ಚೆಟ್ಟಳ್ಳಿ, ಆ. ೬: ಹವಾಮಾನ ವೈಪರಿತ್ಯದಿಂದ ಬೆಳೆಯ ಫಸಲು ನಷ್ಟವಾಗಿ ಈ ಬಾರಿ ರೈತರು ಸಂಕಷ್ಟ ಎದುರಿಸುತ್ತಿದ್ದು, ರೈತರ ಪರವಾಗಿ ಚೆಟ್ಟಳ್ಳಿ ಸಹಕಾರ ಸಂಘದ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದು ಸಾಲ ಮನ್ನಾಕೆ ಒತ್ತಾಯಿಸುವುದಾಗಿ ಚೆಟ್ಟಳ್ಳಿಯ ವಿಶ್ವ ಗುರು ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ನಡೆದ ಚೆಟ್ಟಳ್ಳಿ ವಿವಿಧ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೪೬ನೇ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿದರು.

ಪ್ರಸ್ತುತ ಸಂಘವು ೫೩.೪೨ ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ.೧೫ ಡಿವಿಡೆಂಡ್ ನೀಡಲಾಗುತ್ತಿದೆ. ರೂ. ೩.೫೦ ಲಕ್ಷ ಸಾಲ ಮನ್ನಾ ಹಾಗೂ ೩೧ ಲಕ್ಷ ಬಡ್ಡಿ ಮನ್ನಾದ ಹಣವು ಬಂದರೆ ಸಂಘವು ಇನ್ನಷ್ಟು ಲಾಭsÀಗಳಿಸಲಿದೆ ಎಂದರು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೂತನ ಎಲೆಕ್ಟಿçಕ್ ವಾಹನ ಚಾರ್ಜಿಂಗ್ ಪಾಯಿಂಟ್, ಸಂಘದ ಹಿಂಬದಿಯ ಜಾಗದಲ್ಲಿ ಬಡವರಿಗೆ ಅನುಕೂಲ ವಾಗುವ ಡಯಾಲಿಸಿಸ್ ಕೇಂದ್ರ ಹಾಗೂ ನೆಮ್ಮದಿ ಕೇಂದ್ರದ ಎಲ್ಲಾ ಸೌಲಭ್ಯವನ್ನು ಚೆಟ್ಟಳ್ಳಿ ಸಹಕಾರ ಸಂಘ ಮಾಡಲಿದೆ ಎಂದು ತಿಳಿಸಿದರು. ಚೆಟ್ಟಳ್ಳಿ ವ್ಯಾಪ್ತಿಯ ದೇವಾಲಯದ ಅಭಿವೃದ್ಧಿಗೆ, ಕೊಡವ ಹಾಗೂ ಗೌಡ ಸಮಾಜ, ಕುಟುಂಬದ ಕೈಮಡಗಳ ಅಭಿವೃದ್ಧಿಗೆ ಚೆಟ್ಟಳ್ಳಿ ಸಹಕಾರ ಸಂಘದಿAದ ತಲಾ ೫೦ ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು.

ಕಳೆದ ಮೂವತ್ತು ವರ್ಷಗಳಿಂದ ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಚೇರಿಯ ಜಾಗವು ಜಾಗ ನೀಡಿದವರ ಹೆಸರಿನಲಿದ್ದು, ಸಂಘದ ಹೆಸರಿಗೆ ಬಂದಿರಲಿಲ್ಲ. ಪರಿಶ್ರಮದ ಫಲವಾಗಿ ಸಂಘದ ಹೆಸರಿಗೆ ೧೦ ಸೆಂಟು ಜಾಗದ ದಾಖಲೆ ಮಾಡಲಾಗಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.

ಬೀಳ್ಕೊಡುಗೆ ಹಾಗೂ ಸನ್ಮಾನ: ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿ ಹೊಂದಿ ನಂತರದಲ್ಲಿ ಆಂತರಿಕ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸಿದ ಹೆಚ್.ಬಿ. ರಮೇಶ್ ಅವ ರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಹಿರಿಯ ಸಾಹಿತಿ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

೭ನೇ ತರಗತಿಯಿಂದ ಪದವಿ ಶಿಕ್ಷಣದವರೆಗೆ ಉತ್ತಮ ಅಂಕಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಿದರು.

ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಹಾಗೂ ಚೆಟ್ಟಳ್ಳಿ ಕೊಡವ ಸಮಾಜದ ನಿರ್ದೇಶಕ ಬಟ್ಟೀರ ರಕ್ಷÄ ಕಾಳಪ್ಪ ಮಾತನಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಕಣಜಾಲು ಕೆ. ಪೂವಯ್ಯ, ನಿರ್ದೇಶಕರಾದ ಪುತ್ತರಿರ ಎಂ. ಸೀತಮ್ಮ, ಕೊಂಗೇಟಿರ ವಾಣಿ ಕಾಳಪ್ಪ, ಬಟ್ಟೀರ ಕೆ. ಅಪ್ಪಣ್ಣ, ಪೇರಿಯನ. ಎಸ್. ಪೂರ್ಣಚ್ಚ, ಪುತ್ತರಿರ. ಪಿ. ನಂಜಪ್ಪ, ನೂಜಿಬೈಲು. ಡಿ. ನಾಣಯ್ಯ, ಅಡಿಕೇರ. ಈ. ಮುತ್ತಪ್ಪ, ಮರದಾಳು ಎಸ್. ಉಲ್ಲಾಸ, ಬಿ.ಎಂ. ಕಾಶಿ, ದನಂಜಯ. ಟಿ.ಎಸ್, ಶಾಂತಪ್ಪ. ಬಿ, ಬಿ.ಕೆ. ಸೀತಮ್ಮ, ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಚಿತ್ರವಲ್ಲಿ. ಕೆ.ಕೆ. ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಎಸ್. ಪ್ರಾರ್ಥಿಸಿ, ಬಲ್ಲಾರಂಡ ಮಣಿ ಉತ್ತಪ್ಪ ಸ್ವಾಗತಿಸಿ, ನಂದಿನಿ. ಕೆ.ಎಸ್ ವಂದಿಸಿದರು.