌಕಿ ಮೂಲಕ ಮಹಿಳಾ ಸಮಾಜದತ್ತ ಸಾಗಿತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಸಾಕಷ್ಟು ಮಂದಿ ಆಗಮಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರಮುಖ ಬೀದಿಗಳಲ್ಲಿ ಕಾರ್ಯ ಕರ್ತರು ಭಾರತಮಾತೆ, ಶ್ರೀರಾಮನಿಗೆ ಜಯಕಾರ ಹಾಕುತ್ತಾ ಘೋಷಣೆ ಗಳನ್ನು ಮೆರವಣಿಗೆಯುದ್ಧಕ್ಕೂ ಮೊಳಗಿಸಿದರು.

ಮೆರವಣಿಗೆಯ ಸಂದರ್ಭ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಯಿಂದ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.

(ಮೊದಲ ಪುಟದಿಂದ) ಎಸ್ಪಿ ರಾಮರಾಜನ್ ನೇತೃತ್ವದಲ್ಲಿನ ಬಂದೋಬಸ್ತ್ನಲ್ಲಿ ಹೆಚ್ಚುವರಿ ಎಸ್ಪಿ ಸುಂದರ್‌ರಾಜ್, ಇಬ್ಬರು ಡಿವೈಎಸ್ಪಿ, ಮೂವರು ಸಿ.ಪಿ.ಐ., ೧೦ ಮಂದಿ ಎಸ್.ಐ., ನಾಲ್ಕು ಕೆ.ಎಸ್.ಆರ್.ಪಿ., ಎರಡು ಡಿ.ಎ.ಆರ್. ತುಕಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳು ಭಾಗವಹಿಸಿದ್ದರು. ಮೆರವಣಿಗೆಯ ಅಂಗವಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಸಂಜೆ ಯಿಂದಲೇ ವಾಹನ ನಿಲುಗಡೆಯನ್ನು ನಿಷೇಧಿಸಿ ಸುಗಮ ಸಂಚಾರಕ್ಕೆ ಸ್ಥಳೀಯ ಪೊಲೀಸರು ಅನುವು ಮಾಡಿದ್ದರು.

ಸಭಾ ಕಾರ್ಯಕ್ರಮ

ಪಂಜಿನ ಮೆರವಣಿಗೆ ಬಳಿಕ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು

ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗಣ್ಯರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿವೃತ್ತ ಸೈನ್ಯಾಧಿಕಾರಿ, ರಾಷ್ಟçಪತಿ ಸ್ವರ್ಣ ಪದಕ ವಿಜೇತರಾದ ಮೇ. ಬಿದ್ದಂಡ ನಂಜಪ್ಪ ಅವರು, ಅಖಂಡ ಭಾರತದ ಸಂಕಲ್ಪಕ್ಕೆ ಹಿಂದೂಗಳು ಒಂದಾಗಬೇಕು. ದೇಶ ಕಟ್ಟುವ ಸಂಕಲ್ಪ ಮಾಡಬೇಕು. ಹಿಂದೂ ಜಾಗರಣಾ ವೇದಿಕೆಯ ಬೃಹತ್ ಪಂಜಿನ ಮೆರವಣಿಗೆಯ ಜ್ವಾಲೆ ಪ್ರತಿಯೊಬ್ಬ ಹಿಂದೂ ಮನೆಮನೆಗಳಲ್ಲಿ ಜಾಗೃತವಾಗಬೇಕು. ದೇಶ ಒಡೆಯುವ ಕೆಲಸವಾಗಬಾರದು ಎಂದು ಕರೆ ನೀಡಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭರತ ಖಂಡ ವಿವಿಧ ಸಂಸ್ಕöÈತಿಗಳನ್ನು ಒಳಗೊಂಡಿರುವ ಸಂಪದ್ಭರಿತ ನಾಡು. ಹಲವು ಪರಕೀಯರ ದಾಳಿಗೆ ಒಳಪಟ್ಟ ಭಾರತವು ರಾಜಕೀಯಕ್ಕೆ ಮಣಿದು ಶರಣಾಗಿ ಭಾರತದ ಹಲವು ಭಾಗಗಳು ತುಂಡು ತುಂಡಾಗಿ ಅಖಂಡ ಭಾರತ ವಿಭಜನೆಯಾಯಿತು. ವಿಭಜನೆಗೆ ಮುಂದಿದ್ದ ಭಾರತದ ಪರಿಕಲ್ಪನೆ ಇಂದು ಸಾಕಾರಗೊಳ್ಳಲು ಅನ್ಯಮತೀಯ ಸಂಘಟನೆಗಳು ಅಡ್ಡಗಾಲು ಹಾಕುತ್ತಿರುವುದು ಕಳವಳಕಾರಿ ಸಂಗತಿ. ದೇಶದಲ್ಲಿ ಸ್ವಾತಂತ್ರö್ಯ ಪೂರ್ವ ಮತ್ತು ಸ್ವಾತಂತ್ರö್ಯ ನಂತರದಲ್ಲಿ ಬಂದ ಕಾನೂನುಗಳಿಗೆ ಪರ್ಯಾಯ ಕಾನೂನು ಜಾರಿಗೆ ತಂದರೂ ಕೆಲವು ಭಿನ್ನ ಭೇದ ಶಕ್ತಿಗಳು ತಡೆ ಒಡ್ಡುತ್ತಿದೆ ಎಂದು ವಿಷಾದಿಸಿದರು.

