ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ನವದೆಹಲಿ, ಆ. ೮: ನಮ್ಮ ಸರ್ಕಾರ ವಿರುದ್ಧ ಪ್ರತಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯವು ಇಂಡಿಯಾ (I.ಓ.ಆ.I.ಂ) ಮೈತ್ರಿಕೂಟದಲ್ಲಿ ಪಕ್ಷಗಳ ನಡುವೆ ಪರಸ್ಪರ ಅಪನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ತಮ್ಮ ಪ್ರಸ್ತಾಪದೊಂದಿಗೆ ಯಾರು ಮತ್ತು ಯಾರು ಇಲ್ಲ ಎಂಬುದನ್ನು ಪರೀಕ್ಷಿಸಲು ಈ ಮೈತ್ರಿಕೂಟ ಮುಂದಾಗಿದೆ. ಅವರ ಮಧ್ಯೆಯೇ ಪರಸ್ಪರ ನಂಬಿಕೆಯಿಲ್ಲ ಎಂದು ಕಾಣಿಸುತ್ತಿದೆ ಎಂದಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷದ ಮೈತ್ರಿಯನ್ನು ‘ಘಮಾಂಡಿಯಾ' (ದುರಹಂಕಾರದಿAದ ಗುರುತಿಸಲಾಗಿದೆ) ಎಂದರು.

ಕೃಷಿ ಸಚಿವ ವಿರುದ್ಧ ಆರೋಪ ಸಿಐಡಿ ತನಿಖೆಗೆ

ಬೆಂಗಳೂರು, ಆ. ೮: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ವಿರುದ್ಧ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನಲಾದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ ಎಂದು ತಿಳಿದುಬಂದಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಮಂಡ್ಯದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದು, ಸುದೀರ್ಘ ಚರ್ಚೆ ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಅಮಿತ್ ಶಾ ಭೇಟಿಯಾದ ಬಸವರಾಜ ಬೊಮ್ಮಾಯಿ

ನವದೆಹಲಿ, ಆ. ೮: ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ನಡುವೆಯೇ, ಬಸವರಾಜ ಬೊಮ್ಮಾಯಿ ಅವರು ವರಿಷ್ಠರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ-ಡಿ.ಕೆ.ಶಿ.

ಬೆಂಗಳೂರು, ಆ. ೮: ಸರಿಯಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಯಾವ ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಎಂದೂ ನನಗೆ ಗೊತ್ತಿದೆ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಬ್ಲ್ಯಾಕ್ ಮೇಲ್‌ಗಳಿಗೆಲ್ಲ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ನಾನು ಯಾವುದೇ ಗುತ್ತಿಗೆದಾರರಿಗೆ ಉತ್ತರ ಕೊಡಲು ಹೋಗುವುದಿಲ್ಲ. ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕೀಯ ಗೊತ್ತಿದೆ. ಗುತ್ತಿಗೆದಾರರೂ ಗೊತ್ತಿದ್ದಾರೆ. ಅವರ ಹಿಂದೆ ಯಾರಿದ್ದಾರೆ, ಯಾರು ಇದನ್ನು ಹೇಳಿಸುತ್ತಿದ್ದಾರೆ ಎಂದೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಜಿನಿಯರಿAಗ್ ಕಾಲೇಜುಗಳ ಶುಲ್ಕ ಕಡಿತಕ್ಕೆ ನಿರ್ಧಾರ

ಬೆಂಗಳೂರು, ಆ. ೮: ರಾಜ್ಯದ ವಿವಿಧ ವಿಭಾಗಗಳ ಅಡಿಯಲ್ಲಿ ಇಂಜಿನಿ ಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳ ಶುಲ್ಕವನ್ನು ಉನ್ನತ ಶಿಕ್ಷಣ ಇಲಾಖೆ ಪರಿಷ್ಕರಿಸಿದೆ. ಶುಲ್ಕ ಹೆಚ್ಚಳವನ್ನು ಶೇ. ೧೦ ರಿಂದ ಶೇ. ೭ಕ್ಕೆ ಇಳಿಸ ಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಕಳೆದ ವಾರ ಘೋಷಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಸೀಟು ಹಂಚಿಕೆ ಯಾಗಿರುವ ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿAಗ್ ಕಾಲೇಜುಗಳ ನಡುವೆ ತಾ. ೬ ರಂದು ಹೊರಡಿಸಲಾದ ಹೊಸ ಒಮ್ಮತದ ಆದೇಶಕ್ಕೆ ಸಹಿ ಹಾಕಲಾಗಿದೆ.

