ಮಡಿಕೇರಿ, ಆ. ೮: ಅಂಡರ್ ೧೬ ಕೊಡಗು ಪುರುಷರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ.೧೨ ರಂದು ಮಡಿಕೇರಿ ಕೊಡಗು ವಿದ್ಯಾಲಯ ವಿದ್ಯಾಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆ ೮ ಗಂಟೆಯ ಬಳಿಕ ನಡೆಯಲಿದೆ.
ಮಂಗಳೂರು ವಲಯದಲ್ಲಿ ಮಂಗಳೂರು, ಉಡುಪಿ ಹಾಗೂ ಕೊಡಗು ತಂಡಗಳು ಭಾಗವಹಿಸಲಿದ್ದು, ಕೊಡಗು ತಂಡವನ್ನು ಪ್ರತಿನಿಧಿಸಲು ಈ ಆಯ್ಕೆ ಪ್ರಕ್ರಿಯೆ ಜರುಗಲಿದೆ. ೨೦೦೭ ಇಸವಿ ಸೆಪ್ಟೆಂಬರ್ ೧ ಹಾಗೂ ನಂತರದಲ್ಲಿ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ ೧೪ ವರ್ಷ ಕೆಳಗಿನವರು ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ. ಕ್ರೀಡಾಪಟುಗಳು ಬಿಳಿ ಜರ್ಸಿ ಹಾಗೂ ಜನನ ಪ್ರಮಾಣ ಪತ್ರದೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಿರಬೇಕಿದೆ ಎಂದು ಕೆ.ಎಸ್.ಸಿ.ಎ ಸಂಚಾಲಕ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದಾಮೋದರ್ ಗೌಡ ಅವರನ್ನು ಮೊ : ೯೯೪೫೨೭೩೬೮೮ ಸಂಪರ್ಕಿಸಬಹುದಾಗಿದೆ.