ವೀರಾಜಪೇಟೆ, ಆ. ೮: ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಇದರ ಅಂಗಸAಸ್ಥೆಗಳಾದ ವಿವೇಕ ಜಾಗೃತ ಬಳಗ ವೀರಾಜಪೇಟೆ ಮತ್ತು ಶ್ರೀಮಂಗಲ ಬಳಗದ ವತಿಯಿಂದ ತಾ.೧೨ರಂದು ಸಂಜೆ ೪ ರಿಂದ ೬ ಗಂಟೆಯವರೆಗೆ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಯೋಗ ಪರ್ಯಟನ ಕಾರ್ಯಕ್ರಮ ನಡೆಯಲಿದೆ ಎಂದು ಡಿವೈನ್ ಪಾರ್ಕ್ನ ಸಂಚಾಲಕ ಡಿ.ಎಸ್. ಯಶವಂತ್ ತಿಳಿಸಿದರು.
ಈ ಕುರಿತು ವೀರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಕಾವೇರಿ ಆಶ್ರಮದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಯಶವಂತ್, ಸಾಂಸಾರಿಕ ಭಿನ್ನಾಭಿಪ್ರಾಯಗಳು, ಯುವ ಜನತೆಯಲ್ಲಿ ನಡೆಯುವ ಸಂದಿಗ್ಧ ಪರಿಸ್ಥಿತಿಗಳು ಸೇರಿದಂತೆ ಸರ್ವ ಸಮಸ್ಯೆಗಳನ್ನು ಅಧ್ಯಾತ್ಮದ ಜಾಗೃತಿ ಮೂಡಿಸುವುದು ಮತ್ತು ಯೋಗದಿಂದ ಮಾತ್ರ ಉಪಶಮನ ಮಾಡಲು ಸಾಧ್ಯ. ವ್ಯಕ್ತಿತ್ವ ನಿರ್ಮಾಣ ಹಾಗೂ ಲೋಕೋದ್ವಾರದ ಪವಿತ್ರ ಗುರಿಯನ್ನು ಹೊಂದಿದ್ದು, ಎಲ್ಲರೂ ಸುಖ ಶಾಂತಿಯಿAದ ಜೀವನ ನಡೆಸುವಂತೆ ಮಾಡುವುದು ಸಂಸ್ಥೆಯ ಮುಖ್ಯ ಗುರಿ. ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಮತ್ತು ಪ್ರಕೃತಿ ಚಿಕಿತ್ಸೆ ಆಯುರ್ವೇದ ಆಸ್ಪತ್ರೆಯ ಎಂ.ಡಿ ಡಾ. ವಿವೇಕ ಉಡುಪ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.
ವಿವೇಕ ಜಾಗೃತ ಬಳಗ ಅಧ್ಯಕ್ಷೆ ಶಶಿಕಲಾ ಭಾಸ್ಕರ್ ಮಾತನಾಡಿ, ಅಧ್ಯಾತ್ಮದ ಬಗ್ಗೆ ಸರ್ವರಲ್ಲಿ ಒಲವು ಮೂಡಬೇಕು ಎನ್ನುವ ಸದುದ್ದೇಶದಿಂದ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಮಾನವೀಯ ಮೌಲ್ಯಗಳ ಬಗ್ಗೆ ಯೋಗ, ಪ್ರಕೃತಿ ಚಿಕಿತ್ಸೆ ಆಯುರ್ವೇದದಿಂದ ರೋಗ ಗುಣಮುಖಗೊಳಿಸುವುದು ಮನಶಾಂತಿ ಲಭಿಸಲು ಡಾ. ಗುರೂಜೀಯವರ ಸಂದೇಶವು ಕಾರ್ಯಕ್ರಮದಲ್ಲಿ ಮೂಡಿ ಬರಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷೆ ರೇಖಾ ಗಣೇಶ್, ಖಜಾಂಚಿ ಪುಷ್ಪ ಲೋಕೇಶ್ ಉಪಸ್ಥಿತರಿದ್ದರು.