ಗೋಣಿಕೊಪ್ಪಲು, ಆ.೮: ರೈತರು ತಮ್ಮ ಭೂಮಿಯ ಮಣ್ಣು ಪರೀಕ್ಷೆಯನ್ನು ನಿಗದಿತ ಸಮಯದಲ್ಲಿ ಮಾಡಿಸಿಕೊಳ್ಳುವುದರಿಂದ ಮಣ್ಣಿಗೆ ಬೇಕಾದ ಗೊಬ್ಬರ ನೀಡಬಹುದು ಇದರಿಂದ ರೈತರು ಬೆಳೆಯುವ ಬೆಳೆಗಳು ಉತ್ತಮ ಇಳುವರಿ ಪಡೆಯಲು ಅವಕಾಶವಾಗಲಿದೆ. ಈ ನಿಟ್ಟಿನಲ್ಲಿ ರೈತರು ಕಾಫಿ ಮಂಡಳಿಯೊAದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಮೂಲಕ ಮಣ್ಣು ಪರೀಕ್ಷೆ ಮಾಡಿಕೊಳ್ಳುವಂತೆ ಕಾಫಿ ಮಂಡಳಿಯ ಮಣ್ಣು ತಜ್ಞೆ ಪ್ರಫುಲ್ಲ ಕುಮಾರಿ ಕರೆ ನೀಡಿದರು.
ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ.ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಕಾಫಿ ಮಂಡಳಿಯಿAದ ಹಮ್ಮಿಕೊಳ್ಳಲಾಗಿದ್ದ ಬೆಳೆಗಾರರೊಂದಿಗಿನ ಕಾರ್ಯಗಾರದಲ್ಲಿ ಮಾತನಾಡಿದ ಇವರು ರೈತರ ಭೂಮಿಯ ಫಲವತ್ತತೆಯೂ ಬದಲಾವಣೆ ಅಗುತ್ತಿದೆ. ಇದನ್ನು ಪರೀಕ್ಷಿಸಿಕೊಂಡು ಫಲವತ್ತತೆಯನ್ನು ಹೆಚ್ಚಿಸಲು ಸುಣ್ಣ ಹಾಗೂ ಇತರ ಪೋಶಕಾಂಶವುಳ್ಳ ಗೊಬ್ಬರಗಳನ್ನು ಮಣ್ಣಿಗೆ ನೀಡುವುದರಿಂದ ರೈತರು ಬೆಳೆಯುವ ಬೆಳೆಗಳಿಂದ ಉತ್ತಮ ಇಳುವರಿ ಪಡೆಯಲು ಅನುಕೂಲವಾಗಲಿದೆ ಎಂದರು.
ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ಧನ್ಯ ಮಾತನಾಡಿ ರೈತರಿಗೆ ಹಾಗೂ ಬೆಳೆಗಾರರಿಗೆ ಮಂಡಳಿ ವತಿಯಿಂದ ವಿವಿಧ ಯೋಜನೆಗಳಲ್ಲಿ ಸಹಾಯಧನವು ಲಭ್ಯವಾಗಲಿದೆ. ಪ್ರಸ್ತುತ ತೆರೆದ ಬಾವಿ, ಹಾಗೂ ಕೆರೆ ನಿರ್ಮಾಣಕ್ಕೆ ಸಹಾಯಧನವು ಲಭ್ಯವಾಗಲಿದೆ. ಇದರ ಪ್ರಯೋಜನವನ್ನು ರೈತರು ನಿಗದಿತ ಸಮಯದ ಒಳಗೆ ಅರ್ಜಿ ನೊಂದಾಯಿಸಿ ಪ್ರಯೋಜನವನ್ನು ಪಡೆಯಬೇಕು. ಇದರೊಂದಿಗೆ ಇನ್ನಿತರ ಸವಲತ್ತುಗಳು ಕಾಫಿ ಮಂಡಳಿಯಿAದ ದೊರೆಯುತ್ತವೆ ಎಂದರು.
ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಶ್ರೀರಮಣ ಮಾತನಾಡಿ ರೈತರ ಏಳಿಗೆಗಾಗಿ ಕಾಫಿ ಮಂಡಳಿಯು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಹಾಯಧನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರೈತರು ಯೋಜನೆಯ ಪ್ರಯೋಜನ ಪಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳೆಗಾರರಾದ ಚೆಪ್ಪುಡೀರ ಎಂ.ಅಪ್ಪಯ್ಯ, ಕಾಫಿ ಮಂಡಳಿಯಿAದ ರೈತರು ಅನೇಕ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಧಿಕಾರಿಗಳು ರೈತರನ್ನು ಸಂಪರ್ಕಿಸಿ ಕಾಲಕಾಲಕ್ಕೆ ಬೇಕಾದ ಪ್ರಯೋಜನಗಳನ್ನು ನೀಡಬೇಕು. ರೈತರೊಂದಿಗೆ ಅಧಿಕಾರಿಗಳು ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಲ್ಲಿ ಯೋಜನೆಯ ಪ್ರಯೋಜನವನ್ನು ರೈತರಿಗೆ ತಲುಪಿಸಲು ಅನುಕೂಲವಾಗಲಿದೆ ಎಂದರು.
ಕಾಫಿ ಬೆಳೆಗಾರರಾದ ಸಣ್ಣುವಂಡ ರಮೇಶ್, ಕಾಳಪಂಡ ಸುಧೀರ್, ಟಿಪ್ಪು ಬಿದ್ದಪ್ಪ, ಲೋಕೇಶ್, ತೀತರಮಡ ಜಗದೀಶ್, ಎಸ್.ಎಸ್.ಸುರೇಶ್, ನಾಮೇರ ದೇವಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಕಾಫಿ ಮಂಡಳಿಯಿAದ ರೈತರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ಕಾಫಿ ಮಂಡಳಿ ವತಿಯಿಂದ ಹಿರಿಯ ಅಧಿಕಾರಿಗಳಿಗೆ ಕೊಡಗಿನ ರೈತರ ವಿಶೇಷವಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಲಿಖಿತವಾಗಿ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಸುತ್ತಮುತ್ತಲಿನ ಗ್ರಾಮದ ರೈತರು, ಬೆಳೆಗಾರರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಕಾಫಿ ಮಂಡಳಿಯ ಅಧಿಕಾರಿ ಧನ್ಯ ಸ್ವಾಗತಿಸಿ ವಂದಿಸಿದರು.