ಮಡಿಕೇರಿ, ಆ. ೭: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಸೀಮಾ ನಿರ್ಣಯ ಸಂಬAಧ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಇದೀಗ ಹೊಸ ಮಾರ್ಗಸೂಚಿ ಅನ್ವಯ ಆಯಾ ಕ್ಷೇತ್ರಗಳ ಗಡಿಯನ್ನು ಗುರುತಿಸಬೇಕು. ಕ್ಷೇತ್ರಗಳ ಗಡಿ ಗುರುತಿಸಿದ ಬಳಿಕ, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಪರಿಶೀಲಿಸಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಒಂದು ತಿಂಗಳ ಹಿಂದೆ ಚುನಾವಣೆ ಆಯೋಗವು ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿತ್ತು.
ಇದೀಗ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿಯನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ೨೦೨೧ ರಲ್ಲಿ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಅವಧಿ ಮುಕ್ತಾಯಗೊಂಡಿತ್ತು. ನಂತರ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ನೆಪವೊಡ್ಡಿ ಚುನಾವಣೆ ನಡೆಯಲಿಲ್ಲ.
ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಸಂಬAಧಿಸಿದ ವಿಷಯಗಳು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ ಚುನಾವಣಾ ಆಯೋಗದಿಂದ ಗಡಿ ನಿರ್ಣಯ ಹಾಗೂ ಮೀಸಲಾತಿ ನಿಗದಿಪಡಿಸುವ ಅಧಿಕಾರ ಕಿತ್ತುಕೊಂಡು, ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲಾಗಿತ್ತು. ಈ ಸಂಬAಧ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ನಡುವೆ ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆಯುತ್ತಿತ್ತು.
ಇದರಿಂದ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗೆ ಜನಪ್ರತಿನಿಧಿಗಳಿಲ್ಲದೆ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದೀಗ ಸೀಮಾ ನಿರ್ಣಯ ಆಯೋಗ ಕ್ಷೇತ್ರದ ಗಡಿ ಗುರುತಿಸಲು ಸೂಚನೆ ನೀಡಿರುವುದರಿಂದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿªಸಾಧ್ಯತೆಗಳಿವೆ. ಆದರೆ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳು ವಿರಳವಾಗಿವೆ.
ಹೈಕೋರ್ಟ್ನಲ್ಲಿ ರಿಟ್ ಅರ್ಜಿ
ಕೊಡಗು ಜಿಲ್ಲೆಯಲ್ಲಿ ಹಿಂದೆ ೨೯ ಏಕ ಸದಸ್ಯ ಕ್ಷೇತ್ರಗಳಿದ್ದು ಪ್ರಸ್ತುತ ಅಧಿಸೂಚನೆಯಲ್ಲಿ ೨೫ ಕ್ಷೇತ್ರಗಳಿಗೆ ಇಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ೨೦೧೧ ರ ಜನಗಣತಿಯನ್ನು ಪರಿಗಣಿಸಿರುವುದು ಸರಿಯಲ್ಲ.
ಕೊಡಗು ಜಿಲ್ಲಾ ಪಂಚಾಯಿತಿಗೆ ಸಂಬAಧಿಸಿದAತೆ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ ಸೆಕ್ಷನ್ ೧೬೦ ಅನ್ವಯ ಪ್ರತಿ ಕ್ಷೇತ್ರಕ್ಕೆ ೧೮ ಸಾವಿರ ಜನ ಸಂಖ್ಯೆ ಮಾನದಂಡವಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ೧೫ ಸಾವಿರವಿದ್ದು ಮತ್ತೆ ಕೆಲವು ಕ್ಷೇತ್ರಗಳಲ್ಲಿ ೨೩ ಸಾವಿರದಷ್ಟು ಇವೆ.
