ಮಡಿಕೇರಿ, ಆ. ೯: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಆಟಿ ಹಬ್ಬವನ್ನು ಆಚರಿಸಲಾಯಿತು. ಭಗವದ್ಗೀತಾ ಪಠಣವನ್ನು ವೀಣಾ ಹೊಳ್ಳ, ಲಕ್ಷಿö್ಮÃಭಟ್, ಮತ್ತು ಸುಧಾ ಪ್ರಸಾದ್ ನೆರವೇರಿಸಿದರು.
ನಂತರ ಮಳೆ ಬಗ್ಗೆ ಕವನ ವಾಚನವಾಯಿತು. ಮನರಂಜನಾ ಆಟಗಳು, ನೃತ್ಯ, ಹಾಡು ಕಾರ್ಯಕ್ರಮಗಳು ಮೆರುಗು ನೀಡಿದವು.
ಕೊಡಗಿನ ಖಾದ್ಯಗಳಾದ ಪತ್ರೊಡೆ, ಕಣಿಲೆ, ಹಲಸಿನ ಹಣ್ಣಿನ ಬನ್ಸ್, ಹಲ್ವಾ, ಕೈ ಹುಳಿ ಗೊಜ್ಜು, ಮಾವಿನ ಹಣ್ಣಿನ ಖಾದ್ಯ, ಆಟಿ ಸೊಪ್ಪಿನ ಪಾಯಸ, ಕಣಿಲೆ ವಡೆ ಹೀಗೆ ಹಲವಾರು ಬಗೆಯ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ನಿಧಿಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅರುಣ್ ಕುಮಾರ್, ಕೋಶಾಧಿಕಾರಿ ಗೀತಾ ಗಿರೀಶ್, ಪದಾಧಿಕಾರಿಗಳಾದ ರವಿಶಂಕರ್, ಭರತೇಶ್ ಖಂಡಿಗೆ, ಸವಿತಾ ಭಟ್, ಲಲಿತಾ ರಾಘವನ್, ಜಯಶೀಲಾ ಪ್ರಕಾಶ್ ಪ್ರಭಾಕರ ನೆಲ್ಲಿತ್ತಾಯ, ಯೋಗೇಶ್ ಪಡಂತಾಯ ಹಾಜರಿದ್ದರು.