ಸಿದ್ದಾಪುರ, ಆ. ೧೦: ಮನೆ ಹಿಂಭಾಗ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಅವರೆಗುಂದ ನಿವಾಸಿ ಆಟೋ ಚಾಲಕ ಹರೀಶ (೪೮) ಎಂಬಾತ ತನ್ನ ಮನೆಯ ಹಿಂಭಾಗದಲ್ಲಿ ಐದು ಗಾಂಜಾ ಗಿಡ ಗಳನ್ನು
ಬೆಳೆಸಿದ್ದ ಬಗ್ಗೆ ದೊರೆತ ಖಚಿತ
ಮಾಹಿತಿಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿ ಹರೀಶ್ನನ್ನು ಬಂಧಿಸಿ ೨ ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನ ದಲ್ಲಿ ಡಿ.ವೈ.ಎಸ್.ಪಿ ಜಗದೀಶ್ ಮತ್ತು ವೃತ್ತ ನಿರೀಕ್ಷಕ
(ಮೊದಲ ಪುಟದಿಂದ) ಅನೂಪ್ ಮಾದಪ್ಪ ನೇತೃತ್ವ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮುಖ್ಯಪೇದೆ ಲಕ್ಷಿö್ಮÃಕಾಂತ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ಅಷ್ಟೇ ಮಾಲ್ದಾರೆ ಸಮೀಪದ ಗುಡ್ಲೂರಿನಲ್ಲಿ ವ್ಯಕ್ತಿ ಓರ್ವ ಕಾಫಿ ತೋಟದೊಳಗೆ ಗಾಂಜಾ ಗಿಡಗಳನ್ನು ಬೆಳೆಸಿದ್ದು, ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಪೊಲೀಸರು ಗಾಂಜಾ ಗಿಡ ಬೆಳೆಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಜನ ಮೆಚ್ಚುಗೆ ಪಾತ್ರವಾಗಿದೆ.