ವೀರಾಜಪೇಟೆ, ಆ. ೭: ವೀರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಇಲ್ಲಿನ ದಿಡ್ಡಳ್ಳಿ(ಚೆನ್ನಂಗಿ ಬಸವನಹಳ್ಳಿ) ಯ ಗಿರಿಜನ ಆಶ್ರಮ ಶಾಲೆಯಲ್ಲಿ ಶೂ ವಿತರಣೆ ಕಾರ್ಯಕ್ರಮ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂರ‍್ರಾಷ್ಟಿçÃಯ ಕ್ರೀಡಾಪಟು ಮಾದಂಡ ತಿಮ್ಮಯ್ಯ ಅವರು ಹಾಡಿ ವಿದ್ಯಾರ್ಥಿಗಳಿಗೆ ದಾನ ನೀಡಿದ ಶೂಗಳನ್ನು ವಿತರಿಸಿದ ಬಳಿಕ ಮಾತನಾಡಿ, ಗಿರಿಜನ ಆಶ್ರಮ ಶಾಲೆಯಲ್ಲಿ ದೊರೆಯುವ ಸೌಲಭ್ಯ ಗಳನ್ನು ಸದುಪಯೋಗಪಡಿಸಿ ಕೊಂಡು ಗಿರಿಜನ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬಂದು ಉನ್ನತ ಅಧಿಕಾರಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿ ದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿಕೊಂಡಿದ್ದ ತಾಲೂಕು ಐಟಿಡಿಪಿ ಅಧಿಕಾರಿ ಗುರುಶಾಂತಪ್ಪ ಡಿ.ಜಿ ಅವರು ಮಾತನಾಡಿ, ೧೨೫ ವಿದ್ಯಾರ್ಥಿಗಳಿಗೆ ಶೂ ಹಾಗೂ ಉಡುಪುಗಳನ್ನು ವಿತರಿಸುವ ಮೂಲಕ ಘಟಕವು ಸೇವಾ ಮನೋಭಾವ ತೋರಿದೆ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಾಪುರ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್ ಕೆ.ಜಿ., ಹಾಡಿಯ ಮುಖಂಡರಾದ ಮುತ್ತಮ್ಮ ಜೆ.ಕೆ., ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಅರ್ಜುನ್ ಮೌರ್ಯ ಹಾಗೂ ಘಟಕದ ನಾಯಕರುಗಳಾದ ಭವನ್ ಬಿ.ಜೆ., ಸ್ನೇಹ ಪಿ.ಎಂ., ಸ್ನೇಹ ಎ.ಕೆ., ಬಿಬಿನ್ ವರ್ಗೀಸ್, ಗಾನವಿ ಕೆ.ಡಿ. ಸೇರಿದಂತೆ ಹಲವು ಎನ್‌ಎಸ್‌ಎಸ್ ಸ್ವಯಂ ಸೇವಾ ವಿದ್ಯಾರ್ಥಿಗಳು ಹಾಜರಿದ್ದರು.

ದಿಡ್ಡಳ್ಳಿ ಗಿರಿಜನ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯ ಶಿವಣ್ಣ ಎನ್.ಪಿ., ಶಿಕ್ಷಕರಾದ ಮೂರ್ತಿ ಹೆಚ್.ವಿ., ಲೋಹಿತ್ ಹೆಚ್.ಪಿ. ಇದ್ದರು.