ಕೂಡಿಗೆ, ಆ. ೭ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಸಿಹಿ ಗೆಣಸು ಬೆಳೆಗೆ ಉತ್ತಮವಾದ ಬೆಲೆ ದೊರೆತ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ತಾಲೂಕು ವ್ಯಾಪ್ತಿಯ ನೂರಾರು ರೈತರು ಮಳೆ ಆಧಾರಿತ, ಮತ್ತು ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಸಿಹಿ ಗೆಣಸು ಬೆಳೆದಿದ್ದಾರೆ. ಬೆಳೆಯು ಇದೀಗ ಕಟಾವುವಿನ ಹಂತಕ್ಕೆ ಬಂದಿದ್ದು, ಬೆಲೆಯಲ್ಲಿ ಸ್ವಲ್ಪ ಏರಿಕೆ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಹರ್ಷ ಕಂಡುಬರುತ್ತದೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ವಾಣಿಜ್ಯ ಬೆಳೆಗಳ ಜೊತೆಯಲ್ಲಿ ಈ ಬಾರಿ ಸಿಹಿ ಗೆಣಸು ಬೆಳೆಯನ್ನು ತಾಲ್ಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಸಿದ್ದಲಿಂಗಪುರ, ಬಾಣವಾರ, ಸೀಗೆಹೊಸೂರು, ಭುವನಗಿರಿ, ಮಾದಲಾಪುರ ಹುದುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಉಪ ಗ್ರಾಮಗಳಲ್ಲಿಯೋ ಈ ಸಾಲಿನಲ್ಲಿ ಸಿಹಿ ಗೆಣಸು ಬೆಳೆಯನ್ನು ಬೆಳೆಯಲಾಗಿದೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸುವ ಬೆಳೆಯಾಗಿದ್ದ ಸಿಹಿ ಗೆಣಸಿನ ಬೆಲೆಯಲ್ಲಿ ಏರಿಕೆಯಾ ಗುತ್ತಿರುವುದರಿಂದ

(ಮೊದಲ ಪುಟದಿಂದ) ಹೆಚ್ಚು ಸಿಹಿ ಗೆಣಸು ಬೆಳೆಯನ್ನು ಬೆಳೆಯುವುದರಿಂದ ಹೈನುಗಾರಿಕೆಗೂ ಸಹಕಾರಿಯಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ಕೆ.ಜಿ. ಗೆ ಸಿಹಿ ಗೆಣಸಿನ ಬೆಲೆ ೨ ರೂ.ಗಳು ಇತ್ತು, ಅದರೆ ಈ ಸಾಲಿನಲ್ಲಿ ೮ ರೂ.ಗಳಿಗೆ ಬಂದು ನಿಂತಿದೆ. ಸಿಹಿ ಗೆಣಸು ಬೆಳೆಯು ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟç, ದೆಹಲಿ ರಾಜ್ಯಗಳಿಗೆ ಸಾಗಾಣಿಕೆಯಾಗುತ್ತಿರುವುದರಿಂದಾಗಿ ಬೆಲೆಯಲ್ಲಿ ಸಣ್ಣ ಪ್ರಮಾಣದ ಬೆಲೆ ಏರಿಕೆಯಾಗಿದೆ

ತಾಲೂಕು ವ್ಯಾಪ್ತಿಯ ರೈತರು ಕಳೆದ ಸಾಲಿನ ಮುಂಗಾರು ಬೆಳೆಯ ಕಟ್ಟಾವಿನ ನಂತರ ಮೂರು ತಿಂಗಳಲ್ಲಿ ಬರುವ ಸಿಹಿ ಗೆಣಸು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಕೆ.ಕೆ. ನಾಗರಾಜಶೆಟ್ಟಿ