ವೀರಾಜಪೇಟೆ, ಆ. ೭: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ.೯ ರಂದು ಬುಧವಾರ ವೀರಾಜಪೇಟೆಯಲ್ಲಿ ನಡೆಯುವ ‘ಬೃಹತ್ ಪಂಜಿನ ಮೆರವಣಿಗೆ’ ಸಂಬAಧ ಸಂಜೆ ೫ ಗಂಟೆಯಿAದ ರಾತ್ರಿ ೮ ಗಂಟೆವರೆಗೆ ರಸ್ತೆ ಬದಿಯಲ್ಲಿ ವಾಹನಗಳ ನಿಲ್ಲಿಸುವದನ್ನು ನಿಷೇಧಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೯ ರಂದು ಹಮ್ಮಿಕೊಂಡಿರುವ ಬೃಹತ್ ಪಂಜಿನ ಮೆರವಣಿಗೆ ಅಂಗವಾಗಿ ಪೊಲೀಸ್ ಠಾಣಾ ಸಭಾಂಗಣದಲ್ಲಿ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಜಿನ ಮೆರವಣಿಗೆಯು ನಗರದ ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಸ್ಥಾನದಿಂದ ಹೊರಟು ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ, ಸುಣ್ಣದ ಬೀದಿ, ಗೋಣಿಕೊಪ್ಪ ರಸ್ತೆಯಿಂದ ಮಹಿಳಾ ಸಮಾಜದವರೆಗೆ ಸಾಗಲಿರುವುದರಿಂದ ಸಂಜೆ ೫ ರಿಂದ ೮ ಗಂಟೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ, ಸಾರ್ವಜನಿಕರು ಸಹಕರಿಸುವಂತೆ ಕೋರಿದರಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಮೆರವಣಿಗೆ ನಂತರ ಪಂಜುಗಳನ್ನು ಎಚ್ಚರದಿಂದ ಇಡಬೇಕು. ಬಳಿಕ ಸ್ಥಳೀಯ ಮಹಿಳಾ ಸಮಾಜದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾನೂನು ಸುವ್ಯವಸ್ಥೆಗೆ ಸಹಕರಿಸುವುದರೊಂದಿಗೆ ಪಾಲನೆ ಮಾಡುವಂತೆ ತಿಳಿಸಿದರಲ್ಲದೆ ಅನ್ಯ ಕೋಮಿನವರಿಗೆ ದಕ್ಕೆ ಬಾರದಂತೆ ಎಚ್ಚರವಹಿಸಬೇಕು ಎಂದರು.

ಶಾAತಿ ಸಭೆಯಲ್ಲಿ ನಗರ ಠಾಣಾಧಿಕಾರಿ ಶ್ರೀಧರ್, ಗ್ರಾಮಾಂತರ ಠಾಣೆಯ ಮಂಜುನಾಥ್, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಗಣೇಶ್ ಬಿಟ್ಟಂಗಾಲ, ಕಾರ್ಯಕರ್ತರಾದ ಪಿ.ವಿ. ವಿಶ್ವನಾಥ್, ಕಿಶೋರ್, ಅನೀಲ್ ಅಪ್ಪು, ದಿನೇಶ್ ನಾಯರ್, ಪ್ರದೀಪ್ ರೈ, ಸಭೆಯಲ್ಲಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಪುರಸಭೆ ಮಾಜಿ ಅಧ್ಯಕ್ಷ ಕೂತಂಡ ಸಚೀನ್, ಸ್ಥಳಿಯ ಮಸಿದಿಯ ಕಾರ್ಯದರ್ಶಿಗಳಾದ ಸೈನುದ್ದೀನ್, ಖಾಶಿಂ, ಜುನೈದ್, ಮುಂತಾದವರು ಉಪಸ್ಥಿತರಿದ್ದರು.