ವಿದ್ಯಾ ಭಾರತೀಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪರಕೀಯರ ದಾಳಿಯಿಂದಾಗಿ ಅಖಂಡ ಭಾರತದ ವಿಭಜನೆಗೊಂಡಿತ್ತು. ಸಾವಿರಾರು ವರ್ಷಗಳ ಕಾಲದಿಂದಲೂ ಭಾರತ ಪ್ರಾಚೀನ ಸಂಸ್ಕöÈತಿ ಪ್ರಚಲಿತದಲ್ಲಿದ್ದರೂ ನಾವುಗಳು ಇಂದು ಪರಕೀಯ ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ವಿಪರ್ಯಾಸವೆಂದರೆ ವಿದೇಶಿಯರು ಭಾರತದ ಸಂಸ್ಕöÈತಿಯನ್ನು ಮೆಚ್ಚಿ ಪಾಲನೆ ಮಾಡುತ್ತಿದ್ದಾರೆ. ರಾಜಕೀಯ ಷಡ್ಯಂತರದಿAದ ಭಾರತ ವಿಭಜನೆಗೊಂಡಿದೆ. ಧರ್ಮ, ಸಂಸ್ಕöÈತಿಗಳ ಸಮಾನತೆಯಿಂದ ಮಾತ್ರ ರಾಷ್ಟç ನಿರ್ಮಾಣ ಸಾದ್ಯ. ಹಿಂದೂ ಸಮಾಜವನ್ನು, ದೇಶವನ್ನು ಉಳಿಸಿ ಬೆಳೆಸಲು ಸದಾಕಾಲವೂ ಹಿಂದೂ ಸಮಾಜ ಟೊಂಕ ಕಟ್ಟಿ ನಿಲ್ಲುವ ಅನಿವಾರ್ಯ ಮುಂದಿದೆ. ಹಿಂದೂ ರಾಷ್ಟçವನ್ನು ಬಲಪಡಿಸಲು ಸಂಘಟಿತರಾಗಿ ಸದೃಢ ಭಾರತದ ಕನಸು ನನಸಾಗಿಸಲು, ವಿಭಜನೆಗೊಂಡ ಅಖಂಡ ಭಾರತದ ಕನಸು ನನಸಾಗಿಸಲು ಪತ್ರಿಯೊಬ್ಬರು ಸಂಕಲ್ಪ ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ಯಾಮ್ ಭಟ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಲೆಮಾಡ ತಿಮ್ಮಯ್ಯ, ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಗಣೇಶ್ ಉಪಸ್ಥಿತಿತರಿದ್ದರು.

ಹಿಂದೂ ಜಾಗರಣಾ ವೇದಿಕೆಯ ಮಹಿಳಾ ಘಟಕದ ಪ್ರಮುಖರಾದ ರೇಖಾ ಸುಂದರ್, ಜಿಲ್ಲಾ ಯುವ ಘಟಕದ ಸಂಚಾಲಕರಾದ ಸುನೀಲ್ ಮಾದಪುರ, ಭವಾನಿ ಕಿರಣ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಯೋಗೇಶ್, ಜಿಲ್ಲಾ ಘಟಕದ ಅನಿಲ್ ಸಿದ್ದಾಪುರ, ಲಾಲಾ ಅಯ್ಯಣ್ಣ ಹಾಗೂ ವೀರಾಜಪೇಟೆ ತಾಲೂಕು ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.