(ಚೆನ್ನಯ್ಯನ ಕೋಟೆ, ಶನಿವಾರಸಂತೆ ಕ್ಷೇತ್ರಗಳಲ್ಲಿ ೨೩ ಸಾವಿರಕ್ಕೂ ಅಧಿಕ ಮತದಾರರು ಇದ್ದರೆ, ವಾಲ್ನೂರು ತ್ಯಾಗತ್ತೂರು, ಹೆಬ್ಬಾಲೆ ಕ್ಷೇತ್ರಗಳಲ್ಲಿ ೧೫ ಸಾವಿರ ಜನಸಂಖ್ಯೆ ಇದೆ.
ಮಕ್ಕಂದೂರು ಕ್ಷೇತ್ರದ ಗಾಳಿಬೀಡು, ಹಮ್ಮಿಯಾಲ, ಕಾಲೂರು, ಮೊಣ್ಣಂಗೇರಿ, ಮಕ್ಕಂದೂರು, ಮುಕ್ಕೋಡ್ಲು, ಕಳಕೇರಿ ನಿಡುಗಣೆ, ಕರ್ಣಂಗೇರಿ, ಹೆಬ್ಬಟ್ಟಗೇರಿ, ಕಡಗದಾಳು, ಇಬ್ನಿವಳವಾಡಿ ಗ್ರಾಮಗಳು ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ ಮೇಕೇರಿ, ಬಿಳಿಗೇರಿ ಕ್ಷೇತ್ರಗಳು ವೀರಾಜಪೇಟೆ ಕ್ಷೇತ್ರದಲ್ಲಿವೆ.
ಕಾಂತೂರು-ಮೂರ್ನಾಡು ಕ್ಷೇತ್ರದ ಮರಗೋಡು, ಸೊಡ್ಲೂರು, ಕಟ್ಟೆಮಾಡು, ಅರೆಕಾಡು, ಹೊಸ್ಕೇರಿ, ಕಾಂತೂರು, ಕಿಗ್ಗಾಲು, ಎಂ. ಬಾಡಗ,
ಮುತ್ತಾರ್ಮುಡಿ ಗ್ರಾಮಗಳು ಮಡಿಕೇರಿ ಕ್ಷೇತ್ರದಲ್ಲಿದ್ದರೆ ಹಾಕತ್ತೂರು, ಕಗ್ಗೋಡ್ಲು ವೀರಾಜಪೇಟೆ ಕ್ಷೇತ್ರದಲ್ಲಿವೆ. ಕರ್ನಾಟಕ ಪಂಚಾಯತ್ ರಾಜ್ ಸೀಮಾ ಆಯೋಗದ ನಿಯಮಗಳಲ್ಲಿ ಕ್ಷೇತ್ರಕ್ಕೆ ಹೆಸರು ನೀಡುವಾಗ ಹೆಚ್ಚಿನ ಜನಸಂಖ್ಯೆ ಇರುವ ಪಂಚಾಯತ್ ಹೆಸರು ನಮೂದಿಸಿರಬೇಕು ಎಂಬ ಸ್ಪಷ್ಟ ಉಲ್ಲೇಖವಿದ್ದರೂ ಕಡಗದಾಳು ಹೆಸರಿನ ಬದಲಿಗೆ ಮಕ್ಕಂದೂರು ಕ್ಷೇತ್ರವೆಂದು, ಸಿದ್ದಾಪುರ ಹೆಸರಿನ ಬದಲಿಗೆ ಚೆನ್ನಯ್ಯನ ಕೋಟೆ ಹೆಸರು ನೀಡಲಾಗಿದೆ. ಸೀಮಾ ಗಡಿ ನಿರ್ಣಯ ಅಯೋಗದ ನಿಯಮಾನುಸಾರ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಸರಾಗವಾಗಿ ಇರಬೇಕು, ಜಲಾಶಯಗಳು, ಅರಣ್ಯಗಳು ಮಧ್ಯ ಬರದ ಹಾಗೆ ಗುರುತಿಸಬೇಕು ಎಂದು ನಿಯಮ ಇದ್ದರೂ ಸಂಪಾಜೆ ಕ್ಷೇತ್ರದ ಕೆ. ಪೆರಾಜೆಯಿಂದ ಕಾರುಗುಂದ ಗ್ರಾಮಕ್ಕೆ ಮಧ್ಯೆ ಸಂಪಾಜೆ ಮೀಸಲು ಅರಣ್ಯವಿದ್ದು ಸುಮಾರು ೬೦ ಕಿ.ಮೀ. ದೂರ ಕ್ರಮಿಸಬೇಕಿದೆ.
