ಮೈಸೂರು, ಆ. ೧೦: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಬಾರಿ ೯ ಆನೆಗಳಿಗೆ ದಸರಾ ಗಜ ಪಡೆಯಲ್ಲಿ ಸ್ಥಾನ ನೀಡಲಾಗಿದೆ. ಈ ಪೈಕಿ ೬ ಆನೆಗಳು ಕೊಡಗಿನ ಶಿಬಿರಗಳಿಂದ ಆಯ್ಕೆಗೊಂಡಿದೆ.
ಬೆಂಗಳೂರಿನ ಅಶೋಕಪುರದಲ್ಲಿ ರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಿ.ವಿ ರಂಗರಾವ್ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೊದಲ ತಂಡದಲ್ಲಿ ೯ ಆನೆಗಳು ಪಾಲ್ಗೊ ಳ್ಳಲಿವೆ. ಇವುಗಳಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ಸೇರಿದೆ.
ಗಜಪಡೆ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಹೆಣ್ಣಾನೆಗಳ ಗರ್ಭಧಾ ರಣಾ ಪರೀಕ್ಷಾ ವರದಿ ಬಾರದ ಕಾರಣ ಗಜಪಡೆ ಆಯ್ಕೆ ತಡವಾಗಿತ್ತು. ಆದರೆ ಸೋಮವಾರದಂದು ವರದಿ ಕೈ ಸೇರಿದೆ. ಈ ನಿಟ್ಟಿನಲ್ಲಿ ಗಜಪಡೆಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.