ಗೋಣಿಕೊಪ್ಪಲು, ಆ. ೮: ಮುಂದಿನ ೫ ವರ್ಷದ ಅವಧಿಯಲ್ಲಿ ನನ್ನ ಚಿಂತನೆ ಈ ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗೆ ಮೀಸಲಾಗಿರುತ್ತದೆ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ಗೋಣಿಕೊಪ್ಪಲುವಿನ ಇಗ್ಗುತ್ತಪ್ಪ ಕೊಡವ ಸಂಘದ ಸಭಾಂಗಣದಲ್ಲಿ ಇಗ್ಗುತ್ತಪ್ಪ ಕೊಡವ ಸಂಘ ಹಾಗೂ ಗೋಣಿಕೊಪ್ಪ ಕೊಡವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಚಿಂತನೆಯಲ್ಲಿ ಸಲಹೆ ಸೂಚನೆಗಳು ನಿರಂತರವಾಗಿರಲಿ ಎಂದು ಸಮುದಾಯ ಭಾಂದವರಿಗೆ ಭರವಸೆ ನೀಡಿದರು. ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಅಜ್ಜಿಕುಟ್ಟಿರ ಸಿ. ಪೂಣಚ್ಚ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಸ್ಥಾಪಕ ಸದಸ್ಯರಾದ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ಮಾತನಾಡಿ, ರಾಜಕೀಯವನ್ನು ಬದಿಗೊತ್ತಿ ಉತ್ತಮ ವ್ಯಕ್ತಿತ್ವವುಳ್ಳ ಪೊನ್ನಣ್ಣನ ವರೊಂದಿಗೆ ಸಮುದಾಯ ಬಾಂಧವರು ಸದಾ ನಿಲ್ಲುವಂತಾಗ ಬೇಕೆಂದರು. ಕೊಡವ ಸಮಾಜದ ಕಾರ್ಯದರ್ಶಿ ಸಣ್ಣುವಂಡ ವಿಶ್ವನಾಥ್ ಮಾತನಾಡಿ ಗೋಣಿಕೊಪ್ಪ ನಗರದಲ್ಲಿ ೫ ಎಕರೆ ವಿಸ್ತಿçÃರ್ಣದಲ್ಲಿ ಕೊಡವ ಸಮಾಜ ನಿರ್ಮಾಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ೭೫ ಲಕ್ಷ ಅನುದಾನ ವನ್ನು ನೀಡಿದ್ದಾರೆ. ದಾನಿಗಳ ಸಹಾಯದಿಂದ ೨ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಪೂರ್ಣ ಕಟ್ಟಡ ನಿರ್ಮಾಣಕ್ಕೆ ೭ ಕೋಟಿಯ ಯೋಜನೆ ಸಿದ್ದವಾಗಿದೆ. ಶಾಸಕರು ಮನವಿಯನ್ನು ಸ್ವೀಕರಿಸಿ ಅನುದಾನ ವನ್ನು ಮಂಜೂರು ಮಾಡಿಕೊಡುವ ಮೂಲಕ ಕೊಡವ ಸಮಾಜ ನಿರ್ಮಾಣಕ್ಕೆ ಸಹಕರಿಸು ವಂತೆ ಮನವಿ ಮಾಡಿದರು. ಕೊಡವ ಸಮಾಜದ ಮಾಜಿ ಅಧ್ಯಕ್ಷ ಹಿರಿಯರಾದ ಚೆಕ್ಕೆರ ಪಿ. ಸೋಮಯ್ಯ ಮಾತನಾಡಿ, ಕೊಡವ ಸಮಾಜಕ್ಕೆ ಜಾಗ ಮಂಜೂರಾತಿ ವೇಳೆ ಸಮಸ್ಯೆ ಎದುರಾದಾಗ ಎ.ಕೆ. ಸುಬ್ಬಯ್ಯನವರು ಸಹಾಯಕ್ಕೆ ನಿಲ್ಲುವ ಮೂಲಕ ೫ ಎಕರೆ ಜಾಗವು ಕೊಡವ ಸಮಾಜ ಹೆಸರಿಗೆ ಬರಲು ಸಾಧ್ಯವಾಗಿದೆ. ಇವರ ಸಹಾಯವನ್ನು ಸಮಾಜವು ಎಂದಿಗೂ ಮರೆಯಬಾರದು ಎಂದರು.
ಇಗ್ಗುತ್ತಪ್ಪ ಕೊಡವ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ದೇವಯ್ಯ ಮಾತನಾಡಿ ದಾನಿಗಳು ನೀಡಿದ ೭ ಸೆಂಟ್ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಿದ್ದೇವೆ. ಮೇಲಂತಸ್ತಿನ ಕಟ್ಟಡ ನಿರ್ಮಾಣ ಆಗಬೇಕಾಗಿದೆ ಅ ನಿಟ್ಟಿನಲ್ಲಿ ಶಾಸಕರು ಅನುದಾನವನ್ನು ಮಂಜೂರು ಮಾಡಿಕೊಡ ಬೇಕೆಂದರು. ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಸಿ.ಡಿ. ಮಾದಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜದ ಬಾಂಧವರು ಎಲ್ಲವನ್ನು ರಾಜಕೀಯವಾಗಿ ನೋಡದೆ ವ್ಯಕ್ತಿಯ ಗುಣಗಳಿಗೆ ಬೆಲೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಅಯ್ಯಣ್ಣ, ಚೋನಿರ ಸತ್ಯ, ಚೇಂದAಡ ಸುಮಿ ಸುಬ್ಬಯ್ಯ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.