ಕುಶಾಲನಗರ, ಆ. ೮: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಲಾಭವನಕ್ಕೆ ಶಾಸಕ ಡಾ. ಮಂಥರ್ ಗೌಡ ಭೇಟಿ ನೀಡಿ ಪರಿಶೀ ಲನೆ ನಡೆಸಿ ಸಂಬAಧಿಸಿದ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.
ಕಲಾಭವನಕ್ಕೆ ಭೇಟಿ ನೀಡಿದ ಶಾಸಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಬಾರ ಸಹಾಯಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು ಕಲಾಭ ವನ ಲೋಕಾರ್ಪಣೆಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರದ ಕೋಟಿಗಟ್ಟಲೆ ಹಣ ವ್ಯರ್ಥವಾಗಿದೆ. ಕಳೆದ ಹತ್ತು ವರ್ಷಕ್ಕಿಂತಲೂ ಅಧಿಕ ಅವಧಿಯಲ್ಲಿ ಈ ಕಟ್ಟಡ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿರುವ ಕಾರಣ ಬಯಸಿದರು.
ತಾನು ಅಧಿಕೃತ ಭೇಟಿ ಮಾಡುವ ಸಂದರ್ಭ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಹಾಜರಿರದೆ ಗೈರಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿ ಸಿದರು. ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಇಲ್ಲದಿದ್ದಲ್ಲಿ ವರ್ಗಾವಣೆ ತೆಗೆದುಕೊಂಡು ಹೋಗುವಂತೆ ಎಚ್ಚರಿಕೆ ಸೂಚಿಸಿದರು.
ಕಲಾಭವನ ಅನ್ನುವುದು ಕುಶಾಲನಗರದ ಸುತ್ತಮುತ್ತಲಿನ ಜನರ ಕನಸ್ಸು. ಇದರ ಕೆಲಸ ಶುರುವಾಗಿ ಹತ್ತಿರ ೧೨ ಸುದೀರ್ಘ ವರ್ಷಗಳಾಗಿವೆ. ಆದರೆ ಇನ್ನೂ ಲೋಕಾರ್ಪಣೆ ಆಗಿಲ್ಲ. ಈಗಾಗಲೇ ಸರ್ಕಾರದಿಂದ ಈ ಕಟ್ಟಡದ ಕಾಮಗಾರಿಗೆ ೩.೯೦ ಕೋಟಿ ರೂಪಾಯಿ ಹಣ ವೆಚ್ಚ ಮಾಡಿಯೂ ಪೂರ್ಣಗೊಳ್ಳದೆ ಇರುವುದು ಹಾಗೆಯೇ ಕಾಮಗಾರಿ ಮುಗಿಯುವ ಹಂತ ಬಂದರೂ ಸಹ ಇದನ್ನು ಸಂಪೂರ್ಣ ಮಾಡುವ ಮನಸ್ಸು ಸಂಬAಧಪಟ್ಟ ಇಲಾಖೆ ಆಗಲಿ ಅಧಿಕಾರಿಗಳಾಗಲಿ ಮಾಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿ ಸಿದರು.
ಇತ್ತೀಚೆಗೆ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು ಹಾಗೂ ಈ ಕಲಾಭವನದ ವಿಚಾರ ಮಡಿಕೇರಿ ಕ್ಷೇತ್ರದ ನೂತನ ಶಾಸಕ ಡಾ. ಮಂಥರ್ ಗೌಡ ಅವರ ಗಮನಕ್ಕೆ ಬಂದಿದ್ದು ಈ ಹಿನ್ನೆಲೆಯಲ್ಲಿ ಶಾಸಕರು ಮಂಗಳವಾರ ಕಲಾಭವ ನಕ್ಕೆ ಸ್ಥಳೀಯ ಮುಖಂಡರೊAದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಶಾಸಕರ ಅಧಿಕೃತ ಭೇಟಿಯ ಮಾಹಿತಿ ಇದ್ದರೂ ಸ್ಥಳಕ್ಕೆ ಸಂಬAಧಪಟ್ಟ ಇಲಾಖಾ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಶಾಸಕ ಡಾ.ಮಂಥರ್ ಗೌಡ ಗರಂ ಆದರು. ಕಲಾ ಭವನ ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿದಾಗ, ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕರು ಕೆಂಡಾಮAಡಲರಾದರು.
ಇದೇ ಸಂದರ್ಭ ಶಾಸಕರು ಕುಶಾಲನಗರ ಪುರಸಭೆಯ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮರ್ಪಕವಾಗಿ ಕಟ್ಟಡ ಕಾಮಗಾರಿ ನಡೆಸಿ ಲೋಕಾ ರ್ಪಣೆಗೊಳಿಸುವಂತೆ ಸೂಚನೆ ನೀಡಿದರು.