ಯುಸಿಸಿ ಜಾರಿಗೆ ಕೇರಳ ವಿಧಾನಸಭೆ ವಿರೋಧ

ತಿರುವನಂತಪುರA, ಆ. ೮: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸದಂತೆ ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ. ಫೆಬ್ರವರಿಯಲ್ಲಿ ಮಿಜೋರಾಂ ವಿಧಾನಸಭೆಯು ಯುಸಿಸಿಯನ್ನು ದೇಶದಲ್ಲಿ ಜಾರಿಗೊಳಿಸುವ ಪ್ರತಿಯೊಂದು ಕ್ರಮವನ್ನು ವಿರೋಧಿಸುವ ಅಧಿಕೃತ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದೀಗ ಕೇರಳ ಸಹ ಇದನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ರಾಜ್ಯ ವಿಧಾನಸಭೆಯಲ್ಲಿ ಯುಸಿಸಿ ವಿರುದ್ಧ ನಿರ್ಣಯವನ್ನು ಮಂಡಿಸಿದರು.

ಪಾಕ್‌ನಲ್ಲಿ ನೆಲಬಾಂಬ್ ಸ್ಫೋಟ

ಇಸ್ಲಾಮಾಬಾದ್, ಆ. ೮: ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಯೂನಿಯನ್ ಕೌನ್ಸಿಲ್ ಮುಖ್ಯಸ್ಥ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ. ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ನೆಲಬಾಂಬ್ ಸ್ಫೋಟದಲ್ಲಿ ಯೂನಿಯನ್ ಕೌನ್ಸಿಲ್ (ಯುಸಿ) ಅಧ್ಯಕ್ಷ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಬಲ್ಗತಾರ್ ಪ್ರದೇಶದ ಚಕರ್ ಬಜಾರ್‌ಗೆ ಯುನಿಯನ್ ಕೌನ್ಸಿಲ್ ಮುಖ್ಯಸ್ಥ ಇಶ್ತಿಯಾಕ್ ಯಾಕೂಬ್ ಮತ್ತು ಇತರರು ಇದ್ದ ವಾಹನ ಬಂದು ನಿಲ್ಲುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ.

ಸರ್ಕಾರಿ ಬಂಗಲೆಯನ್ನು ಮರಳಿ ಪಡೆದ ರಾಹುಲ್

ನವದೆಹಲಿ, ಆ. ೮: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಅಧಿಕೃತ ಸರ್ಕಾರಿ ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ. ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಸೋಮವಾರ ರದ್ದುಪಡಿಸಲಾಗಿದ್ದು, ಅದಾದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯ ಲುಟೆನ್ಸ್ನಲ್ಲಿರುವ ನಂ. ೧೨, ತುಘಲಕ್ ಲೇನ್‌ನಲ್ಲಿನ ಸರ್ಕಾರಿ ಬಂಗಲೆಯನ್ನು ಲೋಕಸಭೆಯ ಸದನ ಸಮಿತಿಯು ರಾಹುಲ್ ಗಾಂಧಿ ಅವರಿಗೆ ನೀಡಿದೆ.

