ಗೋಣಿಕೊಪ್ಪ ವರದಿ, ಆ. ೭: ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಕಕ್ಕಡ ಪದಿನೆಟ್ಟ್ ಆಚರಣೆ ಭಾನುವಾರ ಆಚರಿಸಲಾಯಿತು. ಮದ್ದ್ಸೊಪ್ಪಿನ ವಿಶೇಷ ಖಾದ್ಯಗಳನ್ನು ಮಧ್ಯಾಹ್ನ ಭೋಜನವಾಗಿ ಸ್ವೀಕರಿಸಲಾಯಿತು.
ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ, ನಮ್ಮ ಹಬ್ಬಗಳೆಲ್ಲವೂ ಕೃಷಿ ಆಧಾರಿತವಾಗಿದ್ದು, ಯುವ ಸಮೂಹ ಕೃಷಿಯತ್ತ ತಮ್ಮ ಚಿತ್ತಹರಿಸಿ ಧನ್ಯ ಸಂಪತ್ತನ್ನು ವೃದ್ಧಿಸುವಂತಾಗಬೇಕಿದೆ. ದೇಶ ಆಹಾರ ಭದ್ರತೆಗೆ ಕೈಜೋಡಿಸಬೇಕಿದೆ. ನಮ್ಮ ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚAಡ ಕಟ್ಟಿಕಾವೇರಪ್ಪ, ನಿರ್ದೇಶಕರಾದ ಪಡಿಞರಂಡ ಪ್ರಭುಕುಮಾರ್, ಮೂರೀರ ಕುಶಾಲಪ್ಪ, ಕೊಂಗೆಪAಡ ರಘು, ಪಂದಿಕAಡ ಸುನಾ, ಮಲ್ಲಾಡ ಸುತಾ, ಮೂರೀರ ಶಾಂತಿ, ಪದಿಕಂಡ ನಾಗೇಶ್, ಪ್ರಮುಖರಾದ ಮೂರೀರ ಪಾರ್ವತಿ, ಮಲ್ಲಾಡ ಕಟ್ಟಿ ಪೂಣಚ್ಚ, ಪಡಿಞರಂಡ ಗೀತಾ, ಕವಿತಾ, ಕೊರಕುಟ್ಟೀರ ಯಶೋಧ ಭಾಗವಹಿಸಿದ್ದರು.