ನಿಯಮದಲ್ಲಿ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ವಿಭಜಿಸಬಾರದು ಎಂಬ ಉಲ್ಲೇಖವಿದ್ದರೂ ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮವನ್ನು ಹೊದ್ದೂರು ತಾಲೂಕು ಪಂಚಾಯಿತಿಗೆ ಸೇರಿಸಲಾಗಿದೆ.
ಈ ಕಾರಣಗಳಿಂದ ಸರ್ಕಾರ ೨-೧-೨೦೨೩ ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು (ಸಂಖ್ಯೆ: ಕಪಂರಾಸೀನಿಆ/೧೯/ ಸೀನಿಆ/ ೨೦೨೨) ರದ್ದುಪಡಿಸಿ ಹೊಸದಾಗಿ ನ್ಯೂನತೆ ರಹಿತವಾಗಿ ಕ್ಷೇತ್ರ ಸೀಮಾ ಗಡಿ ಮತ್ತು ಕ್ಷೇತ್ರಗಳನ್ನು ರಚಿಸಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯನ್ನು ಪುರಸ್ಕರಿಸಿದ ಘನ ನ್ಯಾಯಾಲಯ ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯ ಚುನಾವಣಾ ಆಯೋಗಕ್ಕೆ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾಯಿತ ಕ್ಷೇತ್ರಗಳ ಸೀಮಾ ಗಡಿ ನಿರ್ಣಯ ಕುರಿತು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ನಡಾವಳಿಯ ಶಿಫಾರಸ್ಸಿನ ಮೇರೆಗೆ ದಿನಾಂಕ ೨-೧-೨೦೨೩ ರಂದು ಹೊರಡಿಸಿರುವ ಅಧಿಸೂಚನೆ ನಿಯಮ ಬಾಹಿರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ನಿರ್ದೇಶನದ ಮೇರೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅವರು ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗ ಕ್ಷೇತ್ರದ ಗಡಿ ಗುರುತಿಸುವಲ್ಲಿ ಲೋಪವಾಗಿದ್ದು, ಇದರ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿತ್ತು. ಈಗ ಮರುರಚನೆ ಕಾರ್ಯ ಆಗುತ್ತಿದೆ. ಕೊಡಗು ಜಿಲ್ಲೆಗೆ ಜನಸಂಖ್ಯೆ ನಿಗದಿಪಡಿಸುವಾಗ ವಿಶೇಷ ವಿನಾಯಿತಿ ಹಿಂದೆ ಅಳವಡಿಕೆಯಾಗಿತ್ತು. ಈಗ ಆ ವಿನಾಯಿತಿಯನ್ನು ಕೈ ಬಿಟ್ಟಿದ್ದಾರೆ.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಂಬAಧಿಸಿದAತೆ ಜನಸಂಖ್ಯೆಯ ಮಿತಿಯನ್ನು ೧೫ ಸಾವಿರದ ಮಿತಿ ನಿಗದಿಪಡಿಸಬೇಕು. ೨೦೧೧ರ ಜನಗಣತಿಯನ್ನು ಆಧಾರವಾಗಿಸಿರುವುದು ಅವೈಜ್ಞಾನಿಕವಾಗಿದೆ. ೨೦೨೦ರ ನಂತರದ ಜನಗಣತಿಯ ಪರಿಗಣನೆ ಅವಶ್ಯಕವಾಗಿದೆ. ಕನಿಷ್ಟ ೩೦ ಕ್ಷೇತ್ರಗಳು ಜಿಲ್ಲೆಗೆ ಅನಿವಾರ್ಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹೇಳಿದ್ದಾರೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆೆ.
