ವೀರಾಜಪೇಟೆ, ಆ. ೮: ರೋಟರಿ ಶಾಲೆಯ ಮಕ್ಕಳಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಬಿ. ಮಾದಪ್ಪ ಅವರ ನೇತೃತ್ವದಲ್ಲಿ (ಈieಟಜ ಣo Pಟಚಿಣe) ಎಂಬ ಚಟುವಟಿಕೆಯನ್ನು ದೇವಣಗೇರಿ ಗ್ರಾಮದ ರೋಟೇರಿಯನ್ ಮುಕ್ಕಾಟಿರ ಸುನಿಲ್ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.
ಆರಂಭದಲ್ಲಿ ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಪ್ರಮೀಳ ಅವರು ಮಾಹಿತಿ ನೀಡುತ್ತಾ ಬೀಜವನ್ನು ರೈತರು ಹೇಗೆ ಬಿತ್ತನೆ ಮಾಡುತ್ತಾರೆ ಎಂಬುದನ್ನು ಮತ್ತು ಇದರಲ್ಲಿ ರೈತನ ಪ್ರಮುಖ ಪಾತ್ರಗಳನ್ನು ವಿವರಿಸಿದರು. ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ರೋಟರಿ ಶಾಲೆ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.