ಚೆಟ್ಟಳ್ಳಿ, ಆ. ೯: ಕಳೆದ ರಾತ್ರಿ ಕಳ್ಳನೋರ್ವ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿ ಪರಾರಿಯಾದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.

ತಾ.೮ರ ಮಧ್ಯರಾತ್ರಿ ೧೨.೨೦ಕ್ಕೆ ಯುವಕನೋರ್ವ ಚೆಟ್ಟಳ್ಳಿ ಕೆನರಾ ಬ್ಯಾಂಕ್ ಮುಂದೆ ನಿಲ್ಲಿಸಲಾದ ಜುಬೇರ್ ಎಂಬವರ ಆಲ್ಟೋ ಕಾರನ್ನು ಕಳವು ಮಾಡಲು ಪ್ರಯತ್ನಿಸಿದ್ದಾನೆ. ಕಾರಿನ ಬಾಗಿಲು ತೆಗೆದು ಚಲಿಸಿದ್ದಾಗ ಕಾರಿನ ಸ್ಟೇರಿಂಗ್ ಲಾಕ್ ಆದ ಕಾರಣ ಕಾರು ಬಿಟ್ಟು ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಸಲಾಂ ಎಂಬವರ ಬೈಕ್‌ನ್ನು ಕಳವು ಮಾಡಿ ಸಿದ್ದಾಪುರ ರಸ್ತೆ ಕಡೆ ತೆರಳಿದ್ದಾನೆ. ಆ ಬೈಕನ್ನು ಪೆರಂಬುಕೊಲ್ಲಿಯಲ್ಲಿ ಬಿಟ್ಟು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮತ್ತೊಂದು ಎನ್‌ಎಸ್ ೨೦೦ ಪಲ್ಸರ್ ಬೈಕ್‌ನೊಂದಿಗೆ ಸಿದ್ದಾಪುರ ಕಡೆ ತೆರಳಿದ್ದಾನೆ.

ಚೆಟ್ಟಳ್ಳಿ ಪಟ್ಟಣದಲ್ಲಿ ಅಡ್ಡಲಾಗಿ ನಿಂತ ಆಲ್ಟೋ ಕಾರಿನ ಬಗ್ಗೆ ಸಂಶಯಗೊAಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ವಿಷಯ ತಿಳಿಯುತ್ತಿದ್ದಂತೆ ಸಂಶಯಗೊAಡು ಪೊಲೀಸರು ಕೆನರಾ ಬ್ಯಾಂಕ್ ಹಾಗೂ ಇತರೆ ಸಿಸಿಟಿವಿಯನ್ನು ಪರಿಶೀಲಿಸಿದ್ದಾಗ ನಡುರಾತ್ರಿ ಹುಡುಗನೊಬ್ಬನ ಕೈಚಳಕ ಗೋಚರಿಸಿದೆ. ಬೈಕ್ ಕಳುವಾದ ವ್ಯಕ್ತಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಪ್ರಾರಂಭಿಸಿದ್ದು ಕೇರಳದ ಕುಟುಂಬವೊAದು ಚೆಟ್ಟಳ್ಳಿಯ ಸಂಬAಧಿಕರ ಮನೆಗೆ ಆಗಮಿಸಿದ್ದು ಆ ಕುಟುಂಬದ ಹುಡುಗನೊಬ್ಬ ರಾತ್ರಿ ವಾಹನವನ್ನು ಕಳುವು ಮಾಡಿ ಬೈಕಿನಲ್ಲಿ ಮೈಸೂರಿಗೆ ತೆರಳಿ ಕೇರಳಕ್ಕೆ ತೆರಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. -ಕಾಳಯ್ಯ