ಮಡಿಕೇರಿ, ಆ. ೯ : ರಾತ್ರಿ ವೇಳೆಯಲ್ಲಿ ರೆಸಾರ್ಟ್ನಲ್ಲಿದ್ದ ಅತಿಥಿ ಗಳು ಲೌಡ್ ಸ್ಪೀಕರ್ ಬಳಸಿಕೊಂಡು ಕುಣಿದು ಕುಪ್ಪಳಿಸುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾತ್ರಿ ೧೨ ಗಂಟೆಯ ವೇಳೆಗೆ ಮೇಕೇರಿಯ ‘‘ಲಾ ಪ್ಲೋರ’’ ರೆಸಾರ್ಟ್ನಲ್ಲಿ ೧೨-೧೩ ಅತಿಥಿಗಳು ಮಿತಿಮೀರಿದ ಸದ್ದಿನಲ್ಲಿ ಹಾಡು ಹಾಕಿ, ಕಿರುಚಾಡುತ್ತಿದ್ದ ಹಿನ್ನೆಲೆ ಸ್ಥಳೀಯರೊಬ್ಬರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ತೆರಳಿದ ಪೊಲೀಸರು ಸ್ಪೀಕರ್ ಸೌಂಡ್ ನಿಲ್ಲಿಸಿ ರೂಂ ಬುಕ್ ಮಾಡಿದ್ದ ಮೇಕೇರಿಯ ಅಜಿತ್ ಹಾಗೂ ರೆಸಾರ್ಟ್ ವ್ಯವಸ್ಥಾಪಕ ಕದಿರವನ್ ವಿರುದ್ಧ ಸಾರ್ವಜನಿಕರ ನೆಮ್ಮದಿ ಭಂಗ ಉಂಟು ಮಾಡಿದ ಆರೋಪದಡಿ ಐಪಿಸಿ ೨೯೦ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿ ಪಡೆದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.