ಕೊಡಗಿನಲ್ಲಿ ಅದಲು ಬದಲಾಗಿದ್ದ ಕ್ಷೇತ್ರಗಳು
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜನವರಿ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಹಾಗೂ ಗಡಿಗಳನ್ನು ಗುರುತಿಸಿ ಆದೇಶ ಹೊರಡಿಸಲಾಗಿತ್ತು.
ಕೊಡಗು ಜಿಲ್ಲೆಯಲ್ಲಿ ೨೦೧೬ ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿತ್ತು.
ಆದರೆ ಜನವರಿಯಲ್ಲಿ ಹೊರಡಿಸಿದ ಕ್ಷೇತ್ರಗಳ ಪಟ್ಟಿಯಲ್ಲಿ ೪ ಕ್ಷೇತ್ರಗಳನ್ನು ಇಳಿಕೆ ಮಾಡಿ ೨೫ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಇಳಿಸಲಾಗಿತ್ತು. ಅದಲ್ಲದೇ ಕ್ಷೇತ್ರಗಳ ಗಡಿ ಪ್ರದೇಶಗಳು ಹಾಗೂ ಹೆಸರುಗಳು ಅದಲು ಬದಲಾಗಿತ್ತು.
ಕ್ಷೇತ್ರ ಪುನರ್ವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿ ಕೂಡಿದೆ ಎಂದು ಜಿಲ್ಲಾ ಕಾಂಗ್ರೆಸ್‌ನಿAದ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗಿತ್ತು.
ಇದೀಗ ಸೀಮಾ ನಿರ್ಣಯ ಆಯೋಗವು ೨೦೧೫ರ ಅಧಿಸೂಚನೆಯಲ್ಲಿ ಇದ್ದಂತೆ ಕ್ಷೇತ್ರಗಳ ಹೆಸರು ನಿಗದಿಪಡಿಸುವಂತೆ ಸೂಚನೆ ನೀಡಲಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಇರುವ ಗ್ರಾಮ ಹಾಗೂ ಐತಿಹಾಸಿಕ ಪ್ರದೇಶಗಳ ಹೆಸರಿನಲ್ಲಿ ಕ್ಷೇತ್ರಕ್ಕೆ ಹೆಸರು ನೀಡುವಂತೆ ಆದೇಶಿಸಲಾಗಿದೆ.
ಜನವರಿಯಲ್ಲಿ ಪ್ರಕಟಿಸಲಾಗಿದ್ದ ಕ್ಷೇತ್ರ ವಿಂಗಡಣೆ ಪಟ್ಟಿಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಳಪಡಿಸಲಾಗಿತ್ತು. ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ರಚನೆಯಾದಾಗ ಕುಶಾಲನಗರ ಪುರಸಭೆಗೆ ಸೇರಿಸಲಾಗಿತ್ತು.
ಸೀಮಾ ಗಡಿ ನಿರ್ಣಯ ಆಯೋಗವು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಕೂಡುಮಂಗಳೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಿತ್ತು. ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಯಾಗಿರುವ - ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಗೊಂಡಿರುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗದುಕೊಳ್ಳುವಂತೆ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದೀಗ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿರುವ ಆದೇಶದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತೀ ೨೧ ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಗುರುತಿಸುವಂತೆ ಸೂಚನೆ ನೀಡಲಾಗಿದೆ.