ಅಸ್ಸಾಂ ರೈಫಲ್ಸ್ ವಿರುದ್ಧ ಪ್ರಕರಣ ದಾಖಲಿಸಿದ ಮಣಿಪುರ ಪೊಲೀಸರು

ಇಂಫಾಲ, ಆ. ೮: ಮಣಿಪುರ ಪೊಲೀಸರು ಅಸ್ಸಾಂ ರೈಫಲ್ಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಳೆದ ವಾರ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾದ ಸಂದರ್ಭದಲ್ಲಿ ತಮ್ಮ ವಾಹನವನ್ನು ತಡೆದಿರುವ ಆರೋಪವನ್ನು ಅಸ್ಸಾಂ ರೈಫಲ್ಸ್ ವಿರುದ್ಧ ಮಣಿಪುರ ಪೊಲೀಸರು ಹೊರಿಸಿದ್ದಾರೆ. ಮಣಿಪುರ ಪೊಲೀಸರು ಎಫ್‌ಐಆರ್‌ನ್ನು ನ್ಯಾಯದ ಅಪಹಾಸ್ಯ ಎಂದು ಭದ್ರತಾ ಸಿಬ್ಬಂದಿಗಳು ಹೇಳಿದ್ದು, ಕುಕಿ ಮತ್ತು ಮೈಟೈ ಪ್ರದೇಶಗಳ ನಡುವಿನ ಬಫರ್ ವಲಯಗಳಲ್ಲಿ ಕಾಮಂಡ್ ಕೇಂದ್ರ ಕಚೇರಿ ನೀಡಿದ್ದ ಕರ್ತವ್ಯವನ್ನು ನಿರ್ವಹಿಸುತ್ತಿದ್ದುದ್ದಾಗಿ ಹೇಳಿದ್ದಾರೆ. ಆಗಸ್ಟ್ ೫ ರಂದು ಬಿಷ್ಣುಪುರ ಜಿಲ್ಲೆಯ ಕ್ವಾಕ್ತಾ ಗೋಥೋಲ್ ರಸ್ತೆಯಲ್ಲಿ ಅಸ್ಸಾಂ ರೈಫಲ್ಸ್ ಪೊಲೀಸ್ ವಾಹನಗಳನ್ನು ತಡೆದಿದೆ ಎಂದು ಪೊಲೀಸರು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

೨ನೇ ಹಂತದ ಭಾರತ್ ಜೋಡೊ ಯಾತ್ರೆ

ಮುಂಬೈ, ಆ. ೮: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಗುಜರಾತ್‌ನಿಂದ ಮೇಘಾಲಯದವರೆಗೆ ಎರಡನೇ ಹಂತದ ಭಾರತ್ ಜೋಡೊ ಯಾತ್ರೆ ನಡೆಸಲಿದ್ದಾರೆ ಎಂದು ಮಹಾರಾಷ್ಟç ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮಂಗಳವಾರ ಖಚಿತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದ ಭಾರತ್ ಜೋಡೊ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಈಗ ಎರಡನೇ ಹಂತದಲ್ಲಿ ಗುಜರಾತ್‌ನಿಂದ ಮೇಘಾಲಯಕ್ಕೆ ಯಾತ್ರೆ ಹಮ್ಮಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪೀಯೂಷ್ ಗೋಯಲ್ ವಿರುದ್ಧ ಹಕ್ಕುಚ್ಯುತಿ ಮಂಡನೆ

ನವದೆಹಲಿ, ಆ. ೮: ವಿರೋಧ ಪಕ್ಷಗಳ ಹಲವು ನಾಯಕರಿಂದ ಸದನ ನಾಯಕ ಪೀಯೂಷ್ ಗೋಯಲ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಹಾಗೂ ನಾಟಕೀಯ ಬೆಳವಣಿಗೆ ಬಳಿಕ ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್ ಅವರು ಕಲಾಪಕ್ಕೆ ಹಾಜರಾಗಲು ಅನುಮತಿ ನೀಡಿದ್ದಕ್ಕೆ ರಾಜ್ಯಸಭೆ ಮಂಗಳವಾರ ಸಾಕ್ಷಿಯಾಯಿತು. ವಿರೋಧ ಪಕ್ಷಗಳ ಸಂಸದರು ವಿಶ್ವಾಸದ್ರೋಹಿಗಳು ಎಂಬು ದಾಗಿ ಸದನ ನಾಯಕ ಪೀಯೂಷ್ ಗೋಯಲ್ ಟೀಕಿಸಿದ್ದಕ್ಕಾಗಿ, ಅವರ ವಿರುದ್ಧ ಸಭಾಪತಿ ಅವರಿಗೆ ಇಂಡಿಯಾ ಅಂಗಪಕ್ಷಗಳ ನಾಯಕರು ಹಕ್ಕುಚ್ಯುತಿ ನೋಟೀಸ್ ನೀಡಿದ್ದೇವೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ತಿಳಿಸಿದ್ದಾರೆ. ಅವರು ಸದನದಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.