ನಾಪೋಕ್ಲು, ಆ. ೮: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಸಭೆಯನ್ನು ಶನಿವಾರ ನಡೆಸಲಾಯಿತು. ಹೋಬಳಿ ಅಧ್ಯಕ್ಷ ನೆರವಂಡ ಎಂ. ಉಮೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಶಾಲಾ-ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗಕ್ಕೆ ದೇಶಭಕ್ತಿ ಗೀತೆ, ಜಾನಪದ ಗೀತೆ ಹಾಗೂ ಭಾವಗೀತೆ ಸ್ಪರ್ಧೆಗಳನ್ನು ತಿಂಗಳ ಅಂತ್ಯದೊಳಗಾಗಿ ನಡೆಸುವಂತೆ ತೀರ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಘಟಕದ ಕಾರ್ಯದರ್ಶಿ ಯಾಗಿ ಪಿ.ವಿ ಪ್ರಭಾಕರ್, ಸಹ ಕಾರ್ಯದರ್ಶಿಯಾಗಿ ಉಮಾ ಪ್ರಭು, ಉಪಾಧ್ಯಕ್ಷರಾಗಿ ಪಿ.ಎನ್ ಬೊಳ್ಳಮ್ಮ, ಬಿ.ಎ ಪ್ರಮೀಳಾ ಹಾಗೂ ಎಂ.ಎ. ಮಾಚಮ್ಮ ಅವರನ್ನು ಆಯ್ಕೆ ಮಾಡಲಾಯಿತು. ಖಜಾಂಚಿಯಾಗಿ ಮನ್ಸೂರ್ ಆಲಿ, ಸಂಘಟನಾ ಕಾರ್ಯದರ್ಶಿಯಾಗಿ ದಯಾ ಚಿಣ್ಣಪ್ಪ, ಸಿ.ಹೆಚ್ ಅಹಮದ್ ಹಾಗೂ ಚೇನಂಡ ಗಿರೀಶ್ ಆಯ್ಕೆಯಾದರು. ವಿಶೇಷ ಆಹ್ವಾನಿತರಾಗಿ ಸಿ.ಎಸ್ ಸುರೇಶ್, ಎನ್.ಕೆ. ಮೆಹಬೂಬ್ ಸಾಬ್ ನಾಪೋಕ್ಲು ಘಟಕದ ಕಾರ್ಯದರ್ಶಿ ಯಾಗಿ ಪಿ.ವಿ ಪ್ರಭಾಕರ್, ಸಹ ಕಾರ್ಯದರ್ಶಿಯಾಗಿ ಉಮಾ ಪ್ರಭು, ಉಪಾಧ್ಯಕ್ಷರಾಗಿ ಪಿ.ಎನ್ ಬೊಳ್ಳಮ್ಮ, ಬಿ.ಎ ಪ್ರಮೀಳಾ ಹಾಗೂ ಎಂ.ಎ. ಮಾಚಮ್ಮ ಅವರನ್ನು ಆಯ್ಕೆ ಮಾಡಲಾಯಿತು. ಖಜಾಂಚಿಯಾಗಿ ಮನ್ಸೂರ್ ಆಲಿ, ಸಂಘಟನಾ ಕಾರ್ಯದರ್ಶಿಯಾಗಿ ದಯಾ ಚಿಣ್ಣಪ್ಪ, ಸಿ.ಹೆಚ್ ಅಹಮದ್ ಹಾಗೂ ಚೇನಂಡ ಗಿರೀಶ್ ಆಯ್ಕೆಯಾದರು. ವಿಶೇಷ ಆಹ್ವಾನಿತರಾಗಿ ಸಿ.ಎಸ್ ಸುರೇಶ್, ಎನ್.ಕೆ. ಮೆಹಬೂಬ್ ಸಾಬ್ ಬಾಳೆಯಡ ದಿವ್ಯ ಮಂದಪ್ಪ, ಎನ್.ಕೆ. ಪ್ರಭು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಐದು ಮಂದಿ ಕಸಾಪ ಸದಸ್ಯತ್ವವನ್ನು ಪಡೆದರು. ಸಭೆಯ ಜಾಲತಾಣದಲ್ಲಿ ಪ್ರಸಾರಪಡಿಸುವ ಜವಾಬ್ದಾರಿಯನ್ನು ಪರಿಷತ್ತಿನ ಸಾಮಾಜಿಕ ಜಾಲ ತಾಣದ ಅಡ್ಮಿನ್‌ಗಳಿಗೆ ವಹಿಸ ಲಾಯಿತು. ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲರು ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.