೨೦೧೧ರ ಜನಗಣತಿಯಂತೆ ಕ್ಷೇತ್ರ ಪುನರ್ವಿಂಗಡಣೆ ಮಾಡಲಾಗುತ್ತಿದೆ. ಇದಕ್ಕೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕ್ಷೇತ್ರಗಳ ಗಡಿ ಹಾಗೂ ಹೆಸರು ೨೦೧೬ರ ಚುನಾವಣೆಯಲ್ಲಿ ಇದ್ದಂತೆ ಇರುವ ನಿಯಮದಲ್ಲಿ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ವಿಭಜಿಸಬಾರದು ಎಂಬ ಉಲ್ಲೇಖವಿದ್ದರೂ ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮವನ್ನು ಹೊದ್ದೂರು ತಾಲೂಕು ಪಂಚಾಯಿತಿಗೆ ಸೇರಿಸಲಾಗಿದೆ.
ಈ ಕಾರಣಗಳಿಂದ ಸರ್ಕಾರ ೨-೧-೨೦೨೩ ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು (ಸಂಖ್ಯೆ: ಕಪಂರಾಸೀನಿಆ/೧೯/ ಸೀನಿಆ/ ೨೦೨೨) ರದ್ದುಪಡಿಸಿ ಹೊಸದಾಗಿ ನ್ಯೂನತೆ ರಹಿತವಾಗಿ ಕ್ಷೇತ್ರ ಸೀಮಾ ಗಡಿ ಮತ್ತು ಕ್ಷೇತ್ರಗಳನ್ನು ರಚಿಸಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯನ್ನು ಪುರಸ್ಕರಿಸಿದ ಘನ ನ್ಯಾಯಾಲಯ ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯ ಚುನಾವಣಾ ಆಯೋಗಕ್ಕೆ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾಯಿತ ಕ್ಷೇತ್ರಗಳ ಸೀಮಾ ಗಡಿ ನಿರ್ಣಯ ಕುರಿತು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ನಡಾವಳಿಯ ಶಿಫಾರಸ್ಸಿನ ಮೇರೆಗೆ ದಿನಾಂಕ ೨-೧-೨೦೨೩ ರಂದು ಹೊರಡಿಸಿರುವ ಅಧಿಸೂಚನೆ ನಿಯಮ ಬಾಹಿರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ನಿರ್ದೇಶನದ ಮೇರೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅವರು ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗ ಕ್ಷೇತ್ರದ ಗಡಿ ಗುರುತಿಸುವಲ್ಲಿ ಲೋಪವಾಗಿದ್ದು, ಇದರ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿತ್ತು. ಈಗ ಮರುರಚನೆ ಕಾರ್ಯ ಆಗುತ್ತಿದೆ. ಕೊಡಗು ಜಿಲ್ಲೆಗೆ ಜನಸಂಖ್ಯೆ ನಿಗದಿಪಡಿಸುವಾಗ ವಿಶೇಷ ವಿನಾಯಿತಿ ಹಿಂದೆ ಅಳವಡಿಕೆಯಾಗಿತ್ತು. ಈಗ ಆ ವಿನಾಯಿತಿಯನ್ನು ಕೈ ಬಿಟ್ಟಿದ್ದಾರೆ.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಂಬAಧಿಸಿದAತೆ ಜನಸಂಖ್ಯೆಯ ಮಿತಿಯನ್ನು ೧೫ ಸಾವಿರದ ಮಿತಿ ನಿಗದಿಪಡಿಸಬೇಕು. ೨೦೧೧ರ ಜನಗಣತಿಯನ್ನು ಆಧಾರವಾಗಿಸಿರುವುದು ಅವೈಜ್ಞಾನಿಕವಾಗಿದೆ. ೨೦೨೦ರ ನಂತರದ ಜನಗಣತಿಯ ಪರಿಗಣನೆ ಅವಶ್ಯಕವಾಗಿದೆ. ಕನಿಷ್ಟ ೩೦ ಕ್ಷೇತ್ರಗಳು ಜಿಲ್ಲೆಗೆ ಅನಿವಾರ್ಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹೇಳಿದ್ದಾರೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