ಮಡಿಕೇರಿ, ಆ. ೯: ಮಡಿಕೇರಿಯ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಆನ್ಲೈನ್ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನವೆಂಬರ್ ತಿಂಗಳಲ್ಲಿ ಸಂಸ್ಥೆ ಹಮ್ಮಿಕೊಳ್ಳುವ ಪ್ರತಿಭೋತ್ಸವದಲ್ಲಿ ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮ ತಿಳಿಸಿದ್ದಾರೆ.
ನೃತ್ಯ ಸ್ಪರ್ಧೆಯ ನಿಯಮಗಳು
ಕನ್ನಡ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಬೇಕು. ಕಾಲಾವಕಾಶ ೩ ನಿಮಿಷ, ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ, ನೃತ್ಯದ ವೀಡಿಯೋ ಕಳುಹಿಸಲು ಕೊನೆಯ ದಿನಾಂಕ ತಾ. ೨೦., ವೀಡಿಯೋ ಕಳುಹಿಸಬೇಕಾದ ಮೊಬೈಲ್ ಸಂಖ್ಯೆಗಳು - ೩ ರಿಂದ ೬ ವರ್ಷದ ಮಕ್ಕಳು ೬೩೬೩೧೭೯೨೧೪, ೭ ರಿಂದ ೧೨ ವರ್ಷದ ಮಕ್ಕಳು ೯೪೮೦೭೮೩೧೫೬, ೧೩ ರಿಂದ ೧೮ ವರ್ಷದ ಮಕ್ಕಳು ೯೭೪೦೮೭೫೩೮೩ ಮಾಹಿತಿಗೆ ಸಂಖ್ಯೆ ೯೬೬೩೧೧೯೬೭೦ ಸಂಪರ್ಕಿಸಬಹುದು.