ಮಡಿಕೇರಿ, ಆ. ೯ : ಪರಿಶುದ್ಧ ಉಮ್ರಾ ನಿರ್ವಹಿಸಲು ಕೊಡಗು ಜಿಲ್ಲೆಯಿಂದ ತೆರಳುತ್ತಿರುವ ಸುಮಾರು ೫೦ಕ್ಕೂ ಅಧಿಕ ಉಮ್ರಾ ಯಾತ್ರಾರ್ಥಿಗಳಿಗೆ ಸುಂಟಿಕೊಪ್ಪ ಎಸ್‌ಎಂಎಸ್ ಅರೇಬಿಕ್ ಕಾಲೇಜಿನ ವತಿಯಿಂದ ಉಮ್ರಾ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.

ಎಸ್‌ಎಂಎಸ್ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ. ಹಮೀದ್ ಮುಸ್ಲಿಯಾರ್ ಮಾತನಾಡಿ, ಸುಮಾರು ೭ ವರ್ಷಗಳಿಂದ ನೂರಾರು ಮಂದಿಯನ್ನು ಮಕ್ಕಾಗೆ ಉಮ್ರಾ ನಿರ್ವಹಿಸಲು ಮತ್ತು ಪ್ರವಾದಿ ಮುಹಮ್ಮದ್ ಪೈಗಂಬರ ಅವರು ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮದೀನಾ ಶರೀಫನ್ನು ಸಂದರ್ಶಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದರು. ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಉಪಕಾಝಿ ಎಂ.ಎA. ಅಬ್ದುಲ್ಲ ಫೈಜಿ ಉದ್ಘಾಟಿಸಿದರು. ಉಪಾಧ್ಯಕ್ಷ ಸಿಪಿಎಂ. ಬಶೀರ್, ವಕ್ಫ್ ಬೋರ್ಡ್ ಮಾಜಿ ಅಧ್ಯP್ಷÀ ಉಮ್ಮರ್ ಹಾಜಿ, ಮಾದಾಪುರ ಕಾಲೇಜು ಪ್ರಾಂಶುಪಾಲ ಜೈನುದ್ದೀನ್ ಫೈಜಿ, ಪ್ರಮುಖರಾದ ಕಬೀರ್ ಫೈಜಿ, ಮುಸ್ತಫ ಹುದವಿ, ಅಬ್ಬಾಸ್ ಅಝ್ಹರಿ, ರಫೀಕ್ ಹಾಜಿ ಸುಂಟಿಕೊಪ್ಪ, ಎಸ್.ಎಂ. ಮೊಹಮ್ಮದ್ ಹಂಸ ಕರಡಿಗೋಡು ಮತ್ತಿತರ ಪ್ರಮುಖರು ಉಪಸ್ಥಿತ ರಿದ್ದರು. ಸಂಸ್ಥೆಯ ಉಪನ್ಯಾಸಕ ಉಸ್ಮಾನ್ ಫೈಜಿ ಪ್ರಾರ್ಥಿಸಿ, ಕಾರ್ಯದರ್ಶಿ ಸಿ.ಎಂ. ಹಮೀದ್ ಮುಸ್ಲಿಯಾರ್ ಸ್ವಾಗತಿಸಿದರು. ಯಾತ್ರಾ ಸಂಘದ ಮುಖ್ಯಸ್ಥರಾದ ಉಮ್ಮರ್ ಫೈಜಿ ಹಾಗೂ ಹನೀಫ್ ಫೈಜಿ ರಫೀಕ್ ಬಾಕವಿ ಯಾತ್ರಾರ್ಥಿಗಳಿಗೆ ತರಬೇತಿ ನೀಡಿದರು. ಯಾತ್ರೆಗೆ ತೆರಳುವವರಿಗೆ ಕಾಲೇಜು ವತಿಯಿಂದ ನೀಡಲಾದ ಕಿಟ್ ಬ್ಯಾಗನ್ನು ಕೆ.ಎಂ. ಇಬ್ರಾಹಿಂ ವಿತರಿಸಿದರು.