ಮಡಿಕೇರಿ, ಆ. ೧೦: ಇತ್ತೀಚೆಗೆ ನಡೆದ ಕೊಡಗು ಬೆಳೆಗಾರರ ಒಕ್ಕೂಟದ ಸಭೆ ಯಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಬೆಳೆಗಾರರು ಸಾಲ ಪಡೆಯುವಾಗ ಸಾಲದ ಮೊತ್ತದ ಶೇ. ೧.೫ರಷ್ಟು ಮೊತ್ತವನ್ನು ನೋಂದಣಿ ಶುಲ್ಕ ಎಂದು ಪಾವತಿಸಬೇಕಿದ್ದನ್ನು ರದ್ದು ಪಡಿಸಲಾಗಿದೆ ಎಂಬ ವಿಚಾರ ಚರ್ಚೆ ಯಾಗಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ವಿಚಾರ ಇದೀಗ ಬೆಳೆಗಾರರಲ್ಲಿ ಗೊಂದಲ ಮೂಡಿಸಿ ದಂತಾಗಿದ್ದು, ನೋಂದಣಿ ಶುಲ್ಕದಿಂದ ವಿನಾಯಿತಿ ದೊರೆತಿಲ್ಲ ಎಂಬುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ‘ಶಕ್ತಿ’ಗೆ ಪ್ರಕಟಣೆ ನೀಡಿರುವ ಅವರು ಉಪನೋಂದಣಿ ಕಚೇರಿಯಲ್ಲಿ ಬೆಳೆಗಾರರು ಸಾಲ ಪಡೆಯುವಾಗ ಸಾಲದ ಮೊತ್ತದ ಶೇಕಡ ೧.೫ ರಷ್ಟು ಮೊತ್ತವನ್ನು ನೋಂದಣಿ ಶುಲ್ಕ ಎಂದು ಪಾವತಿಸ ಬೇಕಾಗಿತ್ತು. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಬೆಳೆಗಾರರಿಗೆ ಹೊರೆಯಾಗಿದ್ದ ಈ ಹೆಚ್ಚುವರಿ ಶುಲ್ಕವನ್ನು ಸಹಕಾರ ಸಚಿವರು ರದ್ದುಪಡಿಸಿದ್ದಾರೆ. ಇದರಿಂದಾಗಿ ಸಹಕಾರ ಸಂಘಗಳಿAದ ಸಾಲ ಪಡೆಯುವ ಬೆಳೆಗಾರರಿಗೆ ಉಳಿತಾಯ ವಾಗಿದ್ದು, ಶಾಸಕರ ಸ್ಪಂದನೆಯನ್ನು ಸಭೆಯಲ್ಲಿ ಪ್ರಶಂಶಿಸಲಾಯಿತು ಎಂಬುದಾಗಿ ಮಾಧ್ಯಮದಲ್ಲಿ ಬೆಳೆಗಾರರ ಒಕ್ಕೂಟದ ಸಭೆಯ ವಿವರ ಪ್ರಕಟವಾಗಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
(ಮೊದಲ ಪುಟದಿಂದ) ಕೊಡಗು ಬೆಳೆಗಾರರ ಒಕ್ಕೂಟವು ಈ ಕೆಳಕಂಡ ಅಂಶಗಳಿಗೆ ಸ್ಪಷ್ಟೀಕರಣವನ್ನು ನೀಡಿದಲ್ಲಿ ಸಹಕಾರಿ ಬ್ಯಾಂಕುಗಳಿAದ ಸಾಲ ಪಡೆಯುತ್ತಿರುವ ಜಿಲ್ಲೆಯ ರೈತ ಸದಸ್ಯರುಗಳಿಗೆ ಬಹಳಷ್ಟು ಅನುಕೂಲ ವಾಗುತ್ತಿತ್ತೆಂದು ಅವರು ಹೇಳಿದ್ದಾರೆ.
