ಸಿದ್ದಾಪುರ, ಆ. ೮: ಗುಹ್ಯ ಅಗಸ್ತೆö್ಯÃಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ಮಣಿಪುರದ ಗಲಭೆಯ ಕುರಿತು ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ವಿಚಾರ ಸಂಕೀರ್ಣ ನಡೆಯಿತು. ವಿಚಾರವಾದಿ ಐ.ಆರ್. ದುರ್ಗಪ್ರಸಾದ್ ಮಾತನಾಡಿ, ಮೇ ನಾಲ್ಕರಿಂದ ಮಣಿಪುರದಲ್ಲಿ ಕುಕ್ಕಿ ಮತ್ತು ಮೈತೀಯ ಸಮುದಾಯಗಳ ನಡುವೆ ನಿರಂತರವಾಗಿ ನಡೆಯುತ್ತಿ ರುವ ಗಲಭೆಯನ್ನು ಅಲ್ಲಿನ ಸರಕಾರ ಜೀವಂತವಾಗಿ ಉಳಿಸಿ ರಾಜಕೀಯ ಲಾಭಪಡೆಯಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರ ಮೇಲೆ ನಡೆದ ಅಮಾನುಷ ಘಟನೆಯಿಂದಾಗಿ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದ ಅವರು ವಿಶ್ವದ ಮುಂದೆ ದೇಶದ ಮಾನ ಹರಾಜು ಆಗಿದೆ ಎಂದು ದೂರಿದರು.

ವಿಚಾರ ಸಂಕಿರಣದ ನಂತರ ಮಣಿಪುರ ಗಲಭೆ ಖಂಡಿಸಿ ಸಿದ್ದಾಪುರ ಪಟ್ಟಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಲಾಯಿತು. ಈ ಸಂದರ್ಭ ಪಕ್ಷದ ಎನ್.ಡಿ. ಕುಟ್ಟಪ್ಪನ್, ಹೆಚ್.ಬಿ.ರಮೇಶ್, ಮುಸ್ತಫ, ಕಾಂಗ್ರೆಸ್ ಮುಖಂಡ ಪಿ.ವಿ. ಜಾನ್ಸನ್, ಎಂ.ಎ. ಯಮುನಾ ಮುಂತಾದವರು ಹಾಜರಿದ್ದರು.