ಸೋಮವಾರಪೇಟೆ, ಆ. ೯: ಗ್ರಾಮ ಪಂಚಾಯಿತಿಯ ಸದಸ್ಯನಾಗಿ, ಅಧ್ಯಕ್ಷನಾಗಿ ಕರ್ತವ್ಯ ಸೋಮವಾರಪೇಟೆ, ಆ. ೯: ಗ್ರಾಮ ಪಂಚಾಯಿತಿಯ ಸದಸ್ಯನಾಗಿ, ಅಧ್ಯಕ್ಷನಾಗಿ ಕರ್ತವ್ಯ ಧನವನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಅಭ್ಯುದಯಕ್ಕೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ತಾವು ಅಧ್ಯಕ್ಷನಾಗಿದ್ದ ಸಂದರ್ಭವೂ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು, ಗ್ರಾ.ಪಂ. ಮಟ್ಟದಲ್ಲಿ ಉತ್ತಮ ಆಡಳಿತ ನೀಡಿದ ಮಹೇಶ್ ತಿಮ್ಮಯ್ಯ, ಇದೀಗ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೧೪೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ರಾö್ಯಕ್‌ಸೂಟ್ ವಿತರಿಸಿದ್ದಾರೆ.
ಶಾಲಾ ಸಭಾಂಗಣದಲ್ಲಿ ನಡೆದ ಪೋಷಕರ ಸಭೆಯಲ್ಲಿ ಟ್ರಾö್ಯಕ್ ಸೂಟ್ ವಿತರಿಸಿ ಮಾತನಾಡಿದ ಮಹೇಶ್ ತಿಮ್ಮಯ್ಯ, ನಾನು ಇದೇ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದು ಚೌಡ್ಲು ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಪಂಚಾಯಿತಿ ಅನುದಾ£ Àದಲ್ಲಿ ಶಾಲೆಯ ಮಕ್ಕಳಿಗೆ ೫ ಲಕ್ಷ ರೂಗಳ ವೆಚ್ಚದಲ್ಲಿ ಹೈಟೆಕ್ ಶೌಚಾಲಯ, ಕಾಂಪೌAಡ್ ನಿರ್ಮಾಣ ಹಾಗೂ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ
(ಮೊದಲ ಪುಟದಿಂದ) ಅನುದಾನ ಕಲ್ಪಿಸಲಾಗುವುದು ಎಂದು ಹೇಳಿದರು. ತನಗೆ ಸರ್ಕಾರದಿಂದ ಬರುವ ಗೌರವಧನ ೭೦ ಸಾವಿರ ರೂ.ಗಳನ್ನು ವಿನಿಯೋಗಿಸಿ ವಿದ್ಯಾರ್ಥಿಗಳಿಗೆ ಟ್ರಾö್ಯಕ್ ಸೂಟ್ ನೀಡಿದ್ದೇನೆ.
ಪ್ರತಿ ವರ್ಷವೂ ಒಂದೊAದು ಶಾಲೆಗೆ ನೀಡುತ್ತೇನೆ. ಸರ್ಕಾರಿ ಶಾಲೆಯಲ್ಲೂ ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ಸರ್ಕಾರ ನೀಡುತ್ತಿದೆ. ಪೋಷಕರು ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಎನ್. ಬಸವರಾಜಪ್ಪ ಮಾತನಾಡಿ, ಶಾಲೆಯಲ್ಲಿ ಮೂವರು ಶಿಕ್ಷಕರಿಗೆ ವರ್ಗಾವಣೆಯಾಗಿದೆ. ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಇಲಾಖೆ ನೇಮಿಸಿದೆ. ಪೋಷಕರು ಗೊಂದಲಕ್ಕೆ ಈಡಾಗಬಾರದು. ಎಲ್ಲಾ ವಿಷಯಗಳಿಗೂ ಬೋಧಕರಿದ್ದಾರೆ ಎಂದರು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷರಾದ ಪೌಲ್ವಿನ್ ಸಿಕ್ವೇರ, ಸದಸ್ಯರಾದ ಶುಭ ಇದ್ದರು. ಶಿಕ್ಷಕರಾದ ಹೇಮಲತ ಸ್ವಾಗತಿಸಿ, ಧನ್ಯ ನಿರೂಪಿಸಿ, ಶಶಿಧರ್ ವಂದಿಸಿದರು.