ಪತ್ರಿಕಾ ಸುದ್ದಿಯನ್ನು ಅನುಸರಿಸಿ ನೋಂದಣಿ ಶುಲ್ಕ ರದ್ದಾಗಿರುವ ಸಂಬAಧ ಜಿಲ್ಲಾ ನೋಂದಣಾ ಧಿಕಾರಿಗಳ ಕಚೇರಿಯನ್ನು ಸಂಪರ್ಕಿ ಸಲಾಗಿ, ಈ ಸಂಬAಧ ಯಾವುದೇ ಆದೇಶ ಅಥವಾ ಸುತ್ತೋಲೆಗಳು ಸರ್ಕಾರದಿಂದ ಬಂದಿರುವುದಿಲ್ಲವೆAಬ ಸ್ಪಷ್ಟನೆಯನ್ನು ಸಂಬAಧಿಸಿದ ಅಧಿಕಾರಿಗಳಿಂದ ಪಡೆಯಲಾಗಿರುತ್ತದೆ.
ಬೆಳೆಗಾರರು ಸಾಲ ಪಡೆಯುವಾಗ ಸಾಲದ ಮೊತ್ತದ ಶೇಕಡ ೧.೫ ರಷ್ಟು ಮೊತ್ತದ ನೋಂದಣಿ ಶುಲ್ಕ ಯಾವುದೆಂದು ಬೆಳೆಗಾರರ ಒಕ್ಕೂಟವು ಸ್ಪಷ್ಟಪಡಿಸಬೇಕಿದೆ. ಏಕೆಂದರೆ ಕಾಫಿ ಸ್ಥಿರಾಸ್ತಿ ಅಡಮಾನ ಅಧಾರಿತ ಅವಧಿ ಸಾಲಕ್ಕೆ ಸಾಮಾನ್ಯ ಅಡಮಾನ ಪ್ರಕ್ರಿಯೆಯಡಿ ಸಾಲದ ಮೊತ್ತದ ಶೇ.೦.೫೧೫ ರಷ್ಟು ಮುದ್ರಾಂಕ ಶುಲ್ಕ ಶೇ.೦.೫೦ ರಷ್ಟು ನೋಂದಣಿ ಶುಲ್ಕ ಹೀಗೆ ಒಟ್ಟು ಶೇ. ೧.೦೧೫ ರಷ್ಟು ಶುಲ್ಕ ನಿಗದಿಯಾಗಿದ್ದು, ವರದಿಯಾಗಿ ರುವಂತೆ ಶೇಕಡ ೧.೫ ರಷ್ಟು ಮೊತ್ತದ ನೋಂದಣಿ ಶುಲ್ಕ ಯಾವುದೆಂದು ಸ್ಪಷ್ಟವಾಗಿ ತಿಳಿಸಿದಲ್ಲಿ ಸಾಲ ಪಡೆಯುವ ಬೆಳೆಗಾರರಿಗೆ ಸಹಕಾರಿಯಾಗುತ್ತದೆ ಎಂದು ಬಾಂಡ್ ಪ್ರತಿಕ್ರಿಯಿಸಿದ್ದಾರೆ.
