ಗೋಣಿಕೊಪ್ಪಲು ಆ. ೧೦ : ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಗೋಣಿಕೊಪ್ಪದಿಂದ ಪೊನ್ನಂಪೇಟೆವರೆಗೆ ಬೃಹತ್ ವಾಹನ ಜಾಥಾ ಯಶಸ್ವಿಯಾಗಿ ನಡೆಯಿತು. ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮುಂಜಾನೆಯ ವೇಳೆ ಜಮಾವಣೆ ಗೊಂಡ ವೇದಿಕೆಯ ಸದಸ್ಯರು

ತಮ್ಮ ನೂರಾರು ಬೈಕ್ ಹಾಗೂ ವಾಹನಗಳಲ್ಲಿ ಜಾಥಾ ಆರಂಭಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ ಮುಂದಾಳತ್ವದಲ್ಲಿ ಹಿಂದೂ ಸಂಘಟನೆಯ ಜಿಲ್ಲಾ ಸರಸಂಚಾಲಕ ಚೆಕ್ಕೆರ ಮನು ಕಾವೇರಪ್ಪ ಭಾರತಾಂಭೆಯ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಜಾಥಾವನ್ನು ಉದ್ಘಾಟಿಸಿದರು.

ಈ ವೇಳೆ ವೇದಿಕೆಯ ಪೊನ್ನಂಪೇಟೆ ಸಂಚಾಲಕರಾದ ಪುತ್ತಮನೆ ಅನಿಲ್, ಪೊನ್ನಿಮಾಡ ಜಯಂತ್, ಜಿಲ್ಲಾ ಸಮಿತಿ ಸದಸ್ಯ ಆಲೆಮಾಡ ತಿಮ್ಮಯ್ಯ, ಸಂಘಟನೆಯ ಪ್ರಮುಖರಾದ ಜೀವನ್, ಗುಮ್ಮಟ್ಟಿರ ಕಿಲನ್ ಗಣಪತಿ, ನೆಲ್ಲಿರ ಚಲನ್ ಕುಮಾರ್, ಅಜ್ಜಿಕುಟ್ಟಿರ ಪ್ರವೀಣ್, ಸಿ.ಕೆ. ಬೋಪಣ್ಣ, ಪಂದ್ಯAಡ ಹರೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಜಾಥಾವು ನಗರದ ಮುಖ್ಯ ರಸ್ತೆಗಾಗಿ (ಮೊದಲ ಪುಟದಿಂದ) ಉಮಾಮಹೇಶ್ವರಿ ಬಳಿಯ ಬೈಪಾಸ್ ರಸ್ತೆಗೆ ತಿರುಗಿ ಅಲ್ಲಿಂದ ಬೈಪಾಸ್ ರಸ್ತೆ ಮಾರ್ಗವಾಗಿ ಪೊನ್ನಂಪೇಟೆ ರಸ್ತೆಯ ಮೂಲಕ ಜಾಥಾವು ಮುಂದು ವರೆಯಿತು. ಈ ಜಾಥಾವು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಸಮಾಗಮಗೊಂಡಿತು.

ವಾಹನ ಜಾಥಾವು ಆರಂಭ ವಾಗುತ್ತಿದ್ದಂತೆಯೇ ಪೊಲೀಸರು ಆಯಾಕಟ್ಟಿನ ಪ್ರದೇಶದಲ್ಲಿ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಮುಂಜಾಗ್ರತೆ ವಹಿಸಿದರು. ಬೈಪಾಸ್ ರಸ್ತೆ ಮಾರ್ಗದಿಂದ ಜಾಥಾವು ಮುಖ್ಯರಸ್ತೆಗೆ ಆಗಮಿಸುವ ವೇಳೆ ವಾಹನ ದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಬೈಪಾಸ್ ಜಂಕ್ಷನ್ ಬಳಿ ಪೊಲೀಸರು ಹೆಚ್ಚಾಗಿ ಜಮಾವಣೆಗೊಂಡು ಟ್ರಾಫಿಕ್ ವ್ಯವಸ್ಥೆಯನ್ನು ಸುಲಲಿತಗೊಳಿಸಿ ವಾಹನ ಜಾಥಾಕ್ಕೆ ಅನುವು ಮಾಡಿಕೊಟ್ಟರು.

ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೆ.ಟಿ. ಉಲ್ಲಾಸ್ ನೆರೆದಿದ್ದ ಮಾತನಾಡಿ, ಸ್ವಾತಂತ್ರö್ಯ ಸಂದರ್ಭದ ಅಖಂಡ ಭಾರತವನ್ನು ಚೂರು ಚೂರು ಮಾಡಿರುವ ಕರಾಳ ದಿನದ ಹಿಂದಿರುವ ಕರಾಳ ಸತ್ಯವನ್ನು ಪ್ರತಿ ಭಾರತೀಯರು ಅರಿಯಬೇಕು. ಹಿಂದೂಗಳು ಸಂಘಟಿತರಾಗಿ ಭಯೋತ್ಪಾದನೆ ಹಾಗೂ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು. ಬೇರೆ ಬೇರೆಯಾಗಿರುವ ಭಾಗಗಳನ್ನು ಮಾತೃಭೂಮಿಗೆ ಮತ್ತೆ ಅಖಂಡವಾಗಿ ಸೇರಿಸಬೇಕು. ಬಲಿಷ್ಟ ಹಿಂದುರಾಷ್ಟç ನಿರ್ಮಾಣದ ಸಂಕಲ್ಪ ಮಾಡಬೇಕು ಎಂದು ಇವರು ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನದ ಭಾಷಣಗಳನ್ನು ಆಲಿಸಿದಾಗ ಅನೇಕ ಸಂದರ್ಭದಲ್ಲಿ ಶಾಂತಿ, ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹದಿಂದ ಸ್ವಾತಂತ್ರö್ಯ ಸಿಕ್ಕಿದೆ ಎಂದು ನಾವು ತಿಳಿದಿದ್ದೇವೆ. ಆದರೆ ಸ್ವಾತಂತ್ರö್ಯ ಪಡೆಯಲು ಅನೇಕ ಹೋರಾಟ ಗಾರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ನೇಣುಗಂಬಕ್ಕೆ ಏರಿದ್ದಾರೆ ಎಂದರು.

ಪೊನ್ನAಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸರಸಂಚಾಲಕ ಚೆಕ್ಕೇರ ಮನು ಕಾವೇರಪ್ಪ, ಜಿಲ್ಲಾ ಸಮಿತಿಯ ಶಾಂತೆಯAಡ ತಿಮ್ಮಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಮಾಚಿಮಾಡ ರವೀಂದ್ರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಿಂದ ಮಹಿಳೆಯರು ಹಾಗೂ ಹಿಂದೂ ಜಾಗರಣಾ ವೇದಿಕೆಯ ಸದಸ್ಯರುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪೊನ್ನಿಮಾಡ ಜಯಂತ್, ಸುಳ್ಳಿಮಾಡ ಪವಿ, ರಾಕೇಶ್, ಸಂಪತ್, ರತನ್, ಲೋಕೇಶ್, ನಿರನ್, ಹಾಜರಿದ್ದರು. ಜಿಲ್ಲಾ ಸಮಿತಿಯ ಆಲೆಮಾಡ ತಿಮ್ಮಯ್ಯ ಸ್ವಾಗತಿಸಿ ಸುನೀಲ್ ನಿರೂಪಿಸಿ ವಂದಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನಿರ್ದೇಶನದ ಮೇರೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್‌ರಾಜ್, ವೀರಾಜಪೇಟೆ ಪ್ರಬಾರ ಡಿವೈಎಸ್ಪಿ ಗಂಗಾಧರ್ ಸ್ವಾಮಿ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ಗೋಣಿಕೊಪ್ಪ ಠಾಣಾಧಿಕಾರಿ ರೂಪಬೀರಾದರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಸೇರಿದಂತೆ ನೂರಾರು ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.