ಬೆಳೆಗಾರರು ಪಡೆಯುವ ಸಾಲದ ಮೊತ್ತದ ಶೇ.೧.೫ ರಷ್ಟು ನೋಂದಣಿ ಶುಲ್ಕವನ್ನು ಸಹಕಾರ ಸಚಿವರು ರದ್ದುಪಡಿಸಿರುವುದಾಗಿ, ಇದರಿಂದ ಬೆಳೆಗಾರರಿಗೆ ಉಳಿತಾಯವಾಗಿ ರುವುದೆಂದು ಆಧಾರ ರಹಿತವಾಗಿ ಬೆಳೆಗಾರರ ಒಕ್ಕೂಟವು ಹೇಳಿಕೆ ನೀಡಿರುವುದರಿಂದ-ಜಿಲ್ಲೆಯ ಸಹಕಾರ ಸಂಘ ಮತ್ತು ಡಿ.ಸಿ.ಸಿ. ಬ್ಯಾಂಕಿನಿAದ ಕಾಫಿ ಆಧಾರಿತ ಕೃಷಿ ಸಾಲಗಳನ್ನು ಪಡೆಯುತ್ತಿರುವ ರೈತ ಸದಸ್ಯರುಗಳಿಗೆ ತಪುö್ಪ ಮಾಹಿತಿಯನ್ನು ರವಾನಿಸಿದಂತಾಗಿದೆ ಹಾಗೂ ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಹಂತದಲ್ಲಿನ ರೈತರ ಸಾಲದ ಮಾಹಿತಿಯನ್ನು ಪ್ರೂಟ್ಸ್ ತಂತ್ರಾAಶದ ಮೂಲಕ ನೋಂದಣಿ ಮಾಡಿಕೊಳ್ಳುವಲ್ಲಿ ರೈತರಿಗೆ ಗೊಂದಲ ಉಂಟಾಗಿರುತ್ತದೆ. ಈ ಸಂಬAಧ ಬೆಳೆಗಾರರ ಒಕ್ಕೂಟವು ನೀಡಿರುವ ಹೇಳಿಕೆಗೆ ಸಂಬAಧಿಸಿದAತೆ ಸ್ಪಷ್ಟತೆಯನ್ನು ನೀಡುವ ಮುಖಾಂತರ ಜಿಲ್ಲೆಯ ರೈತರಿಗೆ ವಿಷಯದ ಮನವರಿಕೆಯನ್ನು ಮಾಡಿಕೊಡುವುದು ಸೂಕ್ತವೆಂದು ಅವರು ಕೋರಿದ್ದಾರೆ.
ಪ್ರಸ್ತುತ ವಿಷಯವು ಸರ್ಕಾರದ ಪರಿಶೀಲನೆ ಹಂತದಲ್ಲಿದ್ದು, ಕಾಫಿ ಬೆಳೆಗಾರರು ಪಡೆಯುವ ಕೃಷಿ ಸಾಲದ ಸಂಬAಧ ನೋಂದಣಿ ಶುಲ್ಕ ವಿನಾಯಿತಿ ಕಲ್ಪಿಸಿಕೊಡಲು ಏಂಖಓAಖಿAಏA ಂಉಖIಅUಐಖಿUಖAಐ ಅಖಇಆIಖಿ ಔPಇಖಂಖಿIಔಓS ಂಓಆ ಒISಅಇಐಐಂಓಇಔUS PಖಔಗಿISIಔಓS ಂಅಖಿSನ ತಿದ್ದುಪಡಿಯನ್ನು ಕೈಗೊಳ್ಳಬೇಕಾಗಿರುವುದಾಗಿ, ಕಾಫಿ ಬೆಳೆಯು ಪ್ಲಾಂಟೇಶನ್ ಬೆಳೆಯಾಗಿದ್ದು, ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ತೋಟಗಾರಿಕೆ ಇಲಾಖೆಯ ಪರಿಶೀಲನೆ ಹಂತದಲ್ಲಿರುತ್ತದೆ. ರಾಜ್ಯ ಸರ್ಕಾರವು ತತ್ಸಂಬAಧ ಅಂತಿಮ ಆದೇಶ ಹೊರಡಿಸದ ವಿನಹ ನೋಂದಣಿ ಶುಲ್ಕದಲ್ಲಿ ವಿನಾಯಿತಿ ದೊರೆಯುವುದಿಲ್ಲವೆಂದು, ಜಿಲ್ಲೆಯ ರೈತರು ಗೊಂದಲಕ್ಕೆ ಈಡಾಗ ಕೂಡದೆಂಬ ಅಂಶವನ್ನು ಜಿಲ್ಲೆಯಲ್ಲಿನ ಕಾಫಿ ಆಧಾರಿತ ಕೃಷಿ ಸಾಲವನ್ನು ಪಡೆಯುವ ರೈತರ ಗಮನಕ್ಕೆ ತರುತ್ತಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.